ವಿಂಬಲ್ಡನ್: ನಡಾಲ್ ಅವರ ಕಳಪೆ ಸಾಧನೆಯ ಹಿನ್ನೋಟ
ವಿಂಬಲ್ಡನ್, ಜುಲೈ 11: ಸ್ಪೇನಿನ ನಾಲ್ಕನೇ ಸೀಡೆಡ್ ಆಟಗಾರ ರಫೆಲ್ ನಡಾಲ್ ಅವರು ವಿಂಬಲ್ಡನ್ 2017ರಿಂದ ಔಟ್ ಆಗಿದ್ದಾರೆ. ಲಕ್ಸೆಂಬರ್ಗ್ ನ ಗಿಲ್ಲೆಸ್ ಮುಲ್ಲರ್ ಅವರು ನಾಲ್ಕನೇ ಸುತ್ತಿನಲ್ಲಿ ನಡಾಲ್ ಅವರನ್ನು ಸೋಲಿಸಿದ್ದಾರೆ. ಮುಂದಿನ ವರ್ಷ ಮತ್ತೊಮ್ಮೆ ಕಣಕ್ಕಿಳಿಯುವೆ, ಅಭಿಮಾನಿಗಳಿಗೆ ನಿರಾಶೆ ಮಾಡಿದ್ದರೆ ಕ್ಷಮೆಯಿರಲಿ ಎಂದು ನಡಾಲ್ ಅವರು ಹೇಳಿದ್ದಾರೆ.
16ನೇ ಸೀಡ್ ನ ಮುಲ್ಲರ್ ಅವರು 3-6, 4-6, 6-3, 6-4, 13-15 ರಲ್ಲಿ ನಡಾಲ್ ರನ್ ಸೋಲಿಸಿದರು. ಈ ಮೂಲಕ ಕ್ವಾರ್ಟರ್ ಫೈನಲಿಗೂ ಮುನ್ನ ನಡಾಲ್ ಮತ್ತೊಮ್ಮೆ ನಿರ್ಗಮಿಸಿದ್ದಾರೆ.
2013ರಲ್ಲಿ ಮೊದಲ ಸುತ್ತು, 2012 ಹಾಗೂ 2015ರಲ್ಲಿ ಎರಡನೇ ಸುತ್ತು, 2014, 2017ರಲ್ಲಿ ನಾಲ್ಕನೆ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ.
15 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ, ಮೂರು ಬಾರಿ ವಿಂಬಲ್ಡನ್ ಫೈನಲ್ ತಲುಪಿದ ಆಟಗಾರ ನಡಾಲ್ ಅವರಿಗೆ ವಿಂಬಲ್ಡನ್ ನ ಹುಲ್ಲುಹಾಸಿನಲ್ಲಿ ಗೆಲ್ಲುವುದು ತ್ರಾಸದಾಯಕವಾಗಿದೆ. ನಡಾಲ್ ಅವರ ಕಳಪೆ ಸಾಧನೆಯ ಹಿನ್ನೋಟ ಇಲ್ಲಿದೆ...

2003ರಲ್ಲಿ ಮೂರನೇ ಸುತ್ತಿನಲ್ಲಿ
2003ರಲ್ಲಿ ಮೂರನೇ ಸುತ್ತಿನಲ್ಲಿ ಥೈಲ್ಯಾಂಡ್ ನ ಪರಾದೊರ್ನ್ ಶ್ರೀಚಪನ್ ವಿರುದ್ಧ 6-4, 6-4, 6-2 ನೇರ ಸೆಟ್ ಗಳಲ್ಲಿ ಸುಲಭವಾಗಿ ನಡಾಲ್ ಸೋಲು ಕಂಡರು.

2005ರಲ್ಲಿ ಮುಲ್ಲರ್ ವಿರುದ್ಧ
2005ರಲ್ಲಿ ಲಕ್ಸಂಬರ್ಗ್ ನ ಗಿಲ್ಲೆಸ್ ಮುಲ್ಲರ್ ವಿರುದ್ಧವೇ ನಡಾಲ್ ಸೋಲು ಕಂಡಿದ್ದರು. 2ನೇ ಸುತ್ತಿನಲ್ಲಿ 6-4, 4-6, 6-3, 6-4 ರಲ್ಲಿ ನಡಾಲ್ ಅವರು ಪರಾಭವ ಕಂಡರು.

2012 ಹಾಗೂ 2015ರಲ್ಲಿ
2012 -ಜೆಕ್ ರಿಪಬ್ಲಿಕ್ ನ ಲೂಕಾಸ್ ರೊಸೊಲ್ ವಿರುದ್ಧ 6-7(9), 6-4, 6-4, 2-6, 6-4ಹೋರಾಟದ ಸೋಲು ಕಂಡ ನಡಾಲ್
2015 -ಕ್ವಾಲಿಫೈಯರ್ ಡಸ್ಟಿನ್ ಬ್ರೌನ್(ಜರ್ಮನಿ) ವಿರುದ್ಧ 7-5, 3-6, 6-4, 6-4ರಲ್ಲಿ ಎರಡನೇ ಸುತ್ತಿನಲ್ಲಿ ಸೋತ ನಡಾಲ್.

2013 ಹಾಗೂ 2014
2013 : ಬೆಲ್ಜಿಯಂನ ಸ್ಟೀವ್ ಡ್ರಾಸಿಸ್ ವಿರುದ್ಧ 7-6(4), 7-6(8), 6-4 ರಲ್ಲಿ ಮೊದಲ ಸುತ್ತಿನಿಂದಲೇ ನಿರ್ಗಮಿಸಿದ ನಡಾಲ್.
2014 : ಆಸ್ಟ್ರೇಲಿಯಾದ ನಿಕ್ ಕ್ರೈಜಿಯೊಸ್ ವಿರುದ್ಧ 7-6(5), 5-7, 7-6(5), 6-3ರಲ್ಲಿ ನಾಲ್ಕನೇ ಸುತ್ತಿನಲ್ಲಿ ಸೋಲು ಕಂಡ ನಡಾಲ್.- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications