ಆಸ್ಟ್ರೇಲಿಯಾ ಓಪನ್: ವಿಶ್ವ ನಂ.1 ಸಿಮೋನಾ ಎದುರು ಸೆರೆನಾ ಆರ್ಭಟ!

ಮೆಲ್ಬರ್ನ್, ಜನವರಿ 21: ಬರೋಬ್ಬರಿ 23 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ವಿಲಿಯಮ್ಸ್ ಅವರು ದಾಖಲೆಯ 24ನೇ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಮುನ್ಸೂಚನೆಯೆಂಬಂತೆ ಆಸ್ಟ್ರೇಲಿಯಾ ಓಪನ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಾಲೆಪ್ ಸೋಲಿಸಿರುವ ಸೆರೆನಾ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶಿಸಿದ್ದಾರೆ.
ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಅಮೆರಿಕಾ ಮಾಜಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ಅವರು ಹಾಲಿ ವಿಶ್ವ ನಂ.1 ಆಟಗಾರ್ತಿ, ರೋಮ್‌ನ ಸಿಮೋನಾ ಅವರನ್ನು 6-1, 4-6, 6-4ರ ಅಂತರದಿಂದ ಮಣಿಸಿದರು.
ಸೆರೆನಾ ಅವರು ಪುತ್ರಿ ಜೂನಿಯರ್ ಅಲೆಕ್ಸಿಸ್ ಒಲಂಪಿಯಾ ಓಹಿಯನ್‌ಗೆ ಜನ್ಮವಿತ್ತ ಬಳಿಕ ಸಹಜವಾಗೇ ಆಟದ ಪ್ರಖರತೆಯನ್ನು ಕಳೆದುಕೊಂಡಿದ್ದರು. 37ರ ಹರೆಯದ ಅನುಭವಿ ಆಟಗಾರ್ತಿ ವಿಲಿಯಮ್ಸ್, ಮಗುವಿಗೆ ಜನ್ಮ ಕೊಟ್ಟ ಬಳಿಕ ಆಟದ ಲಯಕ್ಕೆ ಮರಳಲು ಸಾಕಷ್ಟು ಕೊಸರಾಟ ನಡೆಸಿದ್ದರು. ಸೋಲೂ ಅನುಭವಿಸಿದ್ದರು. ಆದರೆ ಸೆರೆನಾ ಇದೀಗ ಮತ್ತೆ ಫಾರ್ಮ್‌ಗೆ ಮರಳುತ್ತಿದ್ದಾರೆ. (ರೋಚಕ ಪಂದ್ಯದ ವಿಡಿಯೋ ಮೇಲಿನ ಟ್ವೀಟ್‌ನಲ್ಲಿದೆ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications