ಆಸ್ಟ್ರೇಲಿಯಾ ಓಪನ್ 2019: ಫೈನಲ್‌ಗೆ ಲಗ್ಗೆಯಿಟ್ಟ ಸ್ಪೇನ್ ಬಲಿಷ್ಠ ನಡಾಲ್

ಮೆಲ್ಬರ್ನ್, ಜನವರಿ 24: ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ಸ್ಟಾರ್ ಆಟಗಾರ ರಾಫೆಲ್ ನಡಾಲ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಉದಯೋನ್ಮುಖ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಸೋಲಿಸುವ ಮೂಲಕ ನಡಾಲ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
ಗುರುವಾರ (ಜನವರಿ 24) ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್, ಗ್ರೀಕ್ ಯುವ ಆಟಗಾರ ಸಿಟ್ಸಿಪಾಸ್ ಅವರನ್ನು 6-2, 6-4, 6-0ರ ಅಂತರದಿಂದ ಸೋಲಿಸಿ ಅಂತಿಮ ಸುತ್ತಿಗೆ ಮುನ್ನಡೆ ಗಿಟ್ಟಿಸಿಕೊಂಡರು.
ರೋಜರ್ ಫೆಡರರ್ ಅವರನ್ನು ಟೂರ್ನಿಯಿಂದ ಹೊರಗಟ್ಟಿದ್ದ ಗ್ರೀಕ್ ಆಟಗಾರ ಸ್ಟೆಫಾನೋಸ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಇಬ್ಬರ ಮಧ್ಯೆ 1 ಗಂಟೆ 46 ನಿಮಿಷಗಳ ದೀರ್ಘ ಕಾಳಗ ನಡೆದಿದ್ದು ಇದಕ್ಕೆ ಸಾಕ್ಷಿ. ಅಂತೂ 17 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಜಯಿಸಿರುವ ಅನುಭವಿ ಆಟಗಾರ ನಡಾಲ್ ಮತ್ತೊಂದು ಹಿರಿಮೆಯನ್ನು ಮುಡಿಗೇರಿಸಿಕೊಳ್ಳುವುದರಲ್ಲಿದ್ದಾರೆ.
Story first published: Thursday, January 24, 2019, 19:23 [IST]
Other articles published on Jan 24, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications