Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: 7ನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್‌ರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ ಮರಿನ್ ಸಿಲಿಕ್

French Open: Marin Cilic Beats No 7 Rank Andrey Rublev And Enters The Semifinals

ಕ್ರೊಯೇಷಿಯಾದ ಮರಿನ್ ಸಿಲಿಕ್ ಅವರು ಏಳನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಅವರನ್ನು 5-7, 6-3, 6-4, 3-6, 7-6 (10/2) ಪಾಯಿಂಟ್‌ಗಳ ಗೆಲುವಿನೊಂದಿಗೆ ಬುಧವಾರ ತಮ್ಮ ಮೊದಲ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿದರು.

2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಅವರು ನಾಲ್ಕು ಗಂಟೆ 10 ನಿಮಿಷಗಳ ಜಿದ್ದಾಜಿದ್ದಿನ ಹೋರಾಟದಲ್ಲಿ 88 ಪ್ರಶಸ್ತಿ ವಿಜೇತರನ್ನು ಮಣಿಸಿದರು ಮತ್ತು ಭಾನುವಾರ ನಡೆಯುವ ಫೈನಲ್‌ ಹಣಾಹಣಿಗಾಗಿ ಎಂಟನೇ ಶ್ರೇಯಾಂಕದ ನಾರ್ವೆಯ ಕ್ಯಾಸ್ಪರ್ ರೂಡ್ ಅಥವಾ ಡ್ಯಾನಿಶ್‌ನ ಹದಿಹರೆಯದ ಹೊಲ್ಗರ್ ರೂನ್ ಅವರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.

33 ವರ್ಷದ ಮರಿನ್ ಸಿಲಿಕ್ ಅವರು ನೊವಾಕ್ ಜೊಕೊವಿಕ್, ರಾಫೆಲ್ ನಡಾಲ್, ರೋಜರ್ ಫೆಡರರ್ ಮತ್ತು ಆಂಡಿ ಮರ್ರೆ ನಂತರ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಐದನೇ ಸಕ್ರಿಯ ಪುರುಷ ಆಟಗಾರರಾಗಿದ್ದಾರೆ.

'ಐದನೇ ಸೆಟ್ ನಂಬಲಾಗದ ಯುದ್ಧವಾಗಿತ್ತು,' ಎಂದು ನಾಲ್ಕು ವರ್ಷಗಳಲ್ಲಿ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿರುವ ಮರಿನ್ ಸಿಲಿಕ್ ಹೇಳಿದರು. "ಆಂಡ್ರೆ ರುಬ್ಲೆವ್ ತುಂಬಾ ಚೆನ್ನಾಗಿ ಆಡಿದರು. ಇಂದು ನನ್ನ ದಿನವಾಗಿತ್ತು. ಅವರಿಗೆ ಅದೃಷ್ಟ ಇರಲಿಲ್ಲ," ಎಂದರು.

ಆಂಡ್ರೆ ರುಬ್ಲೆವ್, ನಿರ್ಣಾಯಕ ತಮ್ಮ ಐದನೇ ಕ್ವಾರ್ಟರ್-ಫೈನಲ್‌ನಲ್ಲಿ ಗೆಲುವುಗಾಗಿ ಹೋರಾಟ ನಡೆಸಿ ಅಂತಿಮವಾಗಿ ಸೋತರು. ಮೊದಲ ಸೆಟ್ ಅನ್ನು ಆರಾಮದಾಯಕವಾಗಿ ಗೆದ್ದ ರುಬ್ಲೆವ್, ಮುಂದಿನ ಎರಡು ಸೆಟ್‌ಗಳಲ್ಲಿ ಮರಿನ್ ಸಿಲಿಕ್ ಅವರ ಪ್ರತಿಹೋರಾಟಕ್ಕೆ ಸೋಲೊಪ್ಪಿಕೊಂಡರು.

ಕ್ರೊಯೇಷಿಯಾದ ಮರಿನ್ ಸಿಲಿಕ್, ನಾಲ್ಕನೇ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರನ್ನು ದಿಗ್ಭ್ರಮೆಗೊಳಿಸುವ ಆಟವಾಡಿದರು. ಅವರು ಐದನೇ ಸೆಟ್ ಪಾಯಿಂಟ್‌ನಲ್ಲಿ 17ನೇ ಏಸ್‌ನೊಂದಿಗೆ ಸ್ಪರ್ಧೆಯನ್ನು ಸಮಗೊಳಿಸಿದರು.

ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಿಂದ ಮರಿನ್ ಸಿಲಿಕ್ ಅವರನ್ನು ಸೋಲಿಸಿದ್ದ ಆಂಡ್ರೆ ರುಬ್ಲೆವ್, ನಾಲ್ಕನೇ ಸೆಟ್‌ನ ಎಂಟನೇ ಗೇಮ್‌ನಲ್ಲಿ ನಿರ್ಣಾಯಕ ಬ್ರೇಕ್‌ನೊಂದಿಗೆ ಪ್ರತಿರೋಧ ತೋರಿಸಿದ್ದರು. ಆದರೆ ಅಂತಿಮವಾಗಿ ಐದನೇ ಸೆಟ್‌ನಲ್ಲಿ ನಿರಾಸೆ ಅನುಭವಿಸಿದರು.

ಮರಿನ್ ಸಿಲಿಕ್ ಅವರು 2017ರ ವಿಂಬಲ್ಡನ್ ಮತ್ತು 2018ರ ಆಸ್ಟ್ರೇಲಿಯನ್ ಓಪನ್ ರನ್ನರ್ ಅಪ್ ರೋಜರ್ ಫೆಡರರ್ ವಿರುದ್ಧ ನಿರ್ಣಾಯಕ ಒಂಬತ್ತನೇ ಗೇಮ್‌ನಲ್ಲಿ ಮ್ಯಾಚ್ ಪಾಯಿಂಟ್ ಉಳಿಸಿಕೊಂಡರು, ಆದರೆ ಸೂಪರ್ ಟೈಬ್ರೇಕರ್ ಮೂಲಕ ಮುನ್ನಡೆ ಸಾಧಿಸಿದರು. ರಾತ್ರಿಯ ಪಂದ್ಯದಲ್ಲಿ ಡೆನ್ಮಾರ್ಕ್‌ನ 19 ವರ್ಷದ ಹೊಲ್ಗರ್ ರೂನ್ ಅವರು ನಾರ್ವೆಯ ಎಂಟನೇ ಶ್ರೇಯಾಂಕದ ಕ್ಯಾಸ್ಪರ್ ರುಡ್ ವಿರುದ್ಧ ಸೆಮಿಫೈನಲ್‌ಗೆ ಬಡ್ತಿ ಪಡೆಯುವ ಸಲುವಾಗಿ ಹೋರಾಟ ನಡೆಸಲಿದ್ದಾರೆ.

'ಅವರು ಚೆನ್ನಾಗಿ ಆಟ ಆಡುತ್ತಿದ್ದರು,' ಎಂದು ಆಂಡ್ರೆ ರುಬ್ಲೆವ್ ಹೇಳಿದರು. "ನಾನು ಮೊದಲ ಸೆಟ್‌ನ ನಂತರ ವಿಶ್ರಾಂತಿ ಪಡೆದಿದ್ದೇನೆ. ಆದರೆ ನಂತರ ನಾನು ಇದನ್ನು ಯೋಚಿಸಿರಲಿಲ್ಲ. ಹಿಂದಿನ ಕ್ವಾರ್ಟರ್-ಫೈನಲ್‌ನಲ್ಲಿ ಆಡಿದ ಆಟವನ್ನು ಇಲ್ಲಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇಂದು ನಾನು ಗೆಲ್ಲಲು ತುಂಬಾ ಹತ್ತಿರದಲ್ಲಿದ್ದೆ," ಎಂದು ಆಂಡ್ರೆ ರುಬ್ಲೆವ್ ತಿಳಿಸಿದರು.

Story first published: Thursday, June 2, 2022, 11:01 [IST]
Other articles published on Jun 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+