ಐಟಿಎಫ್ ಮಹಿಳಾ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಅಂಕಿತಾ ರೈನಾ-ಪ್ರಾರ್ಥನಾ ಜೋಡಿ

ಮಂಗಳವಾರ ಬೆಂಗಳೂರಿನ ಕೆಎಸ್‌ಎಲ್‌ಟಿಎ ಸ್ಟೇಡಿಯಂನಲ್ಲಿ ನಡೆದ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್‌ನ ಡಬಲ್ಸ್ ಕ್ವಾರ್ಟರ್‌ಫೈನಲ್ ಪ್ರವೇಶಿಸಲು ಭಾರತದ ಅಂಕಿತಾ ರೈನಾ ಮತ್ತು ಪ್ರಾರ್ಥನಾ ಥಾಂಬರೆ ಜೋಡಿ ಆಕರ್ಷಕ ಗೆಲುವು ದಾಖಲಿಸಿದೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ರೋಚಕ 16ನೇ ಸುತ್ತಿನ ಪಂದ್ಯದಲ್ಲಿ2 ನೇ ಶ್ರೇಯಾಂಕದ ಜೋಡಿ, 5-7, 6-3, 10-6 ಸೆಟ್‌ಗಳಿಂದ ವೈಲ್ಡ್ ಕಾರ್ಡ್ ಇಂಡೋ-ಜರ್ಮನ್ ಜೋಡಿ ಶರ್ಮಾದಾ ಬಾಲು ಮತ್ತು ಸಾರಾ ರೆಬೆಕಾ ಸೆಕುಲಿಕ್ ಅವರನ್ನು ಸೋಲಿಸಿತು. ಈ ಮಧ್ಯೆ, ಮೂರನೇ ಶ್ರೇಯಾಂಕಿತ ಇಂಡೋ-ಸ್ವೀಡನ್ ಜೋಡಿ ರುತುಜಾ ಭೋಸಲೆ ಮತ್ತು ಜಾಕ್ವೆಲಿನ್ ಅವಾದ್ ಅವರು ದಕ್ಷಿಣ ಕೊರಿಯಾದ ಜಿ ಹೀ ಚೋಯ್ ಮತ್ತು ಲೀ ಯಾ-ಹ್ಸುವಾನ್ (ತೈಪೆ) ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿ ಅಂತಿಮ -8 ಹಂತಕ್ಕೆ ಮುನ್ನಡೆಯಿತು.
ಮತ್ತೊಂದೆಡೆ, ಭಾರತದ ಜೋಡಿಗಳಾದ ಪ್ರಗತಿ ನಾರಾಯಣ್ ಮತ್ತು ಪ್ರತಿಭಾ ನಾರಾಯಣ್ ಅವರು ಅನಸ್ತಾಸಿಯಾ ಕೊವಲೆವಾ ಮತ್ತು ಹನ್ನಾ ವಿನಾಹ್ರಾದವಾ ವಿರುದ್ಧ 4-6, 2-6 ಸೆಟ್ ಗಳಿಂದ ಸೋತು ರೌಂಡ್ ಆಫ್ -16 ರಲ್ಲಿನಿರ್ಗಮಿಸಿದರು. ವಿಶ್ವದ ಮಾಜಿ ನಂ.38 ಆಟಗಾರ್ತಿ ಸ್ಲೊವೇನಿಯಾದ ಡಾಲಿಲಿಯಾ ಜಕುಪೊವಿಕ್ ಹಾಗೂ ಫ್ರಾನ್ಸ್‌ನ ಅಮಂಡಿನ್ ಹೆಸ್ಸೆ ವಿರುದ್ಧ 6-7(5), 7-5, 5-10 ಅಂತರದಲ್ಲಿ ವೈದೇಹಿ ಚೌಧರಿ ಮತ್ತು ಶ್ರೀವಳ್ಳಿ ರಶ್ಮಿಕಾ ಜೋಡಿಯೂ ಸೋತು ನಿರಾಸೆ ಕಂಡಿತು.
ಇದಕ್ಕೂ ಮುನ್ನ ಟೂರ್ನಿಯನ್ನು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ (ಬಜೆಟ್) ಕಾರ್ಯದರ್ಶಿ ಡಾ.ಎಕ್ರೂಪ್ ಕೌರ್ ಐಎಎಸ್, ಕೆಪಿಬಿ ಫ್ಯಾಮಿಲಿ ಟ್ರಸ್ಟ್ ಸಂಸ್ಥಾಪಕ ಕೆ.ಪಿ.ಬಾಲರಾಜ್, ಕೆಎಸ್‌ಎಲ್‌ಟಿಎ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ಮತ್ತು ಟೂರ್ನಮೆಂಟ್ ನಿರ್ದೇಶಕ ಪೀಟರ್ ವಿಜಯ್ ಕುಮಾರ್ ಉದ್ಘಾಟಿಸಿದರು.
ಇನ್ನು ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಜಪಾನಿನ ಇಕುಮಿ ಯಮಝಾಕಿ ಮೂರನೇ ಶ್ರೇಯಾಂಕದ ಸಕುರಾ ಹೊಸೊಗಿ ಅವರನ್ನು 5-7, 3-6 ಸೆಟ್ ಗಳಿಂದ ಸೋಲಿಸಿದರು. ಬೆಂಗಳೂರಿನ ಶರ್ಮದಾ ಬಾಲು 2-6, 4-6 ಅಂತರದಲ್ಲಿ ಬ್ರಿಟನ್‌ನ 8ನೇ ಶ್ರೇಯಾಂಕದ ಈಡನ್ ಸಿಲ್ವಾ ವಿರುದ್ಧ ನಿರಾಸೆ ಅನುಭವಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications