ಟೆನಿಸ್ ತಾರೆ ಲಿಯಾಂಡರ್ ಪೇಸ್ ಅಪೂರ್ವ ಸಾಧನೆ ಪಟ್ಟಿ
ಬೆಂಗಳೂರು, ಜುಲೈ 13: ಭಾರತೀಯ ಟೆನಿಸ್ ಲೋಕದ ತಾರೆ ಲಿಯಾಂಡರ್ ಪೇಸ್ ಮತ್ತೊಮ್ಮೆ ತಮ್ಮ ಅದ್ಭುತ ಪ್ರತಿಭೆಯ ಮೂಲಕ ಯುವಕರು ನಾಚುವಂತೆ ಗ್ರಾನ್ ಸ್ಲಾಮ್ ಗಳನ್ನು ಗೆಲ್ಲುತ್ತಿದ್ದಾರೆ. 42ರ ಹರೆಯ ಆಟಗಾರ ಪೇಸ್, ವಿಂಬಲ್ಡನ್ ಮಿಶ್ರ ಡಬಲ್ಸ್ ಗೆಲ್ಲುವುದರ ಮೂಲಕ 16 ಗ್ರಾನ್ ಸ್ಲಾಮ್ ಕಿರೀಟ ತಮ್ಮ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.
ಭಾರತೀಯ ಟೆನಿಸ್ ಇತಿಹಾಸದಲ್ಲೇ ಯಾವೊಬ್ಬ ಆಟಗಾರ ಕೂಡಾ 16 ಗ್ರಾನ್ ಸ್ಲಾಮ್ ಪ್ರಶಸ್ತಿ ಗೆದ್ದಿಲ್ಲ. ಸುಮಾರು 16 ವರ್ಷಗಳ ಕೆಳಗೆ 1999ರಲ್ಲಿ ಮಹೇಶ್ ಭೂಪತಿ ಜತೆಗೂಡಿ ಫ್ರೆಂಚ್ ಓಪನ್ ಗೆದ್ದ ಲಿಯಾಂಡರ್ ಅವರು ಈಗ 2015ರಲ್ಲಿ ಹ್ಯಾಟ್ರಿಕ್ ಗ್ರಾನ್ ಸ್ಲಾಮ್ ಮೇಲೆ ಕಟ್ಟಿದ್ದಾರೆ. ಈ ವರ್ಷದಲ್ಲಿ ಹಿಂಗಿಸ್ ಜೊತೆ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಗೆದ್ದಿದ್ದಾರೆ. ಮುಂದಿನ ತಿಂಗಳು ಯುಎಸ್ ಓಪನ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ.[ಸಾನಿಯಾ ಮಿರ್ಜಾ- ಹಿಂಗಿಸ್ ಗೆ ವಿಂಬಲ್ಡನ್ ಗರಿ]
1999 ರಿಂದ 2015 ರ ತನಕ ಲಿಯಾಂಡರ್ ಪೇಸ್ ಗೆದ್ದಿರುವ ಗ್ರಾನ್ ಸ್ಲಾಮ್ ಟ್ರೋಫಿಗಳ ಪಟ್ಟಿ ಇಲ್ಲಿದೆ:
8 ಬಾರಿ ಪುರುಷರ ಡಬಲ್ಸ್- 3 ಬಾರಿ ಮಹೇಶ್ ಭೂಪತಿ, 2 ಬಾರಿ ಲೂಕಸ್ ದ್ಲೊಚಿ ಹಾಗೂ ರಾಡೆಕ್ ಸ್ಟೆಪನೆಕ್ ಹಾಗೂ ಮಾರ್ಟಿನ್ ಡಮ್ ಜೊತೆ 1 ಬಾರಿ. [ವಿಂಬಲ್ಡನ್ ಕಿರೀಟ ಉಳಿಸಿಕೊಂಡ ಜೋಕೊವಿಕ್]

1. 1999- ಫ್ರೆಂಚ್ ಓಪನ್, ಮಹೇಶ್ ಭೂಪತಿ ಜೊತೆ (ಭಾರತ).
2. 1999- ವಿಂಬಲ್ಡನ್, ಮಹೇಶ್ ಭೂಪತಿ ಜೊತೆ (ಭಾರತ).
3. 2001-ಫ್ರೆಂಚ್ ಓಪನ್, ಮಹೇಶ್ ಭೂಪತಿ ಜೊತೆ (ಭಾರತ).
4. 2006- ಯುಎಸ್ ಓಪನ್, ಮಾರ್ಟಿನ್ ಡಮ್ (ಚೆಕ್ ಗಣರಾಜ್ಯ)
5. 2009-ಫ್ರೆಂಚ್ ಓಪನ್,ಲೂಕಸ್ ದ್ಲೋಚಿ (ಚೆಕ್ ಗಣರಾಜ್ಯ)
6. 2009- ಯುಎಸ್ ಓಪನ್,ಲೂಕಸ್ ದ್ಲೋಚಿ (ಚೆಕ್ ಗಣರಾಜ್ಯ)
7. 2012-ಆಸ್ಟ್ರೇಲಿಯನ್ ಓಪನ್, ರಾಡೆಕ್ ಸ್ಟೆಪನೆಕ್ (ಚೆಕ್ ಗಣರಾಜ್ಯ)
8. 2013- ಯುಎಸ್ ಓಪನ್, ರಾಡೆಕ್ ಸ್ಟೆಪನೆಕ್ (ಚೆಕ್ ಗಣರಾಜ್ಯ)

ಮಿಶ್ರ ಡಬಲ್ಸ್ (8 ಪ್ರಶಸ್ತಿ)- ಕ್ಲಾರಾ ಬ್ಲಾಕ್ ಜೊತೆ 3, ಮಾರ್ಟಿನಾ ನವತ್ರಿಲೋವಾ ಹಾಗೂ ಮಾರ್ಟಿನಾ ಹಿಂಗಿಸ್ ಜೊತೆ 2, ಲೀಸಾ ರೇಮಂಡ್ ಜೊತೆ 1. [ಸೆರೆನಾ ಅತ್ಯಂತ ಹಿರಿಯ ವಿಂಬಲ್ಡನ್ ಕ್ವೀನ್]
1. 1999- ವಿಂಬಲ್ಡನ್, ಲೀಸಾ ರೇಮಂಡ್ ಜೊತೆ (ಯುಎಸ್ಎ).
2. 2003- ಆಸ್ಟ್ರೇಲಿಯನ್ ಓಪನ್, ಮಾರ್ಟಿನಾ ನವತ್ರಿಲೋವಾ (ಯುಎಸ್ಎ)
3. 2003- ವಿಂಬಲ್ಡನ್, ಮಾರ್ಟಿನಾ ನವತ್ರಿಲೋವಾ (ಯುಎಸ್ಎ)
4. 2008- ಯುಎಸ್ ಓಪನ್, ಕ್ಲಾರಾ ಬ್ಲಾಕ್ (ಜಿಂಬಾಬ್ವೆ)
5. 2010- ಆಸ್ಟ್ರೇಲಿಯನ್ ಓಪನ್, ಕ್ಲಾರಾ ಬ್ಲಾಕ್ (ಜಿಂಬಾಬ್ವೆ)
6. 2010- ವಿಂಬಲ್ಡನ್, ಕ್ಲಾರಾ ಬ್ಲಾಕ್ (ಜಿಂಬಾಬ್ವೆ)
7. 2015- ಆಸ್ಟ್ರೇಲಿಯನ್ ಓಪನ್, ಮಾರ್ಟಿನಾ ಹಿಂಗಿಸ್ (ಸ್ವಿಟ್ಜರ್ಲೆಂಡ್)
8. 2015- ವಿಂಬಲ್ಡನ್, ಮಾರ್ಟಿನಾ ಹಿಂಗಿಸ್ (ಸ್ವಿಟ್ಜರ್ಲೆಂಡ್)
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications