Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ 2019: ವಿಶ್ವದಾಖಲೆ ಹಾದಿಯಲ್ಲಿ ಸೆರೆನಾ ವಿಲಿಯಮ್ಸ್!

French Open 2019: Serena Williams cruises into round three

ಪ್ಯಾರಿಸ್, ಮೇ 31: ಜಪಾನ್‌ನ ಕುರುಮಿ ನಾರ ಅವರನ್ನು ಸುಲಭವಾಗಿ ಹಿಮ್ಮೆಟ್ಟಿಸಿರುವ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ 2019ರ ಮಹಿಳಾ ಸಿಂಗಲ್ಸ್ ನಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್ ಬಳಿಕ 23 ಗ್ರ್ಯಾಂಡ್‌ಸ್ಲ್ಯಾಮ್ ದಾಖಲೆ ಹೊಂದಿರುವ ಸೆರೆನಾ, ಮತ್ತೊಂದು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಮೂಲಕ ವಿಶ್ವ ದಾಖಲೆ ಸರಿದೂಗಿಸುವ ನಿರೀಕ್ಷೆ ಮೂಡಿಸಿದ್ದಾರೆ.

ವಿಶ್ವ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿರುವ ಸೆರೆನಾ 2017ರ ಬಳಿಕ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಗಮನಾರ್ಹ ಮುನ್ನಡೆ ಗಿಟ್ಟಿಸಿದ್ದಾರೆ. ಗುರುವಾರ (ಮೇ 30) ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅಮೆರಿಕಾ ಆಟಗಾರ್ತಿ ಸೆರೆನಾ, ಕುರುಮಿ ವಿರುದ್ಧ 6-3, 6-2ರ ನೇರ ಸೆಟ್ ಗೆಲುವು ದಾಖಲಿಸಿದರು.

ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ ಸೆರೆನಾ ಹೆಚ್ಚು ಬಲ ಪ್ರಯೋಗಿಸುವ ಗೋಜಿಗೆ ಹೋಗದೆ ಸುಲಭವಾಗಿ ಮುನ್ನಡೆ ಸಾಧಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ಸೆರೆನಾ, ಅಮೆರಿಕಾದವರೇ ಆದ ಸೋಫಿಯಾ ಕೆನಿನ್ ಸವಾಲು ಸ್ವೀಕರಿಸಲಿದ್ದಾರೆ.

Story first published: Friday, May 31, 2019, 11:16 [IST]
Other articles published on May 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+