ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಶಾಕ್ ನೀಡಿದ 15ರ ಹುಡುಗಿ!

ಮೆಲ್ಬರ್ನ್, ಜನವರಿ 24: ಶ್ರೇಯಾಂಕಿತರಲ್ಲದ 15ರ ಹರೆಯದ ಕೋಕೋ ಗೌಫ್, ಆಸ್ಟ್ರೇಲಿಯನ್ ಓಪನ್ ಹಾಲಿ ಚಾಂಪಿಯನ್ ನವೋಮಿ ಒಸಾಕಾಗೆ ಆಘಾತ ನೀಡಿದ್ದಾರೆ. ಆಸ್ಟ್ರೇಲಿಯನ್ ಓಪನ್ 3ನೇ ಸುತ್ತಿನ ಪಂದ್ಯದಲ್ಲಿ ಒಸಾಕಾ ಅವರನ್ನು ಗೌಫ್ ನೇರ ಸೆಟ್‌ನಿಂದ ಸೋಲಿಸಿದ್ದಾರೆ.
ಶುಕ್ರವಾರ (ಜನವರಿ 24) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತೆ, ಜಪಾನ್ ಬಲಿಷ್ಠೆ ನವೋಮಿ ಒಸಾಕಾ ಅವರನ್ನು ಅಮೆರಿಕಾದ ಹದಿಹರೆಯದ ಆಟಗಾರ್ತಿ ಕೋಕೋ ಗೌಫ್ 6-3, 6-4ರ ಅಂತರದಿಂದ ಪಾರಾಭವಗೊಳಿಸಿದ್ದಾರೆ.
ಟೂರ್ನಿಯ ಅತೀ ಕಿರಿಯ ಆಟಗಾರ್ತಿಯೆನಿಸಿರುವ ಗೌಫ್ ಮುಂದಿನ ಸುತ್ತಿನಲ್ಲಿ 14ನೇ ಶ್ರೇಯಾಂಕಿತೆ, ಅಮೆರಿಕಾದ ಸೋಫಿಯಾ ಕೆನಿನ್ ಅಥವಾ ಚೀನಾದ ಜಾಂಗ್ ಶೂಯಿ ಎದುರು ಆಡಲಿದ್ದಾರೆ. ಇದಕ್ಕೂ ಮುನ್ನ ವಿಂಬಲ್ಡನ್‌ನಲ್ಲಿ ಸೆರೆನಾ ವಿಲಿಯಮ್ಸ್ ಸಹೋದರಿ ವೀನಸ್ ವಿಲಿಯಮ್ಸ್ ಮೊದಲನೇ ಸುತ್ತಿನಲ್ಲೇ ಸೋಲಿಸಿ ಗೌಫ್ ಗಮನ ಸೆಳೆದಿದ್ದರು.
Story first published: Friday, January 24, 2020, 17:51 [IST]
Other articles published on Jan 24, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications