
ಆಸ್ಟ್ರೇಲಿಯನ್ ಓಪನ್ 2022ರ ಎರಡನೇ ಸೆಮಿಫೈನಲ್ ಪಂದ್ಯ ಕೂಡ ಅಂತ್ಯವಾಗಿದೆ. ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮಡ್ವಡೇವ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾನುವಾರ ನಡೆಯಲಿರುವ ಅಂತಮ ಹಣಾಹಣಿಯಲ್ಲಿ ರಾಫಲ್ ನಡಾಲ್ ವಿರುದ್ಧ ಮಡ್ವಡೇವ್ ಕಾದಾಡಲು ಸಜ್ಜಾಗಿದ್ದರೆ.
ಸುಮಾರು 3 ಗಂಟೆಗಳ ಕಾಲ ನಡೆದ ಭಾರೀ ಪೈಪೋಟಿಯ ಸ್ಪರ್ಧೆಯಲ್ಲಿ ಮಡ್ವಡೇವ್ ಎದುರಾಳಿ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಸೋಲಿಸಿದ್ದಾರೆ. 3ನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ಉತ್ತಮ ಆರಂಭವನ್ನು ಪಡೆದರು. ಆದರೆ 4-1 ಮುನ್ನಡೆಯಲ್ಲಿದ್ದ ಅವರು ನಂತರ ಟೈ ಬ್ರೇಕರ್ ಅನ್ನು ಕಳೆದುಕೊಂಡರು. ಹಾಗಿದ್ದರೂ ಎರಡನೇ ಸೆಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅವರು ಸಮಬಲಕ್ಕೆ ಮರಳಿದರು. ಆಟವು ಮುಂದುವರೆದಂತೆ ಫೈನಲ್‌ಗಾಗಿ ನಡೆದ ಸೆಣೆಸಾಟದಲ್ಲಿ ರಷ್ಯಾ ಮೂಲದ ಮಡ್ವಡೇವ್ ಅವರ ಹೋರಾಟದಿಂದ ಹಿನ್ನಡೆ ಅನುಭವಿಸಿದರು.
ಮೆಡ್ವೆಡೆವ್ 3ನೇ ಮತ್ತು 4ನೇ ಸೆಟ್‌ಗಳನ್ನು ಗೆದ್ದು ಆಸ್ಟ್ರೇಲಿಯನ್ ಓಪನ್‌ನ ಫೈನಲ್ ಫೈನಲ್ ಪ್ರವೇಶಿಸಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ 2 ಗಂಟೆ 30 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 7-6(5) 4-6 6-4 6-1 ರಲ್ಲಿ ಪಂದ್ಯವನ್ನು ಗೆದ್ದರು. ಆದರೆ ಈ ಬಾರಿ ಮಡ್ವಡೇವ್‌ಗೆ ನೊವಾಕ್ ಜೊಕೊವಿಕ್ ಎದುರಾಳಿಯಾಗಿಲ್ಲ. ಫೈನಲ್‌ನಲ್ಲಿ ಗೆಲುವು ಸಾಧಿಸಿದರೆ ಮೆಡ್ವೆಡೆವ್ ವಿಶ್ವದ ನಂ.1 ನೊವಾಕ್ ಜೊಕೊವಿಕ್ ಅವರನ್ನು ಆ ಸ್ಥಾನದಿಂದ ಕೆಳಕ್ಕಿಳಿಸಿ ತಾವು ಅಗ್ರ ಸ್ಥಾನಕ್ಕೇರಲಿದ್ದಾರೆ. ಈ ಬಾರಿಯ ಫೈನಲ್‌ನಲ್ಲಿ ಮಡ್ವಡೇವ್ ಫೈನಲ್‌ನಲ್ಲಿ ರಾಫಲ್ ನಡಾಲ್ ವಿರುದ್ಧ ಕಠಿಣ ಪರೀಕ್ಷೆ ಎದುರಿಸಲಿದ್ದಾರೆ.
ಇನ್ನು ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫಐನಲ್‌ನಲ್ಲಿ ರಾಫೆಲ್ ನಡಾಲ್ ಗೆಲುವು ಸಾಧಿಸಿ ಆಸ್ಟ್ರೇಲಿಯನ್ ಓಪನ್ 2022ರ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು. ಈ ಮೂಲಕ ತಮ್ಮ ಸ್ಪೇನ್‌ನ ಈ ಆಟಗಾರ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿಸಿದ್ದಾರೆ. ಈ ಗೆಲುವು ರಾಫೆಲ್ ನಡಾಲ್ ಅವರ ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್ ಕನಸು ಜೀವಂತವಾಗಿರಿಸಿದೆ. 35ರ ಹರೆಯದ ರಾಫೆಲ್ ನಡಾಲ್ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು 6-3, 6-2, 3-6, 6-3 ಅಂತರದಿಂದ ಮಣಿಸಿದ್ದಾರೆ.
ರಾಫೆಲ್ ನಡಾಲ್ ಸದ್ಯ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರೊಂದಿಗೆ 20 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದು ಸಮನಾಗಿದ್ದಾರೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ಉಳಿದ ಫೆಡರರ್ ಹಾಗೂ ಜೊಕೊವಿಕ್ ಭಾಗವಾಗದ ಕಾರಣ ನಡಾಲ್ 21 ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಮೊದಲ ಆಟಗಾರನೆನಿಸುವ ಅವಕಾಶವನ್ನು ಹೊಂದಿದ್ದಾರೆ.
ಇನ್ನು ಈ ಮಹತ್ವದ ದಾಖಲೆಯ ಜೊತೆಗೆ ಮತ್ತೊಂದು ಪ್ರಮುಖ ಸಾಧನೆ ಮಾಡುವ ಅವಕಾಶವೂ ರಾಫೆಲ್ ನಡಾಲ್‌ಗೆ ಇದೆ. ಜೊಕೊವಿಕ್, ರಾಯ್ ಎಮರ್ಸನ್ ಮತ್ತು ರಾಡ್ ಲೇವರ್ ನಂತರ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಕನಿಷ್ಠ ಎರಡು ಬಾರಿ ಗೆದ್ದ ನಾಲ್ಕನೇ ಆಟಗಾರ ಎನಿಸುವ ಅವಕಾಶವೂ ನಡಾಲ್‌ಗೆ ಇದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲ್ಯಾಮ್‌ಅನ್ನು ನಡಾಲ್ 2009ರಲ್ಲಿ ಕೊನೇಯ ಬಾರಿ ಗೆದ್ದಿದ್ದರು.