For Quick Alerts
ALLOW NOTIFICATIONS  
For Daily Alerts

ಐಟಿಎಫ್‌ ಮಹಿಳಾ ಓಪನ್‌: ಫೈನಲ್‌ನಲ್ಲಿ ಮುಗ್ಗರಿಸಿದ ಅಂಕಿತಾ; ಬ್ರೆಂಡಾ ಫ್ರುಹ್ವಿರ್ಟೊವಾ ಮುಡಿಗೆ ಚಾಂಪಿಯನ್ ಪಟ್ಟ

ITF Women’s Open: Top seed Brenda Fruhvirtova won Final match against India’s Ankita Raina to clinch title

ಐಟಿಎಫ್‌ ಮಹಿಳಾ ಓಪನ್‌ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗ ಫೈನಲ್ ಪಂದ್ಯ ಇಂದು ನಡೆಯಿತು. ಅಗ್ರ ಶ್ರೇಯಾಂಕದ ಬ್ರೆಂಡಾ ಫ್ರುಹ್ವಿರ್ಟೋವಾ ಅವರು ಭಾರತದ ಅಂಕಿತಾ ರೈನಾ ಮುಖಾಮುಖಿಯಾಗಿದ್ದು ಈ ಸೆಣೆಸಾಟದಲ್ಲಿ ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ಸೋಲು ಕಂಡಿದ್ದಾರೆ. ಅಂಕಿತಾ ರೈನಾ ಅವರನ್ನು ಬ್ರೆಂಡಾ ಫ್ರುಹ್ವಿರ್ಟೋವಾ 0-6, 6-4, 6-0 ಸೆಟ್‌ಗಳ ಅಂತರದಿಂದ ಸೋಲಿಸಿ ಕೆಪಿಬಿ ಟ್ರಸ್ಟ್‌ ಐಟಿಎಫ್‌ ಮಹಿಳಾ ಓಪನ್‌ ಟೆನಿಸ್‌ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕೆಎಸ್‌ಎಲ್‌ಟಿಎ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್‌ ಹೋರಾಟದಲ್ಲಿ ಜೆಕ್‌ ರಿಪಬ್ಲಿಕ್‌ನ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಬಹುಮಾನ ವಿತರಣಾ ಸಮಾರಂಭದಲ್ಲಿಕೆಪಿಬಿ ಫ್ಯಾಮಿಲಿ ಟ್ರಸ್ಟ್‌ ಸಂಸ್ಥಾಪಕ ಕೆಪಿ ಬಾಲರಾಜ್‌, ಕೆಎಸ್‌ಎಲ್‌ಟಿಎ ಗೌರವ ಕಾರ್ಯದರ್ಶಿ ಸುನಿಲ್‌ ಯಜಮಾನ್‌ ಮತ್ತು ಮಿಸೆಸ್‌ ಇಂಡಿಯಾ ಯೂನಿವರ್ಸ್‌ 2021ರ ಶ್ರುತಿ ಅಯ್ಯರ್‌ ಭಾಗವಹಿಸಿದ್ದರು.

ಜೆಕ್‌ ಗಣರಾಜ್ಯದ ವಿಶ್ವದ 163ನೇ ಶ್ರೇಯಾಂಕಿತ ಆಟಗಾರ್ತಿ ಫ್ರುಹ್ವಿರ್ಟೊವಾ ಅವರು ನಾಲ್ಕನೇ ಶ್ರೇಯಾಂಕದ ರೈನಾ ವಿರುದ್ಧದ ಮೊದಲ ಸೆಟ್‌ನಲ್ಲಿಸಂಪೂರ್ಣ ಹಿನ್ನಡೆ ಅನುಭವಿಸಿದ್ದರು. ಫ್ರುಹ್ವಿರ್ಟೋವಾ 4 ಡಬಲ್ಸ್‌ ತಪ್ಪುಗಳನ್ನು ಮಾಡಿದರು. ರೈನಾ ಯಾವುದೇ ಅವಕಾಶ ನೀಡದ ಕಾರಣ ಬಲವಂತವಾಗಿ ತಪ್ಪುಗಳನ್ನು ಎಸಗಿದರು ಫ್ರುಹ್ವಿರ್ಟೊವಾ. ಹೀಗಾಗಿ ಮೊದಲ ಸೆಟ್‌ಅನ್ನು 6-0 ಅಂತರದಿಂದ ಗೆದ್ದುಕೊಂಡ ಅಂಕಿಉತಾ ರೈನಾ ತಮ್ಮ ವಶಕ್ಕೆ ಪಡೆದುಕೊಂಡರು.

ಎರಡನೇ ಸೆಟ್‌ ಕೂಡ ಇದೇ ರೀತಿ ಆರಂಭವಾಗಿ ರೈನಾ 3-0 ಮುನ್ನಡೆ ಸಾಧಿಸಿದರು. ಆದರೆ ಐದನೇ ಗೇಮ್‌ನಲ್ಲಿನ ವಿರಾಮವು ಪಂದ್ಯದ ಮಹತ್ವದ ತಿರುವು ಎಂದು ಸಾಬೀತಾಯಿತು. ಏಕೆಂದರೆ ಫ್ರುಹ್ವಿರ್ಟೊವಾ ಆಬಳೀಕ ತಿರುಗಿ ಬಿದ್ದು ಸ್ಕೋರ್‌ಗಳನ್ನು 3-3 ರಲ್ಲಿಸಮಗೊಳಿಸಿದರು. ನಂತರ ಅವರು 9ನೇ ಗೇಮ್‌ನಲ್ಲಿ ಬ್ರೇಕ್‌ ಪಾಯಿಂಟ್‌ಅನ್ನು ತೆಕ್ಕೆಗೆ ಹಾಕಿಕೊಂಡು 5-4 ಮುನ್ನಡೆ ಸಾಧಿಸಿದರು.

ಜೆಕ್‌ ಆಟಗಾರ್ತಿ ಬಳಿಕ ಪಂದ್ಯವನ್ನು ಸಂಪೂರ್ಣವಾಗಿ ತಮ್ಮತ್ತ ತೆಗೆದುಕೋಂಡು ಹೀಗುವಲ್ಲಿ ಯಶಸ್ವಿಯಾದರು. ಹೀಗೆ ಎರಡನೇ ಸೆಟ್‌ ಸೋತ ಬಳಿಕ ಮಂಕಾದಂತೆ ಕಂಡು ಬಂದ ರೈನಾ ಮೂರನೇ ಸೆಟ್‌ನಲ್ಲಿಅಷ್ಟೇನೂ ಗಮನ ಸೆಳೆಯಲು ಸಾಧ್ಯವಾಗಲಿಲ್ಲ.

ನಾಲ್ಕನೇ ಗೇಮ್‌ನಲ್ಲಿ ರೈನಾಗೆ ವಿರಾಮ ನೀಡುವ ಅವಕಾಶವಿತ್ತು ಆದರೆ ಫ್ರುಹ್ವಿರ್ಟೊವಾ ಸರ್ವ್‌ ಇಲ್ಲಿಯೂ ಮೇಲುಗೈ ಸಾಧಿಸಿದರು. ಎರಡು ಗಂಟೆ 19 ನಿಮಿಷಗಳ ತೀವ್ರ ಹೋರಾಟದ ನಂತರ ಫ್ರುಹ್ವಿರ್ಟೊವಾ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು.

"ಮೊದಲ ಸೆಟ್‌ನಲ್ಲಿ ನನಗೆ ಉತ್ತಮ ಆರಂಬ ದೊರೆಯಲಿಲ್ಲ. ಅಲ್ಲದೆ ನಾನು ನನ್ನೊಂದಿಗೆ ಹೋರಾಡುತ್ತಿರುವಂತೆ ಭಾಸವಾಯಿತು. ಆ ಸಮಯದಲಿ ರೈನಾ ಉತ್ತಮವಾಗಿ ಆಡುತ್ತಿದ್ದ ಕಾರಣ ನಾನು ಆರಂಭಿಕ ಸೆಟ್‌ ಕಳೆದುಕೊಳ್ಳಬೇಕಾಯಿತು. ಆದರೆ ನಾನು ಎರಡನೇ ಸೆಟ್‌ ಗೆದ್ದ ನಂತರ ಎಲ್ಲವೂ ಸುಲಭವಾಯಿತು" ಎಂದು ಫ್ರುಹ್ವಿರ್ಟೊವಾ ಗೆಲುವಿನ ನಂತರ ಹೇಳಿದರು.

Story first published: Sunday, March 12, 2023, 21:44 [IST]
Other articles published on Mar 12, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+