Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್‌ 2022: ಟ್ರೋಫಿ ಮುಡಿಗೇರಿಸಿಕೊಂಡ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್

Iga Swiatek

ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅಮೆರಿಕಾದ ಕೊಕೊ ಗೌಫ್ ಅವರನ್ನು 6-1 6-3 ಸೆಟ್‌ಗಳಿಂದ ಸೋಲಿಸುವ ಮೂಲಕ ಫ್ರೆಂಚ್ ಓಪನ್ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಪ್ರಸ್ತುತ ಮಹಿಳಾ ಟೆನಿಸ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.

ಕಳೆದ ಮೂರು ವರ್ಷದಲ್ಲಿ ತನ್ನ ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಬೀಗಿದ ಇಗಾ ಸ್ಟಿಯಾಟೆಕ್, ಆವೆ ಮಣ್ಣಿನಲ್ಲಿ ತನ್ನ ಪ್ರಾಬಲ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಈಕೆಯ ಆಟದೆದುರು ಅಮೆರಿಕಾದ 18 ವರ್ಷದ ಕೊಕೊ ಗೌಫ್ ಮಂಕಾದರು. ಈ ಮೂಲಕ ಆಕೆಯ ಮೊದಲ ಗ್ರ್ಯಾಂಡ್‌ಸ್ಲ್ಯಾಮ್‌ ಗೆಲ್ಲುವ ಕನಸು ನುಚ್ಚು ನೂರಾಯಿತು.

ಪೊಲೆಂಡ್‌ನ ಯುವ ಟೆನಿಸ್ ಸೂಪರ್ ಇಗಾ ಸ್ವಿಯಾಟೆಕ್ ಕೇವಲ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಷ್ಟೇ ಅಲ್ಲದೆ ಸತತವಾಗಿ 35 ಪಂದ್ಯಗಳನ್ನು ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು 2000ನೇ ಇಸವಿಯಲ್ಲಿ ಅಮೆರಿಕಾದ ವೀನಸ್ ವಿಲಿಯಮ್ಸನ್‌ ಬಳಿಕ ಅತ್ಯಂತ ದೀರ್ಘ ಪಂದ್ಯಗಳ ಗೆಲುವಿನ ಸಾಧನೆಯಾಗಿದೆ.

ಅವರು ಆರಂಭಿಕ ಸೆಟ್ ಅನ್ನು ಅತಿ ಸುಲಭವಾಗಿ 6-1 ಅಂತರದಲ್ಲಿ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿದರು. ಇನ್ನು ಎರಡನೇ ಸೆಟ್‌ನಲ್ಲಿ ಸಂಕ್ಷಿಪ್ತ ಪ್ರತಿರೋಧವನ್ನು ಎದುರಿಸಿದ್ರೂ ಸಹ 6-3 ನೇರ ಸೆಟ್‌ಗಳ ಮೂಲಕ ಗೆಲುವನ್ನ ದಾಖಲಿಸಿ ಪಂದ್ಯ ಜಯಿಸಿದ್ರು.

"ಎರಡು ವರ್ಷಗಳ ಹಿಂದೆ ಮತ್ತೆ ಪ್ರಶಸ್ತಿ ಗೆಲ್ಲುವುದು ಅದ್ಭುತವಾಗಿದೆ. ಈ ಬಾರಿ ನಾನು ಇಲ್ಲಿಗೆ ಬರಲು ಕಷ್ಟಪಟ್ಟಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದು ತುಂಬಾ ಕಠಿಣವಾಗಿತ್ತು, ಒತ್ತಡವು ದೊಡ್ಡದಾಗಿತ್ತು," ಎಂದು ಭಾವುಕರಾಗಿ ಸ್ವಿಯಾಟೆಕ್ ಹೇಳಿದರು.

" ಇನ್ನು ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು, ನನ್ನನ್ನು ಬೆಂಬಲಿಸಲು ಬಂದಿದ್ದಕ್ಕಾಗಿ,ಅಲ್ಲಿ ಕಾಣುವ ಎಲ್ಲಾ ಪೊಲೆಂಡ್ ಧ್ವಜಗಳಿಗೆ ವಂದನೆಗಳು" ಎಂದು ಅವರು ತಮ್ಮ ತಂಡಕ್ಕೆ ಧನ್ಯವಾದ ಹೇಳಿದರು.

Coco Gauff

ಇನ್ನು ರನ್ನರ್ ಅಪ್‌ ಆದ ಅಮೆರಿಕಾದ ಕೊಕೊ ಗೌಫ್ ತನ್ನ ತಂಡವನ್ನು ಫೈನಲ್‌ಗೆ ತಲುಪಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. "ನನ್ನನ್ನು ಕ್ಷಮಿಸಿ, ನಾನು ಇಂದು ಇದನ್ನು ಪಡೆಯಲು ಸಾಧ್ಯವಾಗಲಿಲ್ಲ ಆದರೆ ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಅವರು ಹೇಳಿದರು.

ಎರಡು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನ ಗೆದ್ದಿರುವ ಇಗಾ ಸ್ವಿಯಾಟೆಕ್ ರೋಲ್ಯಾಂಡ್ ಗ್ಯಾರೋಸ್‌ನ ವೇದಿಕೆ ಮೇಲೆ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದು ವಿಶೇಷವಾಗಿದೆ.

Story first published: Sunday, June 5, 2022, 12:44 [IST]
Other articles published on Jun 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+