ಸ್ನೇಹಿತೆ ಮೆರ್ಟೆನ್ಸ್ ಮಣಿಸಿ ಲಿಂಝ್ ಓಪನ್ ಪ್ರಶಸ್ತಿ ಗೆದ್ದ ಸಬಲೆಂಕಾ

ವಿಯೆನ್ನಾ: ಆಸ್ಟ್ರಿಯಾದಲ್ಲಿ ಭಾನುವಾರ (ನವೆಂಬರ್ 15) ನಡೆದ ಲಿಂಝ್ ಓಪನ್ ಟೆನಿಸ್ ಟೂರ್ನಿಯಲ್ಲಿ ತನ್ನ ನೆಚ್ಚಿನ ಸ್ನೇಹಿತೆ, ದೀರ್ಘ ಕಾಲದ ಡಬಲ್ಸ್ ಜೊತೆಗಾತಿ ಎಲೈಸ್ ಮೆರ್ಟೆನ್ಸ್ ಅವರನ್ನು ಸೋಲಿಸಿರುವ ಆರ್ಯನಾ ಸಬಲೆಂಕಾ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ಆಟಗಾರ್ತಿ ಎಲೈಸ್ ಮೆರ್ಟೆನ್ಸ್ ಅವರನ್ನು ಬೆಲಾರಸ್ ಬಲಿಷ್ಠೆ ಆರ್ಯನಾ ಸಬಲೆಂಕಾ ಅವರು 7-5, 6-2ರ ನೇರ ಸೆಟ್‌ನಿಂದ ಸೋಲಿಸಿದರು. ಪಂದ್ಯದ ಆರಂಭದಲ್ಲೇ ಮುನ್ನಡೆ ಸಾಧಿಸಿದ ಆರ್ಯನಾ ಫಲಿತಾಂಶವನ್ನು ತನ್ನೆಡೆ ತಂದುಕೊಂಡರು.
ಈ ವರ್ಷ ಒಸ್ಟ್ರಾವಾ ಮತ್ತು ಕತಾರ್ ಪ್ರಶಸ್ತಿಗಳನ್ನು ಜಯಿಸಿರುವ ವಿಶ್ವ ನಂ.10ನೇ ಶ್ರೇಯಾಂಕಿತೆ ಆರ್ಯನಾ ಸಬಲೆಂಕಾ, ಎದುರಾಳಿ ಎಲೈಸ್ ಮೆರ್ಟೆನ್ಸ್‌ಗೆ ವಿಶ್ವಾಸ ಹೆಚ್ಚಿಸಿಕೊಳ್ಳಲು ಅವಕಾಶವೇ ನೀಡಲಿಲ್ಲ. ದ್ವಿತೀಯ ಸೆಟ್‌ನಲ್ಲೂ ಮೆರ್ಟೆನ್ಸ್‌ಗೆ ಚಾನ್ಸ್ ನೀಡಲಿಲ್ಲ.
ಪಂದ್ಯ ಗೆದ್ದ ಬಳಿಕ ಮೆರ್ಟೆನ್ಸ್ ಟ್ವೀಟ್ ಮಾಡಿದ್ದಾರೆ. 'ಸರಿ, ಈಗಲೂ ನಾವು ಸ್ನೇಹಿತೆಯರು. ಜೊತೆಗಾತಿ ಸಬಲೆಂಕಾಗೆ ಶುಭಾಶಯಗಳು,' ಎಂದು ಟ್ವೀಟಿನಲ್ಲಿ ಮೆರ್ಟೆನ್ಸ್ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications