ವಿಂಬಲ್ಡನ್: ಆಸ್ಟ್ರೇಲಿಯಾ ಪರ ಅಪರೂಪದ ದಾಖಲೆ ಬರೆದ ಆ್ಯಶ್ಲೀ ಬಾರ್ಟಿ

ಲಂಡನ್: ಬರೋಬ್ಬರಿ 41 ವರ್ಷಗಳಲ್ಲಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಆಸ್ಟ್ರೇಲಿಯಾದ ಮೊದಲ ಮಹಿಳೆಯಾಗಿ ಆ್ಯಶ್ಲೀ ಬಾರ್ಟಿ ಗುರುತಿಸಿಕೊಂಡಿದ್ದಾರೆ. ಗುರುವಾರ ನಡೆದ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜರ್ಮನಿಯ ಏಂಜೆಲಿಕ್ ಕೆರ್ಬರ್ ಸೋಲಿಸಿರುವ ಬಾರ್ಟಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಆ್ಯಶ್ಲೀ ಬಾರ್ಟಿ ಅವರು ಏಂಜೆಲಿಕ್ ಕೆರ್ಬರ್ ಅವರನ್ನು 6-3, 7-6(3)ರ ಅಂತರದಿಂದ ಸೋಲಿಸಿದ್ದಾರೆ. 25ರ ಹರೆಯದ ಬಾರ್ಟಿಗೂ ಮುನ್ನ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಪರ ಸ್ಪರ್ಧಿಸಿದ ದಾಖಲೆ ಇವಾನ್ನೆ ಗೂಲಾಗೊಂಗ್ ಹೆಸರಿನಲ್ಲಿದೆ.
ಒಟ್ಟು ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಇವಾನ್ನೆ ಗೂಲಾಗೊಂಗ್ 1980ರಲ್ಲಿ ಕೊನೇ ಬಾರಿ ವಿಂಬಲ್ಡನ್ ಫೈನಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅದಾಗಿ ಇದುವರೆಗೂ ವಿಂಬಲ್ಡನ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆಯರ್ಯಾರೂ ಸ್ಪರ್ಧಿಸಿರಲಿಲ್ಲ.
ಫೈನಲ್‌ನಲ್ಲಿ ಬಾರ್ಟಿ ಒಂದೋ ಝೆಕ್‌ನ ಕರೋಲಿನಾ ಪ್ಲಿಸ್ಕೋವಾ ಅಥವಾ ಬೆಲಾರಸ್‌ನ ಆರ್ಯನಾ ಸಬಲೆಂಕಾ ಅವರ ಸವಾಲು ಸ್ವೀಕರಿಸಲಿದ್ದಾರೆ. ಈ ಪಂದ್ಯ ಶನಿವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications