For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದ ಕನ್ನಡಿಗ ರೋಹನ್ ಬೋಪಣ್ಣಗೆ ಕ್ರಿಕೆಟ್ ದಿಗ್ಗಜರಿಂದ ಅಭಿನಂದನೆಗಳ ಮಹಾಪೂರ

ಶನಿವಾರ, ಜನವರಿ 27ರಂದು 43 ವರ್ಷದ ಭಾರತದ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಅವರು 2024ರ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಗೆಲ್ಲಲು ತಮ್ಮ ಜೊತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಸೇರಿಕೊಂಡರು.

ಓಪನ್ ಟೆನ್ನಿಸ್‌ನಲ್ಲಿ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಇತಿಹಾಸದ ಪುಸ್ತಕದಲ್ಲಿ ರೋಹನ್ ಬೋಪಣ್ಣ ತಮ್ಮ ಹೆಸರನ್ನು ಬರೆದಿದರು.

Indian Cricket Legends Congratulations to Rohan Bopanna For Won The 2024 Australian Open Trophy

ಮೆಲ್ಬೋರ್ನ್‌ನ ರಾಡ್ ಲೇವರ್ ಟೆನ್ನಿಸ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಜೋಡಿಯನ್ನು 7-6(0), 7-5 ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದರು.

ಎರಡು ವರ್ಷಗಳ ಹಿಂದೆ ಕ್ರೀಡೆಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ ನಂತರ, 43 ವರ್ಷದ ರೋಹನ್ ಬೋಪಣ್ಣ ಇದೀಗ ಹೆಚ್ಚಿನ ಜನರು ಕ್ರೀಡೆ ಕನಸು ಕಾಣುವಂತಹ ಸಾಧನೆ ಮಾಡಿದ್ದಾರೆ.

ಫೈನಲ್ ಪಂದ್ಯಕ್ಕೆ ಕೇವಲ ಮೂರು ದಿನಗಳ ಹಿಂದೆ ವಿಶ್ವದ ಅತ್ಯಂತ ಹಿರಿಯ ನಂಬರ್ 1 ಆಟಗಾರನಾಗಿದ್ದರು ಮತ್ತು ಈಗ ಅವರು ಓಪನ್ ಯುಗದಲ್ಲಿ (1968ರಿಂದ) ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ದಾಖಲೆಯನ್ನು ಹೊಂದಿದ್ದಾರೆ.

Indian Cricket Legends Congratulations to Rohan Bopanna For Won The 2024 Australian Open Trophy

ಭಾರತೀಯ ಟೆನ್ನಿಸ್ ತಾರೆ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ಅವರ ಅದ್ಭುತ ಸಾಧನೆಯನ್ನು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಇತರ ಭಾರತೀಯ ಕ್ರೀಡಾ ದಿಗ್ಗಜರು 'ಸ್ಫೂರ್ತಿ' ಎಂದು ಬಣ್ಣಿಸಿದ್ದಾರೆ.

ಭಾರತದ ಪ್ರಮುಖ ಟೆನ್ನಿಸ್ ಆಟಗಾರ 43ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಕಿರೀಟವನ್ನು ಗೆದ್ದ ಬಳಿಕ, ಲೆಜೆಂಡರಿ ಕ್ರಿಕೆಟಿಗ ತೆಂಡೂಲ್ಕರ್ ಅವರು ರೋಹನ್ ಬೋಪಣ್ಣ ಅವರ ಐತಿಹಾಸಿಕ ವಿಜಯವನ್ನು 'ಯಾರಾದರೂ, ಯಾವಾಗ, ಎಲ್ಲಿ ಬೇಕಾದರೂ ತಲುಪಬಹುದು' ಎಂಬುದಕ್ಕೆ ಉದಾಹರಣೆಯನ್ನಾಗಿ ನೀಡಿದರು.

"ಆಸ್ಟ್ರೇಲಿಯನ್ ಓಪನ್‌ನ ಗ್ರ್ಯಾಂಡ್ ಸ್ಟೇಜ್‌ನಲ್ಲಿ 43ನೇ ವಯಸ್ಸಿನಲ್ಲಿ ಅದನ್ನುಗೆದ್ದುಕೊಂಡ ರೋಹನ್ ಬೋಪಣ್ಣ ಅವರನ್ನು ನೋಡಿ, ನಿಮ್ಮ ಕ್ಷಣ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬರಬಹುದು. ತರಬೇತಿ ಮುಂದುವರಿಸಿ, ಕನಸು ಕಾಣುತ್ತಿರಿ ಮತ್ತು ನಿಮ್ಮ ಸಮಯ ಬಂದಾಗ ಹೆಜ್ಜೆ ಹಾಕಲು ಸಿದ್ಧರಾಗಿರಿ," ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್‌ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ಇತಿಹಾಸ ಸೃಷ್ಟಿಸಿದ್ದಕ್ಕಾಗಿ ರೋಹನ್ ಬೋಪಣ್ಣ ಅವರನ್ನು ಶ್ಲಾಘಿಸಿದರು. "ಎಂತಹ ಕಥೆ. ಏನು ಸ್ಫೂರ್ತಿ ರೋಹನ್ ಬೋಪಣ್ಣ. ಆಸ್ಟ್ರೇಲಿಯಾ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದಕ್ಕೆ ಅಭಿನಂದನೆಗಳು," ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ರೋಹನ್ ಬೋಪಣ್ಣ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ್ದಾರೆ ಮತ್ತು ಈ ಗೆಲುವು ಎಲ್ಲಾ ವಯಸ್ಸಿನ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂದರು.

ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು 'ಸ್ಫೂರ್ತಿದಾಯಕ' ಎಂದು ರೋಹನ್ ಬೋಪಣ್ಣ ಅವರನ್ನು ಅಭಿನಂದಿಸಿದ್ದು, "ವಯಸ್ಸಲ್ಲ, ಆದರೆ ಸ್ಫೂರ್ತಿಯು ನಮ್ಮನ್ನು ವ್ಯಾಖ್ಯಾನಿಸುತ್ತದೆ. ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರಿಗೆ ಅಭಿನಂದನೆಗಳು. ನಿಜವಾಗಿಯೂ ಸ್ಫೂರ್ತಿದಾಯಕ," ಎಂದು ವಿವಿಎಸ್ ಲಕ್ಷ್ಮಣ್ ಬರೆದುಕೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಟೆನ್ನಿಸ್ ದಿಗ್ಗಜನ ಐತಿಹಾಸಿಕ ಗೆಲುವನ್ನು ಶ್ಲಾಘಿಸಿದರು ಮತ್ತು "ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದಿದ್ದಾರೆ.

2010 ಮತ್ತು 2023ರಲ್ಲಿ ಯುಎಸ್ ಓಪನ್‌ನಲ್ಲಿ ಫೈನಲ್‌ನಲ್ಲಿ ಸೋತಿದ್ದ ರೋಹನ್ ಬೋಪಣ್ಣ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಕನ್ನಡಿಗ ರೋಹನ್ ಬೋಪಣ್ಣ ಅವರು ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ನಂತರ, ಓಪನ್ ಯುಗದಲ್ಲಿ ಪ್ರಮುಖ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯ ವ್ಯಕ್ತಿಯಾಗಿದ್ದಾರೆ. ಸೋಮವಾರವಷ್ಟೇ, ಅವರು ಎಟಿಪಿ ಡಬಲ್ಸ್ ಶ್ರೇಯಾಂಕದಲ್ಲಿ ಹಿರಿಯ ಅಗ್ರ ಶ್ರೇಯಾಂಕದ ಆಟಗಾರರಾಗುತ್ತಾರೆ.

ಇದು ಪುರುಷರ ಡಬಲ್ಸ್‌ನಲ್ಲಿ ಬೋಪಣ್ಣ ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ವಿಜಯವಾಗಿದೆ. 2017ರ ಫ್ರೆಂಚ್ ಓಪನ್‌ನಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಅವರ ಹಿಂದಿನ ಗ್ರ್ಯಾಂಡ್ ಸ್ಲಾಮ್ ಗೆಲುವು ಸಾಧಿಸಿದ್ದರು.

Story first published: Sunday, January 28, 2024, 9:40 [IST]
Other articles published on Jan 28, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+