ವೃತ್ತಿ ಬದುಕಿನ 1000ನೇ ಪಂದ್ಯದಲ್ಲಿ ಹತಾಶೆ ಅನುಭವಿಸಿದ ಸೆರೆನಾ

ರೋಮ್: ತನ್ನ ಟೆನಿಸ್ ವೃತ್ತಿ ಬದುಕಿನಲ್ಲಿ 1000ನೇ ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯೂಟಿಎ) ಪಂದ್ಯ ಆಡಿದ ಅಮೆರಿಕಾದ ಬಲಿಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ರೋಮ್‌ನಲ್ಲಿ ನಡೆಯುತ್ತಿರುವ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸೆರೆನಾ 1000ನೇ ಪಂದ್ಯ ಆಡಿದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ವೃತ್ತಿ ಬದುಕಿನ ಅತೀ ಅಪೂರ್ವ ಪಂದ್ಯದಲ್ಲೇ ಸೆರೆನಾ ವಿಲಿಯಮ್ಸ್ ಹತಾಶೆ ಅನುಭವಿಸಿದ್ದಾರೆ. ಬುಧವಾರ (ಮೇ 12) ನಡೆದ ಇಟಾಲಿಯನ್ ಓಪನ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಸೋತಿರುವ ಸೆರೆನಾ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಸುಮಾರು ಮೂರು ತಿಂಗಳ ಕಾಲ ಟೆನಿಸ್ ಅಂಕಣದಿಂದ ದೂರ ಉಳಿಸಿದ್ದ ಸೆರೆನಾ ಇಟಾಲಿಯನ್ ಓಪನ್ ಮೂಲಕ ಮತ್ತೆ ಸ್ಪರ್ಧೆಗಿಳಿದಿದ್ದರು. ಆದರೆ ಅರ್ಜೆಂಟೀನಾದ ನಾಡಿಯಾ ಪೊಡೊರೊಸ್ಕಾ ವಿರುದ್ಧದ ಪಂದ್ಯದಲ್ಲಿ 7-6 (8/6), 7-5ರ ಸೋಲಿನೊಂದಿಗೆ ಸೆರೆನಾ ಟೂರ್ನಿಯಿಂದ ಹೊರ ನಡೆದಿದ್ದಾರೆ.
39ರ ಹರೆಯದ ಸೆರೆನಾ ಮತ್ತು ನಾಡಿಯಾ ಮಧ್ಯೆ ಸುಮಾರು 2 ಗಂಟೆಗಳ ಕಾಳಗ ನಡೆಯಿತು. ಆದರೆ ಕಳೆದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ನಾಡಿಯಾ ವಿರುದ್ಧ ಸೆರೆನಾ ಸೋಲೊಪ್ಪಿಕೊಳ್ಳಬೇಕಾಯ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications