ಬೆಂಗಳೂರು ಓಪನ್ ಗೆದ್ದ ತಮಿಳುನಾಡಿನ ಪ್ರಜ್ಞೇಶ್ ಗುಣೇಶ್ವರನ್
ಬೆಂಗಳೂರು, ನವೆಂಬರ್ 18: ತಮಿಳುನಾಡಿನ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.
ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಪ್ರಜ್ಞೇಶ್ ಅವರು ಭಾರತದ ನಂ.1 ಟೆನಿಸ್ ಪಟು ಎನಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಅಂತಿಮ ಹಣಾಹಣಿಯಲ್ಲಿ ಕೇವಲ 57 ನಿಮಿಷಗಳಲ್ಲಿ ಸಾಕೇತ್ ಮೈನೇನಿ ಅವರನ್ನು ನೇರ ಸೆಟ್ಗಳಿಂದ ಸೋಲಿಸಿದ ಪ್ರಜ್ಞೇಶ್, ಚೊಚ್ಚಲ ಪ್ರಶಸ್ತಿ ಗೆದ್ದರು.

ಕೆಎಸ್ಎಲ್ಟಿಎ ಕೋರ್ಟ್ನಲ್ಲಿ ನಡೆದ ಫೈನಲ್ನಲ್ಲಿ 4ನೇ ಶ್ರೇಯಾಂಕದ ಪ್ರಜ್ಞೇಶ್ ಅವರು 6-2, 6-2 ಸೆಟ್ಗಳಿಂದ ವೈಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದ ಸಾಕೇತ್ ಮೈನೇನಿರನ್ನು ಸೋಲಿಸಿದರು.
ಬೆಂಗಳೂರು ಓಪನ್ ಗೆಲುವಿನೊಂದಿಗೆ ಎಟಿಪಿ rankingನಲ್ಲಿ 144ನೇ ಸ್ಥಾನದಿಂದ 109ನೇ ಸ್ಥಾನಕ್ಕೇರಲಿದ್ದು, ಭಾರತದ ನಂ.1 ಆಟಗಾರ ಎನಿಸಲಿದ್ದಾರೆ. ವಿಜೇತ ಪ್ರಜ್ಞೇಶ್ ಗುಣೇಶ್ವರನ್ 15 ಲಕ್ಷ ರೂ. ಬಹುಮಾನ ಜಯಿಸಿದರೆ, ರನ್ನರ್ಅಪ್ ಸಾಕೇತ್ ಮೈನೇನಿ 9 ಲಕ್ಷ ರೂ. ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications