ಫ್ರೆಂಚ್ ಓಪನ್: ಟೆನಿಸ್ ಜಗತ್ತಿನಲ್ಲಿ ವಿಶೇಷ ದಾಖಲೆ ಬರೆದ ಸೆರೆನಾ ವಿಲಿಯಮ್ಸ್

ಪ್ಯಾರಿಸ್, ಮೇ 28: ವಿಟಲಿಯ ಡಯಾಟ್ಚೆಂಕೊ ಎದುರು ಆರಂಭಿಕ ಸೆಟ್‌ನಲ್ಲಿ ಸೋತು ಭೀತಿ ಅನುಭವಿಸಿದರೂ ಮತ್ತೆ ತಿರುಗಿ ಬಿದ್ದ ಸೆರೆನಾ ವಿಲಿಯಮ್ಸ್, ಸೋಮವಾರ (ಮೇ 27) ಫ್ರೆಂಚ್ ಓಪನ್‌ನಲ್ಲಿ ದ್ವಿತೀಯ ಸುತ್ತಿಗೆ ಮುನ್ನಡೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಸೆರೆನಾ ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ.
ಮೊದಲ ಸುತ್ತಿನ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕಾ ಬಲಿಷ್ಠೆ ವಿಲಿಯಮ್ಸ್ ಅವರು ರಷ್ಯಾ ಆಟಗಾರ್ತಿ ಡಯಾಟ್ಚೆಂಕೊ ವಿರುದ್ಧ 2-6, 6-1, 6-0ರ ಗೆಲುವು ದಾಖಲಿಸಿದರು. ಇದರೊಂದಿಗೆ ಸೆರೆನಾ ವೃತ್ತಿ ಜೀವನದಲ್ಲಿ ಒಟ್ಟು 800 ಪಂದ್ಯಗಳಲ್ಲಿ ಗೆಲುವಿನ ದಾಖಲೆ ನಿರ್ಮಿಸಿದ್ದಾರೆ.
ಒಟ್ಟು 23 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳೊಂದಿಗೆ ಆಸ್ಟ್ರೇಲಿಯಾ ಟೆನಿಸ್ ದಂತಕತೆ ಮಾರ್ಗರೆಟ್ ಕೋರ್ಟ್ (24 ಗ್ರ್ಯಾಂಡ್ ಸ್ಲ್ಯಾಮ್) ಅವರ ಸರ್ವಕಾಲಿಕ ದಾಖಲೆ ಸರಿದೂಗಿಸುವ ಹಾದಿಯಲ್ಲಿರುವ 37ರ ಹರೆಯದ ವಿಲಿಯಮ್ಸ್, ಪಂದ್ಯದ ಬಳಿಕ ಖುಷಿ ಹಂಚಿಕೊಂಡರು. ಆರಂಭಿಕ ಸೆಟ್‌ನಲ್ಲಿ ಸೋತು ಭೀತಿಗೊಳಗಾಗಿದ್ದನ್ನೂ ಸ್ಮರಿಸಿದ ಸೆರೆನಾ ಇನ್ನಷ್ಟು ಅಭ್ಯಾಸ ಮಾಡಬೇಕಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications