ಬಾರ್ಸಿಲೋನಾ ಓಪನ್: 10ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ನಡಾಲ್
ಬಾರ್ಸಿಲೋನಾ, ಮೇ 01 : ಸ್ಪೇನ್ ನ ಸ್ಟಾರ್ ಟೆನಿಸ್ ಆಟಗಾರ ರಫೆಲ್ ನಡಾಲ್ ಬಾರ್ಸಿಲೋನಾ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ನಡಾಲ್ 6-4, 6-1ರಿಂದ ನೇರ ಸೆಟ್‌ಗಳಿಂದ ಆಸ್ಟ್ರಿಯಾದ ಡಾಮ್ನಿಕ್ ಥೀಮ್ ಅವರನ್ನು ಮಣಿಸಿದರು. ಈ ಮೂಲಕ ಹತ್ತನ್ನೇ ಬಾರಿಗೆ ಬಾರ್ಸಿಲೋನಾ ಓಪನ್ ಪ್ರಶಸ್ತಿ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಳೆದ ವಾರ ಮಾಂಟೆ ಕಾರ್ಲೊ ಮಾಸ್ಟರ್ಸ್ ನಲ್ಲಿ ಪ್ರಶಸ್ತಿ ಗೆದ್ದಿದ್ದ ನಡಾಲ್ ಮುಂಬರುವ ಫ್ರೆಂಚ್ ಓಪನ್‌ನಲ್ಲಿ ಕೂಡ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. 2005ರಿಂದ 2009 ಹಾಗೂ 2011ರಿಂದ 2013ರ ವರೆಗೆ ಹಾಗೂ ಈಗ 2016 ಮತ್ತು 2017ರಲ್ಲಿ ನಡಾಲ್ ಸತತವಾಗಿ ಇಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
14 ಬಾರಿ ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ನಡಾಲ್ ಎದುರು ಡಾ ಮಿನಿಕ್ ಮಂಕಾದಂತೆ ಆಡಿದರು. ಎರಡೂ ಸೆಟ್‌ಗಳಲ್ಲಿ ಆರಂಭದಿಂದಲೇ ಹಿನ್ನಡೆ ಅನುಭವಿಸಿದರು.
ಮೊದಲ ಸೆಟ್‌ನಲ್ಲಿ ತೋರಿದ ಚುರುಕಿನ ಆಟವನ್ನು ಎರಡನೇ ಸೆಟ್‌ನಲ್ಲಿ ತೋರದೆ ಸುಲಭವಾಗಿ ಸೋಲೊಪ್ಪಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications