ಎಟಿಪಿ ಫೈನಲ್ಸ್: ಜ್ವೆರೆವ್ ಮಣಿಸಿದ ಜೊಕೋವಿಕ್ ಸೆಮಿಫೈನಲ್‌ಗೆ ಲಗ್ಗೆ

ಲಂಡನ್: ಲಂಡನ್‌ನಲ್ಲಿ ಶುಕ್ರವಾರ (ನವೆಂಬರ್ 20) ನಡೆದ ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್ (ಎಟಿಪಿ) ಫೈನಲ್ಸ್ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಮಣಿಸಿರುವ ಸರ್ಬಿಯಾದ ನೊವಾಕ್ ಜೊಕೋವಿಕ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಎದುರಾಳಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ನೊವಾಕ್ ಜೊಕೋವಿಕ್ ಅವರು 6-3, 7-6 (7/4)ರ ಅಂತರದಿಂದ ಹಿಮ್ಮೆಟ್ಟಿಸಿದರು. ಸೆಕೆಂಡ್ ರೌಂಡರ್ ರಾಬಿನ್ ಪಂದ್ಯದಲ್ಲಿ ರಷ್ಯಾ ಆಟಗಾರ ಡೇನಿಲ್ ಮೆಡ್ವೆಡೆವ್ ವಿರುದ್ಧ 6-3, 6-3ರ ಸೋಲು ಕಂಡಿದ್ದ ಜೊಕೋವಿಕ್ ಇಲ್ಲೂ ಆರಂಭದಲ್ಲಿ ಹಿನ್ನಡೆ ಅನುಭವಿಸಿದರಾದರೂ ಫಲಿತಾಂಶ ತನ್ನೆಡೆಗೆ ತಂದುಕೊಳ್ಳುವಲ್ಲಿ ಯಶಸ್ವಿಯಾದರು.
ಟೋಕಿಯೋ 2020ರಲ್ಲಿ ಗ್ರೂಪ್ ಹಂತದಲ್ಲಿ ಡೇನಿಲ್ ಮೆಡ್ವೆಡೆವ್ ನಂತರ 2ನೇ ಸ್ಥಾನದಲ್ಲಿ ಆಟ ಮುಗಿಸಿದ್ದ ಜೊಕೋವಿಕ್, ಭಾನುವಾರ (ನವೆಂಬರ್ 22) ನಡೆಯುವ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕಿತ ಆಸ್ಟ್ರಿಯನ್ ಬಲಿಷ್ಠ ಡೊಮಿನಿಕ್ ಥೀಮ್ ವಿರುದ್ಧ ಸ್ಪರ್ಧಿಸಲಿದ್ದಾರೆ.
Story first published: Saturday, November 21, 2020, 9:48 [IST]
Other articles published on Nov 21, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications