ಹಾಲ್ ಆಫ್ ಫೇಮ್ ಓಪನ್: ಸೆಮಿಫೈನಲ್ ಪ್ರವೇಶಿಸಿದ ರಾಮ್ ಕುಮಾರ್

ನ್ಯೂಪೋರ್ಟ್, ಜುಲೈ 20: ನ್ಯೂ ಇಂಗ್ಲೆಂಡ್ ನ ನ್ಯೂಪೋರ್ಟ್ ನಲ್ಲಿ ನಡೆಯುತ್ತಿರುವ ಹಾಲ್ ಆಫ್ ಫೇಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ರಾಮ್ ಕುಮಾರ್ ರಾಮನಾಥನ್ ಅವರು ಕೆನಡಾದ ವೇಸೆಕ್ ಪೋಸ್ಪಿಸಲ್ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಆದರೆ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಅವರು ಡಬಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
23ರ ಹರೆಯದ ಚೆನ್ನೈ ಆಟಗಾರ ರಾಮನಾಥನ್, ಪೋಸ್ಪಿಸಲ್ ವಿರುದ್ಧ 7-5, 6-2ರ ನೇರಸೆಟ್ ಗೆಲುವು ದಾಖಲಿಸಿದರು. ಇದು ಮೊದಲ ಬಾರಿಗೆ ರಾಮನಾಥನ್ ವೃತ್ತಿ ಜೀವನದ ಉತ್ತಮ ಸಾಧನೆ ತೋರಿದ್ದು, ಎದುರಾಳಿ ಪೋಸ್ಪಿಸಲ್ ಮತ್ತು ರಮಾನಾಥನ್ ವಿರುದ್ಧ ಸುಮಾರು 1 ಗಂಟೆ 18 ನಿಮಿಷಗಳ ಕಾಳಗ ನಡೆಯಿತು.
ಫೆಬ್ರವರಿಯಲ್ಲಿ ನಡೆದಿದ್ದ ಡೇವಿಸ್ ಕಪ್ ಡಬಲ್ಸ್ ನಲ್ಲಿ ಗೆದ್ದು ಡಬಲ್ಸ್ ಗೆಲುವಿನ ದಾಖಲೆ ನಿರ್ಮಿಸಿದ್ದ ಪೇಸ್, ಆ ಬಳಿಕ ಇದು ಮೊದಲ ಬಾರಿಗೆ ಡಬಲ್ಸ್ ನಲ್ಲಿ ಪಂದ್ಯಕ್ಕಿಳಿದಿದ್ದರು. ಆದರೆ ಈ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೇಸ್ ಮತ್ತು ಅಮೆರಿಕಾದ ಜೇಮೀ ಸೆರೆಟಾನಿ ಜೋಡಿ ಭಾರತದ ಜೀವನ್ ನೆಡುನ್ಚೆಝಿಯಾನ್ ಮತ್ತು ಅಮೆರಿಕಾದ ಆಸ್ಟಿನ್ ಕ್ರೇಜೈಸ್ಕ್ ವಿರುದ್ಧ 3-6, 6-7(3) ಅಂತರದಿಂದ ಸೋತಿತು.
ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ನಿಕೊಲಾಸ್ ಮೊನ್ರೋಯ್-ಜಾನ್ ಪ್ಯಾಟ್ರಕ್ ಜೋಡಿಯನ್ನು ಹಿಮ್ಮೆಟ್ಟಿಸಿ ಮುನ್ನಡೆ ಸಾಧಿಸಿದ ಜೀವನ್ ಮತ್ತು ಆಸ್ಟಿನ್ ಜೋಡಿ ಸೆಮಿಫೈನಲ್ಸ್ ನಲ್ಲಿ ಸ್ಪೇನ್ ನ ಮಾರ್ಸೆಲೊ ಅರೆವಾಲೊ ಮತ್ತು ಮೆಕ್ಸಿಕೊದ ಮಿಗುಯೆಲ್ ಏಂಜಲ್ ರೇಯ್ಸ್-ವರೇಲಾ ಅವರನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications