ರೋಜರ್ ಫೆಡರರ್ ವಿದಾಯದ ಪಂದ್ಯಕ್ಕೂ ಮುನ್ನ, ಬೆಂಕಿ ಹಚ್ಚಿಕೊಂಡ ಹವಾಮಾನ ವೈಪರೀತ್ಯ ಪ್ರತಿಭಟನಾಕಾರ

ರೋಜರ್ ಫೆಡರರ್ ಅಂತಿಮ ಪಂದ್ಯಕ್ಕೂ ಮುನ್ನ ಹವಾಮಾನ ಪ್ರತಿಭಟನಾಕಾರನೊಬ್ಬನು ಟೆನಿಸ್ ಕೋರ್ಟ್‌ನಲ್ಲೇ ಬೆಂಕಿ ಹಚ್ಚಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸೆಪ್ಟೆಂಬರ್ 23, ಶುಕ್ರವಾರದಂದು ನಡೆದ ಲೇವರ್ ಕಪ್ 2022ರಲ್ಲಿ ಡಬಲ್ಸ್ ಪಂದ್ಯಕ್ಕೂ ಮುನ್ನ ಟೆನಿಸ್ ಕೋರ್ಟ್‌ನಲ್ಲಿ ಹವಾಮಾನ ಪ್ರತಿಭಟನಾಕಾರ ಬೆಂಕಿ ಹಂಚಿದ್ದು, ಈ ವೇಳೆಯಲ್ಲಿ ಕೈಗೆ ಬೆಂಕಿ ಕೂಡ ತಗುಲಿದೆ.
ಲೆಜೆಂಡರಿ ಟೆನಿಸ್ ಆಟಗಾರ ರೋಜರ್ ಫೆಡರರ್ ತಮ್ಮ ಕೊನೆಯ ಪಂದ್ಯದಲ್ಲಿ ಸೋತ ನಂತರ ಟೆನಿಸ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಪಂದ್ಯ ಮುಗಿದ ಬಳಿಕ ಕಣ್ಣೀರಿಟ್ಟಿದ್ದು, ರಾಫೆಲ್ ನಡಾಲ್, ಜೊಕೊವಿಕ್ ಆ್ಯಂಡಿ ಮರ್ರೆ ಸೇರಿದಂತೆ ಪ್ರಮುಖ ಟೆನಿಸ್ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ರು.

ಇಂಗ್ಲೆಂಡ್‌ನಲ್ಲಿ ಖಾಸಗಿ ಜೆಟ್ ಬಳಕೆಗೆ ವಿರೋಧ
ಪ್ರತಿಭಟನಾಕಾರನೊಬ್ಬನು ಲಂಡನ್ Q2 ಅರೆನಾದಲ್ಲಿರುವ ಟೆನಿಸ್ ಕೋರ್ಟ್ ಮಧ್ಯಭಾಗಕ್ಕೆ ತೆರಳಿದ್ದಲ್ಲದೆ ಬ್ರಿಟನ್‌ನಲ್ಲಿ ಖಾಸಗಿ ಜೆಟ್ಸ್‌ಗಳನ್ನು ಬಳಕೆ ಮಾಡುವುದನ್ನ ವಿರೋಧಿಸಿ ತನ್ನ ಕೈಗೆ ಬೆಂಕಿ ಹಂಚಿಕೊಂಡಿದ್ದಾನೆ. ಫೆಡರರ್-ನಡಾಲ್ ಡಬಲ್ಸ್ ಪಂದ್ಯದ ಮೊದಲು ಸ್ಟೆಫಾನೊಸ್ ಸಿಟ್ಸಿಪಾಸ್ ಮತ್ತು ಡಿಯೊಗೊ ಶ್ವಾರ್ಟ್ಜ್‌ಮನ್ ನಡುವೆ ಸಿಂಗಲ್ಸ್ ಪಂದ್ಯ ನಡೆಯಿತು. ಪ್ರತಿಭಟನಾಕಾರ ಎಂಟ್ರಿಯಿಂದಾಗಿ ಕೆಲಕಾಲ ಪಂದ್ಯ ಸ್ಥಗಿತಗೊಂಡಿತು.
ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾ
ಕೈಗೆ ಬೆಂಕಿ ಹಚ್ಚಿಕೊಂಡ ಪ್ರತಿಭಟನಾಕಾರ
ಬ್ರಿಟನ್ ಮಾಧ್ಯಮಗಳ ಪ್ರಕಾರ ಯುವಕ ಸರ್ವೀಸ್ ಬಾಕ್ಸ್ ನಲ್ಲಿ ಕುಳಿತು ಆಟ ವೀಕ್ಷಿಸುತ್ತಿದ್ದ. ನಂತರ ಅವನು ತನ್ನ ತೋಳಿನ ಮೇಲೆ ಸುಡುವ ದ್ರವವನ್ನು ಸುರಿಯುತ್ತಾನೆ. ನಂತರ ಲೈಟರ್‌ನಿಂದ ತನ್ನ ಕೈಯಿಂದ ಬೆಂಕಿಯನ್ನು ಹೊತ್ತಿಸಿದನು. ನಂತರ ಪ್ರತಿಭಟನಾಕಾರರು ಕೈ ಬೀಸಿ ಬೆಂಕಿ ನಂದಿಸಿದರು. ಆಗ ಆ ದ್ರವದ ಭಾಗ ಕೋರ್ಟ್‌ನ ಮೇಲೆ ಬಿದ್ದಿತು, ಅದಕ್ಕೂ ಸ್ವಲ್ಪ ಬೆಂಕಿ ತಗುಲಿತು. ಭದ್ರತಾ ಸಿಬ್ಬಂದಿ ತನ್ನ ಜಾಕೆಟ್ ತೆಗೆದು ಬೆಂಕಿ ನಂದಿಸಿದರು. ಟೆನಿಸ್ ಮೈದಾನದಲ್ಲಿನ ಭದ್ರತಾ ಸಿಬ್ಬಂದಿ ಕೂಡಲೇ ಧಾವಿಸಿ ಬೆಂಕಿ ನಂದಿಸಿದ್ದಲ್ಲದೆ, ಆತನನ್ನು ಕೋರ್ಟ್‌ನಿಂದ ಹೊರಗೆ ಎತ್ತಿಕೊಂಡು ಹೋದರು. ನಂತರದಲ್ಲಿ ಟೆನಿಸ್ ಕೋರ್ಟ್ ಅನ್ನು ಪರೀಕ್ಷಿಸಿದ ಬಳಿಕ ಪಂದ್ಯ ಮುಂದುವರಿಯಿತು. ಸಿಟ್ಸಿಪಾಸ್ 6-2, 6-1 ಸೆಟ್‌ಗಳಿಂದ ಶ್ವಾರ್ಟ್ಜ್‌ಮನ್‌ರನ್ನು ಸೋಲಿಸಿದರು. ಬಳಿಕ ಪ್ರತಿಭಟನಾಕಾರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.
ಆತನನ್ನು ಓಪನಿಂಗ್ ಮಾಡಲು ಹೇಳಿದೆ, ಆದ್ರೆ ಸೆಂಚುರಿಯೇ ಸಿಡಿಸಿಬಿಟ್ಟ ಎಂದ ದಿಲೀಪ್ ವೆಂಗಸರ್ಕಾರ್
ಯಾರು ಈ ಹವಾಮಾನ ವೈಪರಿತ್ಯ ಪ್ರತಿಭಟನಾಕಾರ?
ರಾಯಿಟರ್ಸ್ ಉಲ್ಲೇಖಿಸಿದ ಬ್ರಿಟಿಷ್ ಮಾಧ್ಯಮದ ಪ್ರಕಾರ ಪ್ರತಿಭಟನಾಕಾರರು ಎಂಡ್ ಯುಕೆ ಪ್ರೈವೇಟ್ ಜೆಟ್ಸ್ ಗುಂಪಿನ ಸದಸ್ಯರಾಗಿದ್ದರು. ಈ ಗುಂಪು "2022 ರಲ್ಲಿ ಇಂಗಾಲದ ಹೊರಸೂಸುವಿಕೆಯು ನರಮೇಧ" ಎಂದು ಯೂರೋಪ್‌ನ ಹಲವೆಡೆ ವಿರೋಧಿಸುತ್ತಾ ಪ್ರತಿಭಟನೆ ನಡೆಸುತ್ತಿದೆ.
ಯುಕೆಯಲ್ಲಿ ಖಾಸಗಿ ಜೆಟ್‌ಗಳ ಬಳಕೆ ಹೆಚ್ಚುತ್ತಿದೆ. ಇದನ್ನು ಮುಚ್ಚುವಂತೆ ಒತ್ತಾಯಿಸಿ ಈ ಪರಿಸರ ಸಂಘಟನೆಯ ಸದಸ್ಯರು ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಅಲೆ ಲೇವರ್ ಕಪ್‌ಗೆ ಅಪ್ಪಳಿಸಿದೆ. ಅವರ ಈ ಕೃತ್ಯದಿಂದಾಗಿ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಟೆನಿಸ್ ಕೋರ್ಟ್ ಅನ್ನು ರದ್ದುಗೊಳಿಸಿದ ನಂತರ, ಆಟ ಪ್ರಾರಂಭವಾಯಿತು, ಆ ಬಳಿಕ ಆಟ ನಡೆಸಲು ಯಾವುದೇ ತೊಂದರೆಯಾಗಲಿಲ್ಲ.
ತನ್ನ ವೃತ್ತಿ ಜೀವನದ ಅಂತಿಮ ಪಂದ್ಯವನ್ನಾಡಿದ ರೋಜರ್ ಫೆಡರರ್ ರಾಫೆಲ್ ನಡಾಲ್ ಜೊತೆಗೆ ಆಡಿದರು. ಡಬಲ್ಸ್ ಪಂದ್ಯದಲ್ಲಿ ಟೀಮ್ ವರ್ಲ್ಡ್‌ನ ಜಾಕ್ವೆಸ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ ಜೋಡಿ ಸೋತಿದೆ. ಅವರು ಸೆಂಟರ್ ಕೋರ್ಟ್‌ನಲ್ಲಿ 6-4, 6-7 (2-7), 9-11 ರಲ್ಲಿ ಪಂದ್ಯವನ್ನು ಸೋತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications