Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾರ್ಸಿಲೋನಾ ಓಪನ್: ಕೀ ನಿಶಿಕೋರಿ ಸೋಲಿಸಿದ ರಾಫೆಲ್ ನಡಾಲ್

Barcelona Open: Rafael Nadal beats Nishikori in 3 sets

ಬಾರ್ಸಿಲೋನಾ: ಸ್ಪೇನ್ ಬಲಿಷ್ಠ ರಾಫೆಲ್ ನಡಾಲ್ ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಗುರುವಾರ (ಏಪ್ರಿಲ್ 22) ನಡೆದ ಪಂದ್ಯದಲ್ಲಿ ಜಪಾನ್ ಪ್ರಮುಖ ಆಟಗಾರ ಕೀ ನಿಶಿಕೋರಿ ಸೋಲಿಸಿರುವ ನಡಾಲ್ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಒಟ್ಟು 11 ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ರಾಫೆಲ್ ನಡಾಲ್, ಕೀ ನಿಶಿಕೋರಿ ವಿರುದ್ಧ 6-0, 2-6, 6-2ರ ಗೆಲುವು ದಾಖಲಿಸಿದ್ದಾರೆ. ಆರಂಭಿಕ ಸೆಟ್‌ನಲ್ಲಿ ನಡಾಲ್ ಸುಲಭ ಮೇಲುಗೈ ಸಾಧಿಸಿದರಾದರೂ ದ್ವಿತೀಯ ಸೆಟ್‌ನಲ್ಲಿ ನಿಶಿಕೋರಿ ಪೈಪೋಟಿಯೊಂದಿಗೆ ಸೆಟ್ ಗೆದ್ದುಕೊಂಡರು.

2014 ಮತ್ತು 2015ರ ಚಾಂಪಿಯನ್ ಆಗಿರುವ ನಿಶಿಕೋರಿ ವಿರುದ್ಧ ಗೆದ್ದಿರುವ ವಿಶ್ವ ನಂ.3 ಆಟಗಾರ ನಡಾಲ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್ ನಾರ್ರಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ನಡಾಲ್ ಒಟ್ಟು 20 ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಳೆದ ವಾರ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದ ನಡಾಲ್, ಬಾರ್ಸಿಲೋನಾ ಓಪನ್ ಆರಂಭಿಕ ಸುತ್ತಿನಲ್ಲಿ ಬೆಲಾರಸ್‌ನ ಇಲ್ಯಾ ಇವಾಶ್ಕಾ ವಿರುದ್ಧ ಗೆದ್ದಿದ್ದರು.

Story first published: Friday, April 23, 2021, 13:25 [IST]
Other articles published on Apr 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+