Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ ಟೂರ್ನಿಯಿಂದ ಮರಿಯಾ ಶರಪೋವಾ ಔಟ್!

ಲಂಡನ್, ಜೂನ್ 11 : ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ತೊಡೆಯ ಗಾಯದಿಂದ ಚೇತರಿಸಿಕೊಳ್ಳದ ಶರಪೋವಾ ವಿಂಬಲ್ಡನ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

2004 ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಚಾಂಪಿಯನ್ ಆಗಿದ್ದ 30 ವರ್ಷದ ರಷ್ಯಾ ಆಟಗಾರ್ತಿ ಶರಪೋವಾ, ತೊಡೆ ಗಾಯ ಸಂಪೂರ್ಣವಾಗಿ ಗುಣಮುಖ ವಾಗದಿರುವುದು ಸ್ಕ್ಯಾನ್ ನಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶರಪೋವಾ ಹೇಳಿದ್ದಾರೆ.

[ಶರಪೋವಾ ರೀ ಎಂಟ್ರಿ, ಗೆಲುವಿನ ಮೂಲಕ ಶುಭಾರಂಭ]

Injured Maria Sharapova out of Wimbledon

ಜುಲೈ 31 ರಿಂದ ಸ್ಟ್ಯಾಂಡ್ ಪೋರ್ಡ್ ನಲ್ಲಿ ಆರಂಭವಾಗುವ ಟೂರ್ನಮೆಂಟ್ ನಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ.

ಡೋಪಿಂಗ್ ನಿಷೇಧದ ಅವಧಿ ಮುಗಿದ ಬಳಿಕ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ಶರಪೋವಾ ವಿಂಬಲ್ಡನ್ ಪಂದ್ಯಾವಳಿಯಿಂದ ಹೊರಗುಳಿದಿರುವುದಕ್ಕೆ ತೀವ್ರ ನಿರಾಸೆಯಾಗಿದೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+