Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಟಿಎಫ್‌ ಮಹಿಳಾ ಓಪನ್‌: 2ನೇ ಶ್ರೇಯಾಂಕದ ಗ್ರಾಮಮತಿಕೊಪೌಲುಗೆ ಆಘಾತ ನೀಡಿದ ರುತುಜಾ ಭೋಸಲೆ

ITF Womens Open: Rutuja Bhosale win against No. 2 seed Grammatikopoulou in 1st round

ಭಾರತದ ರುತುಜಾ ಭೋಸಲೆ ಅವರು ಕೆಪಿಬಿ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಆರಂಭಿಕ ಸುತ್ತಿನಲ್ಲಿ4-6, 6-4, 6-0 ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ವ್ಯಾಲೆಂಟಿನಿ ಗ್ರಾಮಮತಿಕೊಪೌಲು ಅವರನ್ನು ಮಣಿಸಿ ಮಿಂಚಿದ್ದಾರೆ.

ಶ್ರೇಯಾಂಕ ರಹಿತ ಭೋಸಲೆ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಅವರು ತಮ್ಮ ಕಠಿಣ ಗ್ರೀಕ್‌ ಎದುರಾಳಿ ವಿರುದ್ಧ ಮೂರು ಸೆಟ್‌ಗಳಲ್ಲಿ ಗೆದ್ದು 16ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಐಟಿಎಫ್‌ ಮಹಿಳಾ ವಿಶ್ವ ಟೆನಿಸ್‌ ಟೂರ್ನಿಯ ಭಾಗವಾಗಿ ನಡೆಯುತ್ತಿರುವ 40 ಸಾವಿರ ಅಮೆರಿಕನ್‌ ಡಾಲರ್‌ ಮೊತ್ತದ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (ಕೆಎಸ್‌ಎಲ್‌ಟಿಎ) ಆಯೋಜಿಸಿದೆ.

ಕಳೆದ ತಿಂಗಳು ತನ್ನ ಎರಡನೇ ಐಟಿಎಫ್‌ ಮಹಿಳಾ ಟೂರ್‌ ಪ್ರಶಸ್ತಿಯನ್ನು ಗೆದ್ದ ಇನ್ನೊಬ್ಬ ಭಾರತೀಯ ಆಟಗಾರ್ತಿ ಜೀಲ್‌ ದೇಸಾಯಿ, ಜರ್ಮನ್‌ ಕ್ವಾಲಿಫೈಯರ್‌ ರೆಬೆಕ್ಕಾ ಸಾರಾ ಸೆಕುಲಿಕ್‌ ವಿರುದ್ಧ 6-3, 6-2 ಸೆಟ್‌ಗಳಿಂದ ಜಯಗಳಿಸುವ ಮೂಲಕ ಅದ್ಭುತ ಆರಂಭ ಕಂಡರು. ಅಹ್ಮದಾಬಾದ್‌ ಮೂಲದ 24 ವರ್ಷದ ದೇಸಾಯಿ , ವೈಲ್ಡ ಕಾರ್ಡ್‌ ಮೂಲಕ ಪಂದ್ಯಾವಳಿಗೆ ಪ್ರವೇಶಿಸಿದ್ದಾರೆ. ಅಂಕಿತಾ ರೈನಾ ಕೂಡ ನಿರೀಕ್ಷೆಗೆ ತಕ್ಕಂತೆ ಆಡಿದ್ದು ಸಹ ಆಟಗಾರ್ತಿ ವಂಶಿತಾ ಪಠಾನಿಯಾ ಅವರನ್ನು 6-3, 6-0 ಸೆಟ್‌ಗಳಿಂದ ಸೋಲಿಸಿದರು.

ಇದಕ್ಕೂ ಮುನ್ನ ಜೆಕ್‌ ಗಣರಾಜ್ಯದ ಬ್ರೆಂಡಾ ಫ್ರುಹ್ವಿರ್ಟೊವಾ 6-1, 6-0 ಸೆಟ್‌ಗಳಿಂದ ತೈಪೆಯ ಲೀ ಯಾ-ಹ್ಸುವಾನ್‌ ವಿರುದ್ಧ ಜಯ ಸಾಧಿಸಿದರು. ಈ ವರ್ಷದ ಆರಂಭದಲ್ಲಿಆಸ್ಪ್ರೇಲಿಯಾದಲ್ಲಿಗ್ರ್ಯಾಂಡ್‌ ಸ್ಪ್ಯಾಮ್‌ಗೆ ಪಾದಾರ್ಪಣೆ ಮಾಡಿದ ಫ್ರುಹ್ವಿರ್ಟೊವಾ, ಆಸ್ಪ್ರೇಲಿಯನ್‌ ಓಪನ್‌ ಮುಖ್ಯ ಡ್ರಾವನ್ನು ತಲುಪಿದ ಐದನೇ ಕಿರಿಯ ಅರ್ಹತಾ ಆಟಗಾರ್ತಿ ಎನಿಸಿದ್ದರು.

ಇನ್ನು ಅರ್ಹತಾ ಸುತ್ತಿನಲ್ಲಿಎರಡು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ ವೈದೇಹಿ ಚೌಧರಿ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ ಮತ್ತು ಆರನೇ ಶ್ರೇಯಾಂಕದ ಇಂಡೋನೇಷ್ಯಾದ ಮ್ಯಾಡೆಲಿನ್‌ ನುಗ್ರೊಹೊ ವಿರುದ್ಧ 2-6, 1-6 ಸೆಟ್‌ಗಳಿಂದ ನಿರಾಸೆ ಅನುಭವಿಸಿದರು. ಭಾರತದ ಮತ್ತೊಬ್ಬ ವೈಲ್ಡ್ ಕಾರ್ಡ್‌ ಆಟಗಾರ್ತಿ ಸಹಜಾ ಯಮಲಪಲ್ಲಿ6-7 (8), 3-6ರಲ್ಲಿ ಡಯಾನಾ ಮಾರ್ಸಿಂಕೆವಿಕಾ ಎದುರು ಸೋಲು ಕಂಡರು.

Story first published: Wednesday, March 8, 2023, 22:05 [IST]
Other articles published on Mar 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+