ಚೊಚ್ಚಲ ಡಬ್ಲ್ಯೂಟಿಎ ಪ್ರಶಸ್ತಿ ಗೆದ್ದು ದಾಖಲೆ ಬರೆದ ಅಂಕಿತಾ ರೈನಾ

ನವದೆಹಲಿ: ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಚೊಚ್ಚಲ ಡಬ್ಲ್ಯೂಟಿಎ (ವಿಮೆನ್ಸ್ ಟೆನಿಸ್ ಅಸೋಸಿಯೇಶನ್) ಪ್ರಶಸ್ತಿ ಜಯಿಸಿದ್ದಾರೆ. ಫಿಲಿಪ್ಸ್ ಐಲ್ಯಾಂಡ್ ಟ್ರೋಫಿ ಟೂರ್ನಿಯ ಡಬಲ್ಸ್‌ನಲ್ಲಿ ಅಂಕಿತಾ ಮತ್ತು ರಷ್ಯಾದ ಕಮಿಲ್ಲಾ ರಾಖಿಮೋವಾ ಜೋಡಿಗೆ ಪ್ರಶಸ್ತಿ ಲಭಿಸಿದೆ.
ಡಬಲ್ಸ್ ಫೈನಲ್‌ನಲ್ಲಿ ಅಂಕಿತಾ ರೈನಾ ಮತ್ತು ಕಮಿಲ್ಲಾ ರಾಖಿಮೋವಾ ಜೋಡಿ ರಷ್ಯಾದ ಡಬಲ್ಸ್ ಜೋಡಿಯಾದ ಅನ್ನಾ ಬ್ಲಿಂಕೋವಾ ಮತ್ತು ಅನಸ್ತಾಸಿಯಾ ಪೊಟಪೋವಾ ಅವರನ್ನು 2-6, 6-4, 10-7ರ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಫಿಲಿಪ್ಸ್ ಐಲ್ಯಾಂಡ್ ಟ್ರೋಫಿ ಡಬಲ್ಸ್ ಪ್ರಶಸ್ತಿ ಗೆಲುವಿನೊಂದಿಗೆ ಅಂಕಿತಾ ಅವರು ಡಬಲ್ಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಸ್ಥಾನ ಪಡೆಯಲಿದ್ದಾರೆ. ಇದು ಅಂಕಿತಾ ಅವರ ವೃತ್ತಿ ಬದುಕಿನಲ್ಲಿ ಡಬಲ್ಸ್‌ನಲ್ಲಿನ ಅತ್ಯುತ್ತಮ ಸಾಧನೆ ಅನ್ನಿಸಲಿದೆ.
28ರ ಹರೆಯದ ಅಂಕಿತಾ, ವನಿತಾ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಸ್ಥಾನ ಪಡೆದ ಭಾರತದ ಎರಡನೇ ಆಟಗಾರ್ತಿಯೆಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಇದಕ್ಕೂ ಮುನ್ನ ಆರು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್ ವಿಜೇತೆ ಸಾನಿಯಾ ಮಿರ್ಝಾ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಕಾಣಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications