ಬೆಂಗಳೂರು ಓಪನ್: ಸುಮಿತ್ ನಗಾಲ್‌ಗೆ ಸೋಲು; ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ ಅನಿರುದ್ಧ-ಪ್ರಶಾಂತ್

ಬೆಂಗಳೂರು ಓಪನ್ 2023ರ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸುಮಿತ್ ನಾಗಲ್ ನಿರಾಸೆ ಅನುಭವಿಸಿದ್ದಾರೆ. ಮ್ಯಾಕ್ಸ್ ಪರ್ಸೆಲ್ ವಿರುದ್ಧ ನಡೆದ ಪಂದ್ಯದಲ್ಲಿ 4-6, 6-3, 6-3 ಸೆಟ್‌ಗಳಿಂದ ನಾಗಲ್ ಸೋಲು ಕಂಡಿದ್ದಾರೆ. ಆದರೆ ಡಬಲ್ಸ್‌ನಲ್ಲಿ ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್.ಪ್ರಶಾಂತ್ ಜೋಡಿ ಗೆಲುವಿನ ನಗು ಬೀರಿದ್ದಾರೆ.
ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್.ಪ್ರಶಾಂತ್ ಜೋಡಿ ಜಿಂಬಾಬ್ವೆಯ ಬೆಂಜಮಿನ್ ಲಾಕ್ ಮತ್ತು ಆಸ್ಪ್ರೇಲಿಯಾದ ಅಕಿರಾ ಸ್ಯಾಂಟಿಲನ್ ಅವರನ್ನು 3-6, 6-4, 12-10 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ಸ್ ತಲುಪಿದೆ.
ಹಿಂದಿನ ಸುತ್ತಿನಲ್ಲಿನಾಮ್ ಹೊವಾಂಗ್ ಲಿ ವಿರುದ್ಧ ಕಠಿಣ ಮೂರು ಸೆಟ್‌ಗಳ ಮೂಲಕ ಹೋರಾಟ ನಡೆಸಿ ಗೆದ್ದಿದ್ದ ನಾಗಲ್, ಮೊದಲ ಸೆಟ್‌ಅನ್ನು 6-4 ರಿಂದ ಗೆದ್ದುಕೊಂಡರು. ಭಾರತೀಯ ಆಟಗಾರ ಆಟದ ಎಲ್ಲಾ ಅಂಶಗಳಲ್ಲಿ ದೃಢವಾಗಿದ್ದರು ಮತ್ತು ಅವರು ತಮ್ಮ ಎರಡನೇ ಸರ್ವ್‌ನಲ್ಲಿ ಒಂದೇ ಒಂದು ಪಾಯಿಂಟ್‌ಅನ್ನೂ ಕಳೆದುಕೊಳ್ಳಲಿಲ್ಲ.
ಪರ್ಸೆಲ್ ತನ್ನ ಎರಡನೇ ಸರ್ವ್ ಅಂಕಗಳಲ್ಲಿಕೇವಲ 33 ಪ್ರತಿಶತವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಆದರೆ ಆಸ್ಪ್ರೇಲಿಯಾದ ಆಟಗಾರ ಎರಡನೇ ಸೆಟ್‌ನಲ್ಲಿತಮ್ಮ ಅನುಭವನನ್ನು ಉತ್ತಮವಾಗಿ ಬಳಸಿಕೊಂಡರು. ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಪರ್ಸೆಲ್, ತಮ್ಮ ಆಟವನ್ನು ಒಂದು ಹಂತಕ್ಕೆ ಏರಿಸಿದರು ಮತ್ತು ಕೆಲವು ತ್ವರಿತ ಅಂಕಗಳನ್ನು ಗಳಿಸಲು ಆಕರ್ಷಕ ಸರ್ವ್‌ಗಳನ್ನು ಬಳಸಿಕೊಂಡರು. ಎಂಟನೇ ಗೇಮ್ ನಲ್ಲಿ5-3ರ ಮುನ್ನಡೆ ಸಾಧಿಸಿದ ಅವರು, ಎರಡನೇ ಸೆಟ್‌ಅನ್ನು 6-3ರಿಂದ ಸುಲಭವಾಗಿ ಗೆದ್ದುಕೊಂಡು ತಿರುಗೇಟು ನೀಡಿದರು.
ಮೂರನೇ ಸೆಟ್ ಕೂಡ ಇದೇ ಮಾದರಿಯನ್ನು ಹೊಂದಿತು. ಏಕೆಂದರೆ ಇಬ್ಬರೂ ಆಟಗಾರರು 6ನೇ ಗೇಮ್‌ವರೆಗೆ ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡರು. ಆದಾಗ್ಯೂ, ಪರ್ಸೆಲ್ ತನ್ನ ದೊಡ್ಡ ಸರ್ವ್ ಗಳನ್ನು ಅಷ್ಟೇ ಶಕ್ತಿಯುತವಾದ ಗ್ರೌಂಡ್ ಶಾಟ್ ಗಳೊಂದಿಗೆ ಸಂಯೋಜಿಸಿದಾಗ ಪರ್ಸೆಲ್ ಮೇಲುಗೈ ಸಾಧಿಸಿದರು.
ಏಳನೇ ಗೇಮ್‌ನಲ್ಲಿ4-3ರ ಮುನ್ನಡೆ ಕಾಯ್ದುಕೊಂಡ ಪರ್ಸೆಲ್, ನಂತರ ಮುನ್ನಡೆಯನ್ನು 5-3ಕ್ಕೆ ವಿಸ್ತರಿಸಿದರು. ಪಂದ್ಯದಲ್ಲಿ ಉಳಿಯುವ ಒತ್ತಡದಲ್ಲಿ, ನಗಾಲ್ ಒಂಬತ್ತನೇ ಗೇಮ್‌ನಲ್ಲಿ ಕಷ್ಟಪಟ್ಟು ಹೋರಾಡಿದರು. ಆದರೆ ಪರ್ಸೆಲ್ ಸೆಟ್ ವಶಪಡಿಸಿಕೊಂಡು ಪಂದ್ಯವನ್ನು ಮುಕ್ತಾಯಗೊಳಿಸಿದರು.
ಇನ್ನು 5 ನೇ ಶ್ರೇಯಾಂಕದ ಲುಕಾ ನಾರ್ಡಿ ಮತ್ತು ಡಿಮಿಟರ್ ಕುಜ್ಮಾನೊವ್ ಕೂಡ ವ್ಯತಿರಿಕ್ತ ಗೆಲುವುಗಳೊಂದಿಗೆ ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು. ನಾರ್ಡಿ 7-5, 5-7, 6-2 ಅಂತರದಲ್ಲಿ ಜೇಸನ್ ಜಂಗ್ ವಿರುದ್ಧ ಜಯ ಗಳಿಸಿದರೆ, ಕುಜ್ಮಾನೊವ್ ಅಲಿಬೆಕ್ 6-3, 6-4 ಸೆಟ್‌ಗಳಿಂದ ಕಚ್ಮಾಜೋವ್ ಅವರನ್ನು ಸೋಲಿಸಿದರು.
ಫಲಿತಾಂಶಗಳು (ಸಿಂಗಲ್ಸ್, 16ನೇ ಸುತ್ತು)
ಮ್ಯಾಕ್ಸ್ ಪರ್ಸೆಲ್ ಅವರು ಸುಮಿತ್ ನಗಾಲ್ ಅವರನ್ನು 4-6, 6-3, 6-3 ಸೆಟ್ ಗಳಿಂದ ಸೋಲಿಸಿದರು. ಲುಕಾ ನಾರ್ಡಿ ಅವರು ಜೇಸನ್ ಜಂಗ್ ಅವರನ್ನು 7-5, 5-7, 6-2 ಸೆಟ್‌ಗಳಿಂದ ಮಣಿಸಿದರು. ಡಿಮಿಟರ್ ಕುಜ್ಮಾನೊವ್ (8) ಅವರು ಅಲಿಬೆಕ್ ಕಚ್ಮಾಜೋವ್ ಅವರನ್ನು 6-3, 6-4 ಸೆಟ್ ಗಳಿಂದ ಸೋಲಿಸಿದರು
ಫಲಿತಾಂಶಗಳು (ಡಬಲ್ಸ್, ಕ್ವಾರ್ಟರ್ ಫೈನಲ್)
ಅನಿರುದ್ಧ್ ಚಂದ್ರಶೇಖರ್ ಮತ್ತು ಎನ್.ಪ್ರಶಾಂತ್ 3-6, 6-4, 12-10 ರಲ್ಲಿಬೆಂಜಮಿನ್ ಲಾಕ್ ಮತ್ತು ಅಕಿರಾ ಶಾಂತಿಲನ್ ಅವರನ್ನು ಸೋಲಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications