Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬ್ಲ್ಯಾಕ್ ಪ್ಯಾಂಥರ್ ಕ್ಯಾಟ್ ಸೂಟ್'ನಲ್ಲಿ ಆರ್ಭಟಿಸಿದ ಸೆರೆನಾ

Comeback queens Serena, Sharapova advance at Roland Garros

ಪ್ಯಾರೀಸ್, ಮೇ 30: ಸುಮಾರು 16 ತಿಂಗಳ ಬಳಿಕ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಕ್ಕಿಳಿದಿರುವ ಸೆರೆನಾ ವಿಲಿಯಮ್ಸ್ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ಮೊದಲ ಸುತ್ತಿನಲ್ಲಿ 'ಬ್ಲ್ಯಾಕ್ ಪ್ಯಾಂಥರ್ ಕ್ಯಾಟ್ ಸೂಟ್'ನಲ್ಲಿ ಗೆದ್ದು ಆರ್ಭಟಿಸಿದರು.

36ರ ಹರೆಯದ ಅಮೆರಿಕಾ ಆಟಗಾರ್ತಿ ಸೆರೆನಾ ಮಗುವಿಗೆ ಜನ್ಮ ನೀಡಿದ ಬಳಿಕ ಗೆದ್ದಿದ್ದು ಇದೇ ಮೊದಲಬಾರಿ. ಗರ್ಭಿಣಿಯಾಗಿದ್ದಾಗ ಆಸ್ಟ್ರೇಲಿಯಾ ಓಪನ್ ಗೆದ್ದುಕೊಂಡಿದ್ದ ವಿಲಿಯಮ್ಸ್ ಆಮೇಲೆ ಕೊಂಚದಿನ ಟೆನಿಸ್ ಕೋರ್ಟ್ ನಿಂದ ದೂರ ಉಳಿಸಿದ್ದರು. ಹೀಗಾಗಿ ಅವರು ಫಾರ್ಮ್ ಕೂಡ ಕಳೆದುಕೊಂಡಿದ್ದರು.

ಮಗು ಹೆತ್ತ ಬಳಿಕ ಫಿಟ್ನೆಸ್ ಇಲ್ಲದೆ ಮಾಜಿ ವಿಶ್ವ ನಂ. 1 ಆಟಗಾರ್ತಿ ಆಡಿದ ಒಂದೆರಡು ಪಂದ್ಯಗಳಲ್ಲೂ ಸೋತು ಮುಖಭಂಗವನ್ನನುಭವಿಸಿದ್ದರು. ಮತ್ತೆ ಗೆಲುವಿಗೆ ಮರಳಲು ಹಾತೊರೆಯುತ್ತಿದ್ದ ಬಲಾಡ್ಯೆ ಮಂಗಳವಾರ ಫಿಲಿಪ್ ಚಾಟ್ರಿಯರ್ ಕೋರ್ಟ್ ನಲ್ಲಿ ಜೆಕ್ ಆಟಗಾರ್ತಿ ಕ್ರಿಸ್ಟೀನಾ ಪ್ಲಿಸ್ಕೋವಾ ವಿರುದ್ಧ ಜಯ ಸಾಧಿಸಿದರು.

ಗೆಲ್ಲುವ ವಿಶ್ವಾಸದಿಂದಲೇ ಫ್ರೆಂಚ್ ಓಪನ್ ಸ್ಪರ್ಧೆಗಳಿದಿದ್ದ ಸೆರೆನಾ ಎದುರಾಳಿ ಪ್ಲಿಸ್ಕೋವಾ ವಿರುದ್ಧ 7-6 (7-4), 6-4ರ ಗೆಲುವು ದಾಖಲಿಸಿದರು. ಮುಂದಿನ ಸುತ್ತಿನಲ್ಲಿ ಸೆರೆನಾ ಅವರು 451ನೇ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೀ ಬರ್ಟಿ ವಿರುದ್ಧ ಸೆಣಸಾಡಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಮತ್ತೊಬ್ಬ ಸ್ಟಾರ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಅವರು ಡಚ್ಚಿನ ರಿಚೆಲ್ ಹೊಗೆನ್ಕ್ಯಾಂಪ್ ವಿರುದ್ಧ 6-1, 4-6, 6-3ರ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

Story first published: Wednesday, May 30, 2018, 11:40 [IST]
Other articles published on May 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+