Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆಂಗಳೂರು ಓಪನ್‌ 2023: ಡಬಲ್ಸ್‌ನಲ್ಲಿ ಭಾರತದ ಅನಿರುದ್ಧ್‌-ಪ್ರಶಾಂತ್‌ ಫೈನಲ್‌ ಪ್ರವೇಶ

Bengaluru Open: India’s Anirudh-Prashanth storm into in doubles final

ಬೆಂಗಳೂರು ಓಪನ್ 2023ರ ಡಬಲ್ಸ್‌ ವಿಭಾಗದಲ್ಲಿ ಭಾರತದ ಜೋಡಿಯಾದ ಅನಿರುದ್ಧ್‌ ಚಂದ್ರಶೇಖರ್‌ ಮತ್ತು ಎನ್‌ .ವಿಜಯ್‌ ಸುಂದರ್‌ ಪ್ರಶಾಂತ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. 7-6 (1), 4-6, 10-2 ಸೆಟ್‌ಗಳಿಂದ ನಾಲ್ಕನೇ ಶ್ರೇಯಾಂಕದ ಅರ್ಜುನ್‌ ಖಾಡೆ ಮತ್ತು ಮ್ಯಾಕ್ಸ್‌ ನ್ಯೂಕ್ರಿಸ್ಟ್‌ ಜೋಡಿಯನ್ನು ಮಣಿಸುವುದರ ಮೂಲಕ ಫೈನಲ್‌ಗೆ ಪ್ರವೇಶಿಸಿದೆ.

ಅನಿರುದ್ಧ್‌ ಮತ್ತು ಪ್ರಶಾಂತ್‌ ಮಾತ್ರ ಟೂರ್ನಿಯಲ್ಲಿಉಳಿದಿರುವ ಭಾರತೀಯರಾಗಿದ್ದು, ಗುರುವಾರ ಸುಮಿತ್‌ ನಗಾಲ್‌ ನಿರ್ಗಮಿಸುವುದರೊಂದಿಗೆ ದೇಶದ ಅಭಿಯಾನವು ಸಿಂಗಲ್ಸ್‌ನಲ್ಲಿ ಕೊನೆಗೊಂಡಿತು. ಇಂಡೋ-ಆಸ್ಟ್ರಿಯನ್‌ ಜೋಡಿಯ ವಿರುದ್ಧ ಮೂರು ಸೆಟ್‌ಗಳ ರೋಚಕ ಸೆಮಿಫೈನಲ್‌ನಲ್ಲಿಈ ಜೋಡಿ ಕಠಿಣ ಹೋರಾಟದ ಗೆಲುವು ದಾಖಲಿಸಿ ಶನಿವಾರ ನಡೆಯಲಿರುವ ಫೈನಲ್‌ಗೆ ವೇದಿಕೆ ಸಿದ್ದಪಡಿಸಿಕೊಂಡಿತು.

ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಬೆಂಗಳೂರಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಎಟಿಪಿ ಚಾಲೆಂಜರ್‌ ಪಂದ್ಯಾವಳಿಯನ್ನು ಆಯೋಜಿಸಿದೆ.

ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾದ ಹಮದ್‌ ಮೆಡ್ಜೆಡೊವಿಕ್‌ ಅವರು ತೈಪೆಯ ನಂ.1 ಶ್ರೇಯಾಂಕದ ಚುನ್‌-ಹ್ಸಿನ್‌ ತ್ಸೆಂಗ್‌ ಅವರನ್ನು ಪರಾಭವಗೊಳಿಸಿದರು. ಮೆಡ್ಜೆಡೊವಿಕ್‌ ತನ್ನ ಪವರ್‌-ಪ್ಯಾಕ್ಡ್‌ ಸರ್ವ್‌ ಮತ್ತು ಗ್ರೌಂಡ್‌ ಶಾಟ್‌ಗಳನ್ನು ಬಳಸಿಕೊಂಡು ತನ್ನ ಎದುರಾಳಿಯ ವಿರುದ್ಧ 6-1, 6-2 ಅಂತರದಲ್ಲಿಗೆಲುವು ಸಾಧಿಸಿದರು.

ಮೆಡ್ಜೆಡೊವಿಕ್‌ ಅವರ ಪ್ರಾಬಲ್ಯದ ವ್ಯಾಪ್ತಿಯು ಅವರು ಪಂದ್ಯದಲ್ಲಿಐದು ವಿರಾಮಗಳನ್ನು ಬೀರುವಲ್ಲಿ ಯಶಸ್ವಿಯಾದರು ಎಂಬ ಅಂಶದಿಂದ ಸ್ಪಷ್ಟವಾಗಿದೆ.

ಮೆಡ್ಜೆಡೊವಿಕ್‌ ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಮ್ಯಾಕ್ಸ್‌ ಪರ್ಸೆಲ್‌ ಅವರನ್ನು ಎದುರಿಸಲಿದ್ದಾರೆ. ವಿಂಬಲ್ಡನ್‌ನಲ್ಲಿಹಾಲಿ ಡಬಲ್ಸ್‌ ಚಾಂಪಿಯನ್‌ ಪರ್ಸೆಲ್‌ ಅವರು ಇಟಲಿಯ ಲುಕಾ ನಾರ್ಡಿ ಅವರನ್ನು 6-2, 6-0 ಸೆಟ್‌ಗಳಿಂದ ಸೋಲಿಸಿ ಉಪಾಂತ್ಯಕ್ಕೆ ಅರ್ಹತೆ ಗಳಿಸಿದ್ದಾರೆ.

ಇದಕ್ಕೂ ಮುನ್ನ ವಿಶ್ವದಲ್ಲಿ46ನೇ ಶ್ರೇಯಾಂಕದಲ್ಲಿದ್ದ ಆಸ್ಪ್ರೇಲಿಯಾದ ಜೇಮ್ಸ್ ಡಕ್ವರ್ತ್‌, ಬಲ್ಗೇರಿಯಾದ ಡಿಮಿಟರ್‌ ಕುಜ್ಮಾನೊವ್‌ ವಿರುದ್ಧ 6-4, 6-1 ಅಂತರದಲ್ಲಿ ಜಯ ಗಳಿಸಿ 4ರ ಘಟ್ಟ ಪ್ರವೇಶಿಸಿದರು.

ಅರ್ಹತಾ ಸುತ್ತಿನ ಮೂಲಕ ಟೂರ್ನಿ ಪ್ರವೇಶಿಸಿದ ಆಸ್ಪ್ರೇಲಿಯಾದ ಮತ್ತೊಬ್ಬ ಆಟಗಾರ ಜೇಮ್ಸ್ ಮೆಕ್‌ ಕ್ಯಾಬ್‌ 6-3, 7-6 (4) ಸೆಟ್‌ಗಳಿಂದ ಫ್ರಾನ್ಸ್‌ನ ಹೆರಾಲ್ಡ್ ಮಯೋಟ್‌ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

Story first published: Saturday, February 25, 2023, 8:28 [IST]
Other articles published on Feb 25, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+