Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಲ್‌ ಗರ್ಲ್‌ಗೆ ಮುತ್ತಿಕ್ಕಿದ ವಿಶ್ವ ನಂ.1 ರಾಫೆಲ್ ನಡಾಲ್: ವೈರಲ್ ವೀಡಿಯೋ

Rafael Nadal kisses a ball girl in between the match | Rafael Nadal | Kiss | Tesnnis
Australian Open 2020: Rafael Nadal accidentally hits ball girl

ಮೆಲ್ಬರ್ನ್, ಜನವರಿ 23: ವಿಶ್ವ ನಂ.1 ಟೆನಿಸ್ ಆಟಗಾರ, ಸ್ಪೇನ್‌ನ ರಾಫೆಲ್ ನಡಾಲ್ ಆಟದ ಮಧ್ಯೆ ಬಾಲ್‌ ಗರ್ಲ್‌ಗೆ ಮುತ್ತಿಕ್ಕಿದ ಅಪರೂಪದ ದೃಶ್ಯ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯದ ವೇಳೆ ಕಾಣಸಿಕ್ಕಿತು. ಗುರುವಾರ (ಜನವರಿ 23) ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ನಡಾಲ್ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ವರ್ಷದ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಂಡಿದ್ದ ರಾಫೆಲ್ ನಡಾಲ್, ಗುರುವಾರ ದ್ವಿತೀಯ ಸುತ್ತಿನ ಪಂದ್ಯಕ್ಕಾಗಿ ಅರ್ಜೆಂಟೀನಾದ ಫೆಡೆರಿಕೊ ಡೆಲ್ಬೊನಿಸ್ ಅವರನ್ನು ಎದುರುಗೊಂಡಿದ್ದರು. ಪಂದ್ಯವು ಮೆಲ್ಬರ್ನ್‌ನ ರಾಡ್ ಲೇವರ್ ಅರೇನಾದಲ್ಲಿ ನಡೆದಿತ್ತು.

ಫೆಡೆರಿಕೊ ಎದುರು ಅಂತಿಮ ಸೆಟ್‌ ಆಡುತ್ತಿದ್ದಾಗ ನಡಾಲ್ ಬ್ಯಾಟ್‌ ತಾಗಿದ ಚೆಂಡು, ನೆಟ್‌ ಸಮೀಪ ನಿಂತಿದ್ದ ಬಾಲ್ ಗರ್ಲ್ ತಲೆಗೆ ಬಡಿಯಿತು. ಆ ಕ್ಷಣ ಆಟ ನಿಲ್ಲಿಸಿ ಹುಡುಗಿ ಸಮೀಪಕ್ಕೆ ಬಂದ ನಡಾಲ್ ಏನಾಯಿತು ಎಂಬಂತೆ ಹುಡುಗಿಯನ್ನು ವಿಚಾರಿಸಿದರು. ಅಷ್ಟೇ ಅಲ್ಲ, ಬೊಂಬೆಯಂತಿದ್ದ ಹುಡುಗಿಯ ಕೆನ್ನೆಗೆ ಮುತ್ತಿಕ್ಕಿ, ಚೆಂಡು ಬಡಿದಿದ್ದಕ್ಕೆ ಕ್ಷಮೆಯಾಚಿಸಿ ಮತ್ತೆ ಆಟದಲ್ಲಿ ಮುಂದುವರೆದರು.

ವಿಶ್ವಶ್ರೇಷ್ಠ ಟೆನಿಸ್ ಆಟಗಾರ ಕೆನ್ನೆಗೆ ಮುತ್ತು ನೀಡಿದಾಗ ಅರೆ ಕ್ಷಣ ಅವಕ್ಕಾದ ಹುಡುಗಿ ಮರುಕ್ಷಣ ನಾಚಿ ಕೆಂಪಾದಳೂ ಕೂಡ. ಅಂದ್ಹಾಗೆ ಪಂದ್ಯದಲ್ಲಿ 6-3, 7-6, 6-1ರ ಸುಲಭ ಜಯ ಸಾಧಿಸಿರುವ ನಡಾಲ್ ಮೂರನೇ ಸುತ್ತಿನ ಸ್ಪರ್ಧೆಗೆ ಮುನ್ನಡೆ ಸಾಧಿಸಿದ್ದಾರೆ (ಮೇಲಿನ ವೀಡಿಯೋ ಇನ್ನೂ ಮಜವಾಗಿದೆ; ಖಂಡಿತಾ ನೋಡಿ).

Story first published: Thursday, January 23, 2020, 21:11 [IST]
Other articles published on Jan 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+