ಕ್ಲೇ ಕಿಂಗ್ ರಾಫೆಲ್ ನಡಾಲ್ ಮುಡಿಗೆ 9ನೇ ಇಟಾಲಿಯನ್ ಓಪನ್ ಕಿರೀಟ

ರೋಮ್, ಮೇ 20: ನೊವಾಕ್ ಜೊಕೋವಿಕ್ ಅವರನ್ನು 6-0, 4-6, 6-1ರ ಅಂತರದಿಂದ ಮಣಿಸುವ ಮೂಲಕ 'ಕಿಂಗ್ ಆಫ್ ಕ್ಲೇ' ಖ್ಯಾತಿಯ ರಾಫೆಲ್ ನಡಾಲ್ 9ನೇ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಇದು ನಡಾಲ್‌ಗೆ ಲಭಿಸುತ್ತಿರುವ 34ನೇ ಮಾಸ್ಟರ್ಸ್ ಪ್ರಶಸ್ತಿ.
ಭಾನುವಾರ (ಮೇ 19) ನಡೆದ ಇಟಾಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 54ನೇ ಮುಖಾಮುಖಿಯಲ್ಲಿ ಸ್ಪೇನ್ ಬಲಿಷ್ಠ ನಡಾಲ್, ವಿಶ್ವ ನಂ.1 ಶ್ರೇಯಾಂಕಿತ, ಸರ್ಬಿಯಾ ಆಟಗಾರ ನೊವಾಕ್ ಜೊಕೋವಿಕ್ ಅವರನ್ನು ಹಿಮ್ಮೆಟ್ಟಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ವಿಶ್ವ ಅಗ್ರ ಶ್ರೇಯಾಂಕಿತ, ಕಳೆದ ವಾರ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಜಯಿಸಿದ್ದ ಜೊಕೋವಿಕ್ ದ್ವಿತೀಯ ಸೆಟ್ ನಲ್ಲಿನ ಮುನ್ನಡೆಯ ಮೂಲಕ ವಿಶ್ವ ನಂ.2 ಆಟಗಾರ ನಡಾಲ್‌ಗೆ ಪ್ರತಿರೋಧ ಒಡ್ಡಿದರಾದರೂ ನಡಾಲ್ ಅಂತಿಮವಾಗಿ ಮೇಲುಗೈ ಸಾಧಿಸಿದರು. ಈ ಫೈನಲ್ ಪಂದ್ಯಕ್ಕೂ ಮುನ್ನ ನಡಾಲ್-ಜೊಕೋವಿಕ್ ಇಬ್ಬರೂ ತಲಾ 33 ಮಾಸ್ಟರ್ಸ್ ಪ್ರಶಸ್ತಿಯೊಂದಿಗೆ ಸಮಬಲ ಸಾಧಿಸಿದ್ದರು.
Story first published: Monday, May 20, 2019, 11:08 [IST]
Other articles published on May 20, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications