ಫಾಬಿಯೊ ಫಾಗ್ನಿನಿ ಮುಡಿಗೆ ಮಾಂಟೆ ಕಾರ್ಲೊ ಮಾಸ್ಟರ್ಸ್ ಗರಿ

ಪ್ಯಾರಿಸ್, ಏಪ್ರಿಲ್ 22: ವಿಶ್ವದ 18ನೇ ಶ್ರೇಯಾಂಕದ ಆಟಗಾರ ಇಟಲಿಯ ಫಾಬಿಯೊ ಫಾಗ್ನಿನಿ, ಇಲ್ಲಿ ನಡೆದ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ
ಅಲಂಕರಿಸಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ 31 ವರ್ಷದ ಅನುಭವಿ ಆಟಗಾರ ಫಾಗ್ನಿನಿ, 6-3, 6-4 ಅಂತರದ ನೇರ ಸೆಟ್‌ಗಳಿಂದ ಸರ್ಬಿಯಾದ ಆಟಗಾರ ದುಸಾನ್ ಲಾಜೊವಿಚ್ ಅವರನ್ನು ಬಗ್ಗುಬಡಿದರು. ಈ ಮೂಲಕ ಎಟಿಪಿ 1000 ಮಾಸ್ಟರ್ಸ್ ಟೂರ್ನಿ ಗೆದ್ದ ಇಟಲಿಯ ಮೊತ್ತ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಫಾಬಿಯೋ ಪಾತ್ರರಾದರು.
"ನನಗೆ ಬಹಳ ಸಂತೋಷವಾಗಿದೆ. ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ. ಇದು ಅದ್ಭುತ ಅನುಭವ ವಿಶ್ರಾಂತಿ ತೆಗೆದುಕೊಂಡು ಇದರ ಆನಂದ ಸವೆಯಲಿದ್ದೇನೆ. ದೊಡ್ಡ
ಮಟ್ಟದ ಟೂರ್ನಿ ಗೆಲ್ಲಬೇಕೆಂಬುದು ನನ್ನ ಕನಸಾಗಿತ್ತು,'' ಎಂದು ಪಂದ್ಯದ ಬಳಿಕ ಮಾತನಾಡಿದ ಇಟಲಿಯ ತಾರೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
ಟೂರ್ನಿಯಲ್ಲಿ 13ನೇ ಶ್ರೇಯಾಂಕ ಪಡೆದಿದ್ದ ಫಾಬಿಯೊ, ಸೆಮಿಫೈನಲ್ಸ್ ಪಂದ್ಯದಲ್ಲಿ 17 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ಹಾಗೂ ಕಿಂಗ್ ಆಫ್ ಕ್ಲೇ ಖ್ಯಾತಿಯ ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್ ನಡಾಲ್‌ಗೆ ನೇರ ಸೆಟ್‌ಗಳ ಆಘಾತ ನೀಡಿದ್ದರು. ಇದಕ್ಕೂ ಮುನ್ನ ಪ್ರಿ ಕ್ವಾರ್ಟರ್‌ಫೈನಲ್ಸ್‌ನಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಎದುರು ಜಯ ದಾಖಲಿಸಿದ್ದರು.
ಈ ಗೆಲುವಿನೊಂದಿಗೆ ಎಟಿಪಿ ಪ್ರಕಟಿಸುವ ನೂತನ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಫಾಗ್ನಿನಿ 12ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications