ಆಸ್ಟ್ರೇಲಿಯನ್ ಓಪನ್: ನೊವಾಕ್ ಜೊಕೋವಿಕ್ ಸೆಮಿಫೈನಲ್‌ಗೆ ಪ್ರವೇಶ

ಮೆಲ್ಬರ್ನ್: ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.1 ಸರ್ಬಿಯನ್ ಆಟಗಾರ ಜೊಕೋವಿಕ್ ಅವರು ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.
ಮಂಗಳವಾರ (ಫೆಬ್ರವರಿ 16) ನಡೆದ ಪುರುಷರ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ನೊವಾಕ್ ಜೊಕೋವಿಕ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-7(6), 6-2, 6-4, 7-6(6)ರ ಅಂತರದಲ್ಲಿ ಮಣಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಬಲಿಷ್ಠರ ನಡುವಿನ ಕಾಳಗದಲ್ಲಿ ಆರಂಭಿಕ ಸೆಟ್ ಅನ್ನು ಹೋರಾಡಿಯೂ ಸೋತ ಜೊಕೋವಿಕ್ ಮುಂದಿನ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು. ಆ ಬಳಿಕ ಮೂರನೇ ಮತ್ತು ನಾಲ್ಕನೇ ಸೆಟ್‌ನಲ್ಲೂ ಇಬ್ಬರ ಮಧ್ಯೆ ಭಾರೀ ಹೋರಾಟ ನಡೆದಿದ್ದು ಕಂಡು ಬಂತು. ಅಂತಿಮವಾಗಿ ಜೊಕೋವಿಕ್ ಮೇಲುಗೈ ಸಾಧಿಸಿದರು.
ಜೊಕೋವಿಕ್ ಇದು 39ನೇ ಗ್ರ್ಯಾಂಡ್‌ಸ್ಲ್ಯಾಮ್ ಸೆಮಿಫೈನಲ್‌ಗೆ ಪ್ರವೇಶಿಸಿದಂತಾಗಿದೆ. ಸೆಮಿಫೈನಲ್‌ನಲ್ಲಿ ಜೊಕೋವಿಕ್ ಅವರು ರಷ್ಯಾ ಆಟಗಾರ ಅಸ್ಲಾನ್ ಕರಟ್ಸೆವ್ ಅವರ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications