ಸಾನಿಯಾ, ಲಿಯಾಂಡರ್, ಸುಮಿತ್ ತ್ರಿಬ್ಬಲ್ ಧಮಾಕ
ಲಂಡನ್, ಜುಲೈ 13: ಈ ಬಾರಿಯ ವಿಂಬಲ್ಡನ್ ಟೂರ್ನಿಯಲ್ಲಿ ಭಾರತದ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದು ಕುಪ್ಪಳಿಸಿದ್ದಾರೆ. ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ ಹಾಗೂ ಸುಮಿತ್ ನಗಾಲ್ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತೀಯ ಹೆಮ್ಮೆ ಯ ಕ್ರೀಡಾಪಟುಗಳ ಸಂಭ್ರಮದ ಕ್ಷಣಗಳು ಇಲ್ಲಿವೆ.
42 ವರ್ಷದ ಲಿಯಾಂಡರ್ ಪೇಸ್ ಅವರು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜತೆಗೂಡಿ ಭಾನುವಾರ ರಾತ್ರಿ ನಡೆದ ಮಿಶ್ರ ಡಬಲ್ಸ್ ಫೈನಲ್ನಲ್ಲಿ 5ನೇ ಶ್ರೇಯಾಂಕದ ಆಸ್ಟ್ರೀಯಾ ಆಟಗಾರ ಅಲೆಕ್ಸಾಂಡರ್ ಪೇಯ ಹಾಗೂ ಹಂಗೆರಿಯ ಟೀಮಿಯಾ ಬಾಬೊಸ್ ಜೋಡಿಯನ್ನು ಮಣಿಸಿ ಕಪ್ ಎತ್ತಿದರು. [ಟೆನಿಸ್ ತಾರೆ ಪೇಸ್ ಅಪೂರ್ವ ಸಾಧನೆ ಪಟ್ಟಿ]
ದೆಹಲಿಯ ಸುಮಿತ್ ನಗಾಲ್ ಪ್ರಶಸ್ತಿ ವಿಯೆಟ್ನಾಂನ ನಾಮ್ಹಾಂಗ್ ಲೀ ಜತೆಗೂಡಿ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಇದಕ್ಕೂ ಮುನ್ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸಾನಿಯಾ ಮಿರ್ಜಾ ಚೊಚ್ಚಲ ವಿಂಬಲ್ಡನ್ ಕಿರೀಟ ಧರಿಸಿದ್ದರು.

ಮಿಶ್ರ ಡಬಲ್ಸ್ ನಲ್ಲಿ ಪೇಸ್- ಹಿಂಗಿಸ್ ಜೋಡಿ
ವಿಂಬಲ್ಡನ್ ನ ಮಿಶ್ರ ಡಬಲ್ಸ್ ಅಂತಿಮ ಹಣಾಹಣಿಯಲ್ಲಿ ಸೆಂಟರ್ಕೋರ್ಟ್ ನಲ್ಲಿ ನಡೆದ ಫೈನಲ್ನಲ್ಲಿ 7ನೇ ಶ್ರೇಯಾಂಕದ ಪೇಸ್- ಹಿಂಗಿಸ್ ಜೋಡಿ ಕೇವಲ 40 ನಿಮಿಷದ ಪಂದ್ಯದಲ್ಲಿ 6-1, 6-1 ರಿಂದ 5ನೇ ಶ್ರೇಯಾಂಕದ ಆಸ್ಟ್ರೀಯಾ ಆಟಗಾರ ಅಲೆಕ್ಸಾಂಡರ್ ಪೇಯ ಹಾಗೂ ಹಂಗೆರಿಯ ಟೀಮಿಯಾ ಬಾಬೊಸ್ ಜೋಡಿಯನ್ನು ಮಣಿಸಿತು.

ಲಿಯಾಂಡರ್ ಪೇಸ್ ಅಪೂರ್ವ ಸಾಧನೆ
42ರ ಹರೆಯ ಆಟಗಾರ ಪೇಸ್, ವಿಂಬಲ್ಡನ್ ಮಿಶ್ರ ಡಬಲ್ಸ್ ಗೆಲ್ಲುವುದರ ಮೂಲಕ 16 ಗ್ರಾನ್ ಸ್ಲಾಮ್ ಕಿರೀಟ ತಮ್ಮ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.

ಹ್ಯಾಟ್ರಿಕ್ ಗ್ರಾನ್ ಸ್ಲಾಮ್ ಮೇಲೆ ಕಣ್ಣು
ಈ ವರ್ಷದಲ್ಲಿ ಹಿಂಗಿಸ್ ಜೊತೆ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಗೆದ್ದಿದ್ದಾರೆ. ಮುಂದಿನ ತಿಂಗಳು ಯುಎಸ್ ಓಪನ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಲಿಯಾಂಡರ್ ಪೇಸ್ 16 ಗ್ರಾನ್ ಸ್ಲಾಮ್
1999 ರಿಂದ 2015 ರ ತನಕ ಲಿಯಾಂಡರ್ ಪೇಸ್ 16 ಗ್ರಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ

ವಿಂಬಲ್ಡನ್ 2015 ಮಹಿಳಾ ಡಬಲ್ಸ್ ಕಿರೀಟ
ವಿಂಬಲ್ಡನ್ ಡಬಲ್ಸ್ ಫೈನಲ್ ನಲ್ಲಿ ರಷ್ಯಾದ ಎಕಟೆರಿನಾ ಮಕರೋವಾ ಹಾಗೂ ಎಲೇನಾ ವೆಸ್ನಿನಾ ಅವರನ್ನು 5-7, 7-6 (7-4), 7-5 ಅಂತರದಿಂದ ಸೋಲಿಸಿದ ಸಾನಿಯಾ ಮೊದಲ ವಿಂಬಲ್ಡನ್ ಗ್ರಾನ್ ಸ್ಲಾಮ್ ಗೆದ್ದ ಸಂತಸದಲ್ಲಿದ್ದಾರೆ. ಡಬಲ್ಸ್ ಶ್ರೇಯಾಂಕದಲ್ಲಿ ಸಾನಿಯಾ ವಿಶ್ವದ ನಂ.1 ಆಗಿದ್ದರೆ, ಮಾರ್ಟಿನಾ ಹಿಂಗಿಸ್ ನಂ.2 ಸ್ಥಾನದಲ್ಲಿದ್ದಾರೆ.

ವಿಂಬಲ್ಡನ್ ಕಿರೀಟ ಉಳಿಸಿಕೊಂಡ ಜೋಕೊವಿಕ್
28ರ ಹರೆಯದ ಹಾಲಿ ವಿಂಬಲ್ಡನ್ ಚಾಂಪಿಯನ್ ಜೋಕೊವಿಕ್ ಅವರು ಸ್ವಿಟ್ಜರ್ಲೆಂಡ್ ನ ತಾರೆ ರೋಜರ್ ಫೆಡರರ್ ವಿರುದ್ಧ 7-6, 6-7, 6-4, 6-3 ಸೆಟ್‌ಗಳಿಂದ ಸತತ ಎರಡನೇ ಬಾರಿ ಜಯ ಗಳಿಸಿದರು.

ಫೆಡರರ್ ಅಭಿಮಾನಿಗಳಿಗೆ ನಿರಾಶೆ
ಫೆಡರರ್ ಮತ್ತು ಜೊಕೊವಿಕ್ ಪರಸ್ಪರ 40ನೇ ಬಾರಿ ಮುಖಾಮುಖಿಯಾಗಿದ್ದ ಪಂದ್ಯ ಇದಾಗಿತ್ತು. ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಅವಕಾಶವನ್ನು ಕೈ ಚೆಲ್ಲಿದ ಫೆಡರರ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಚಿತ್ರದಲ್ಲಿ ಫೆಡರರ್ ಪತ್ನಿ.

ಫೈನಲ್ ವೀಕ್ಷಿಸಿದ ಸೆಲೆಬ್ರಿಟಿಗಳು
ರಾಯಲ್ ಬಾಕ್ಸ್ ಸಮೀಪದಲ್ಲಿ ಹಾಲಿವುಡ್ ತಾರೆಗಳು ಕಂಡು ಬಂದರು. ಟೆನಿಸ್ ತಾರೆ ಬೋರ್ಗ್, ರಾಡ್ ಲಿವಿರ್, ಬೆನೆಡ್ಟಿಕ್ ಕಮರ್ಬ್ಯಾಚ್, ಹ್ಯೂ ಗ್ರಾಂಟ್, ಬ್ರಾಡ್ಲಿ ಕೂಪರ್.

ಬಾಲಕರ ಸಿಂಗಲ್ಸ್ ಪ್ರಶಸ್ತಿ
ಯುನೈಟೆಡ್ ಸ್ಟೇಟ್ಸ್ ನ ರೀಲೆ ಒಪೆಲ್ಕಾ ಅವರು ಸ್ವೀದನ್ನಿನ ಮಿಕಾಯಿಲ್ ಯ್ಮೆರ್ ಅವರನ್ನು ಸೋಲಿಸಿ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.

ಸುಮಿತ್ ನಗಾಲ್ ಪ್ರಶಸ್ತಿ
ಭಾನುವಾರ ನಡೆದ ಫೈನಲ್ನಲ್ಲಿ 17 ವರ್ಷದ ಸುಮಿತ್ ಹಾಗೂ ನಾಮ್ಲೀ 7-6 (4), 6-4 ರಿಂದ ನಾಲ್ಕನೇ ಶ್ರೇಯಾಂಕದ ಅಮೆರಿಕದ ರೀಲಿ ಒಪೆಲ್ಕಾ ಹಾಗೂ ಜಪಾನ್ನ ಅಕೀರಾ ಸ್ಯಾಂಟ್ಲಿಯಾನ್ ಜೋಡಿಯನ್ನು 63 ನಿಮಿಷದ ಕಾದಾಟದಲ್ಲಿ ಸೋಲಿಸಿತು. 2009ರಲ್ಲಿ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಬಾಲಕರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಬಳಿಕ ಗ್ರಾಂಡ್ ಸ್ಲಾಂ ಟೂರ್ನಿಯ ಕಿರಿಯರ ವಿಭಾಗದಲ್ಲಿ ಭಾರತದ ಆಟಗಾರ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications