ಆಸ್ಟ್ರೇಲಿಯನ್ ಓಪನ್ 2019 : ಜೊಕೊವಿಕ್ ಹಾಗೂ ಒಸಾಕಾ ಚಾಂಪಿಯನ್ಸ್

ಬೆಂಗಳೂರು, ಜನವರಿ 27: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರು ವಿಶ್ವದ ನಂ.2 ಆಟಗಾರ ಸ್ಪೇನಿನ ರಫೆಲ್ ನಡಾಲ್ ಅವರನ್ನು ಸೋಲಿಸಿ, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದು ಜೊಕೊವಿಕ್ ಅವರ 15ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಅಲ್ಲದೆ, ಸತತವಾಗಿ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.
ಟೆನಿಸ್ ಕ್ಷೇತ್ರದ ದಿಗ್ಗಜರಾದ ಪೀಟ್ ಸಾಂಪ್ರಾಸ್(20) ಹಾಗೂ ರೋಜರ್ ಫೆಡರರ್ ಅವರ (17) ನಂತರದ ಸ್ಥಾನದಲ್ಲಿ ಜೊಕೊವಿಕ್ ಇದ್ದಾರೆ. ಆಸ್ಟ್ರೇಲಿಯನ್ ಓಪನ್ ಅಂತಿಮ ಹಣಾಹಣಿಯಲ್ಲಿ ಜೊಕೊವಿಕ್ ಅವರು ನಡಾಲ್ ಅವರನ್ನು 6-3,6-2, 6-3 ಸೆಟ್ ಗಳ ಅಂತರದಲ್ಲಿ ಸೋಲಿಸಿದರು.
ಒಸಾಕಾ ಚಾಂಪಿಯನ್ : ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಸೋಲಿಸಿದ ಜಪಾನ್ನಿನ ನಯೋಮಿ ಒಸಾಕಾ ಅವರು ನೂತನ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ. ಸತತ 2ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದು, ಮಹಿಳಾ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಅಂತಿಮ ಹಣಾಹಣಿಯಲ್ಲಿ 7-6 (2), 5-7, 6-4 ರಿಂದ ಕ್ವಿಟೋವಾರನ್ನು ಮಣಿಸಿದರು.
ಒಂದು ವರ್ಷದ ಹಿಂದೆ ಶ್ರೇಯಾಂಕ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿದ್ದ ಒಸಾಕಾ ನಂ.1 ಪಟ್ಟಕ್ಕೇರುವ ಮೂಲಕ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಪುರುಷ ಆಟಗಾರರಲ್ಲೂ ಯಾರೂ ಏಷ್ಯಾದಿಂದ ಈ ಸ್ಥಾನಕ್ಕೇರಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications