ಕ್ಯರೋಲಿನಾ ಪ್ಲಿಸ್ಕೋವಾ ಸೋಲಿಸಿ ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆದ್ದ ಆ್ಯಶ್ಲೇ ಬಾರ್ಟಿ

ಲಂಡನ್: ಆಸ್ಟ್ರೇಲಿಯಾದ ಸ್ಟಾರ್ ಟೆನಿಸ್ ಆಟಗಾರ್ತಿ ವಿಶ್ವ ನಂ.1 ಆ್ಯಶ್ಲೇ ಬಾರ್ಟಿ ಚೊಚ್ಚಲ ವಿಂಬಲ್ಡನ್ ಟ್ರೋಫಿ ಗೆದ್ದಿದ್ದಾರೆ. ಶನಿವಾರ (ಜುಲೈ 10) ನಡೆದ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಬಾರ್ಟಿ ಅವರು ಝೆಕ್ ಆಟಗಾರ್ತಿ ಕ್ಯರೋಲಿನಾ ಪ್ಲಿಸ್ಕೋವಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಲಂಡನ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆ್ಯಶ್ಲೇ ಬಾರ್ಟಿ ಅವರು ಪ್ಲಿಸ್ಕೋವಾ ವಿರುದ್ಧ 6-3, 6-7 (4), 6-3ರ ಅಂತರದಿಂದ ಗೆದ್ದರು. ಆರಂಭದಲ್ಲಿ ಪ್ಲಿಸ್ಕೋವಾ ಸುಲಭವಾಗಿ ಸೋಲುತ್ತಾರೆ ಅನ್ನಿಸಿತ್ತಾದರೂ ಪಂದ್ಯ ಮುಂದುವರಿದಂತೆ ರೋಚಕ ಹಂತಕ್ಕೆ ತಲುಪಿತ್ತು.
ಆರಂಭಿಕ ಸೆಟ್‌ನಲ್ಲಿ ಪ್ಲಿಸ್ಕೋವಾ ಸುಲಭವಾಗಿ ಸೋತರಾದರೂ ದ್ವಿತೀಯ ಸೆಟ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ಬಾರ್ಟಿಗೆ ಭರ್ಜರಿ ಪೈಪೋಟಿ ನೀಡಿದರು. ಪಂದ್ಯ 6-6ರಿಂದ ಸಮಬಲಗೊಂಡಾಗ ಟೈ ಬ್ರೇಕರ್ ನಡೆಸಲಾಯ್ತು. ಅದರಲ್ಲಿ ಪ್ಲಿಸ್ಕೋವಾ 7-4ರ ಗೆಲುವಿನೊಂದಿಗೆ ದ್ವಿತೀಯ ಸೆಟ್ ತನ್ನದಾಗಿಸಿಕೊಂಡರು.
ಅಂತಿಮ ಸೆಟ್ ಕೂಡ ರೋಚಕವೆನಿಸಿತ್ತು. ಆದರೆ ಬಾರ್ಟಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಸೆಟ್ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications