ಆಸ್ಟ್ರೇಲಿಯಾ ಓಪನ್: ಮೊದಲ ದಿನ ಗೆದ್ದು ಬೀಗಿದ ನಡಾಲ್, ಇಗಾ ಸ್ವಿಟೆಕ್, ಡ್ಯಾನಿಲ್ ಮಡ್ವೆಡೇವ್

ವರ್ಷದ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಭರ್ಜರಿಯಾಗಿ ಆರಂಭ ಪಡೆದುಕೊಂಡಿದೆ. ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಮತ್ತು ಕಳೆದ ವರ್ಷದ ಫೈನಲಿಸ್ಟ್ ಡೇನಿಯಲ್ ಮೆಡ್ವೆಡೆವ್ ಅವರು ತಮ್ಮ ಆಸ್ಟ್ರೇಲಿಯನ್ ಓಪನ್ 2023 ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಮಾರ್ಕೋಸ್ ಗಿರೋನ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್ ಭರ್ಜರಿ ಪ್ರದರ್ಶನದ ಮೂಲಕ ಗೆಲುವು ಸಾಧಿಸಿದರೆ ನಡಾಲ್ 4 ಸೆಟ್‌ಗಳಲ್ಲಿ ಜ್ಯಾಕ್ ಡ್ರೇಪರ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಯುನೈಟೆಡ್ ಕಪ್‌ನ ಚೊಚ್ಚಲ ಆವೃತ್ತಿಯಲ್ಲಿ ಕ್ಯಾಮರೂನ್ ನಾರ್ರಿ ಮತ್ತು ಅಲೆಕ್ಸ್ ಡಿ ಮಿನೌರ್ ವಿರುದ್ಧ ಸೋತ ನಂತರ ಹೊಸ ಆವೃತ್ತಿಯನ್ನು ಬಲಿಷ್ಠವಾಗಿ ಆರಂಭಿಸಿದ್ದಾರೆ ನಡಾಲ್. ಈ ಸೆನೆಸಾಟದಲ್ಲಿ ನಡಾಲ್ ಎರಡನೇ ಸೆಟ್ ಕಳೆದುಕೊಂಡರಾದರೂ ಬಳಿಕದ ಎರಡು ಸೆಟ್‌ಗಳನ್ನು ಕೂಡ ತಮ್ಮ ವಶಕ್ಕೆ ಪಡೆದುಕೊಳ್ಳುವ ಮೂಲಕ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ತನ್ನ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಜ್ಯಾಕ್ ಡ್ರೇಪರ್ 7-5, 2-6, 6-4, 6-1 ಸೆಟ್‌ಗಳ ಅಂತರದಿಂದ ಗೆದ್ದು 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಇನ್ನು ಮತ್ತೊಂದೆಡೆ ಮಾಜಿ ವಿಶ್ವ ನಂ.1 ಆಟಗಾರ ಡೇನಿಯಲ್ ಮೆಡ್ವೆಡೆವ್ ಭರ್ಜರಿ ಆರಂಭ ಪಡೆದುಕೊಂಡಿದ್ದಾರೆ. ಅವರು ಮಾರ್ಕೋಸ್ ಗಿರಾನ್ ಅವರನ್ನು ವಿರುದ್ಧದ ಪಂದ್ಯದಲ್ಲಿ 6-0, 6-1, 6-2 ಸೆಟ್‌ಗಳಿಂದ ಗೆಲುವು ಸಾಧಿಸಿದ್ದು 2ನೇ ಸುತ್ತಿಗೆ ಮುನ್ನಡೆದಿದ್ದಾರೆ.
ವಿಶ್ವದ ನಂಬರ್ ಒನ್ ಪಾಲಿಶ್ ಆಟಗಾರ್ತಿ ಇಗಾ ಸ್ವಿಟೆಕ್ ಎದುರಾಳಿ ಜೂಲ್ ನೀಮಿಯರ್ ವಿರುದ್ಧ ಕಠಿಣ ಪರೀಕ್ಷೆಯನ್ನು ಎದುರಿಸಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ 6-4, 7-5 ಅಂತರದಿಂದ ಜರ್ಮನ್ ಆಟಗಾರ್ತಿಯನ್ನು ಮಣಿಸಿದ್ದು 59 ನಿಮಿಷಗಳ ಕಾಲ ಈ ಪೈಪೋಟಿಯ ಸೆಣೆಸಾಟ ನಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications