ಫ್ರೆಂಚ್ ಓಪನ್: ಲಿಯಾಂಡರ್ ಜೋಡಿಗೆ ಸೋಲು
ಪ್ಯಾರಿಸ್, ಜೂನ್ 2: ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರು, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಿಂದ ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ಈ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪೇಸ್ ಹಾಗೂ ಅವರ ಅಮೆರಿಕ ಜತೆಗಾರ ಸ್ಕಾಟ್ ಲಿಪ್ ಸ್ಕಿ, ಸ್ಪೇನ್ ನ ಜೋಡಿಯಾದ ಡೇವಿಡ್ ಮರೆರೊ ಹಾಗೂ ಟಾಮಿ ರೊಬ್ರೆಡೊ ಜೋಡಿ ವಿರುದ್ದ 7-6 (7-3), 6-2 ನೇರ ಸೆಟ್ ಗಳ ಅಂತರದಲ್ಲಿ ಸೋಲು ಕಂಡರು.[ಫ್ರೆಂಚ್ ಓಪನ್: ಲಿಯಾಂಡರ್, ಬೋಪಣ್ಣಗೆ ಮುನ್ನಡೆ]

ಬುಧವಾರ ನಡೆದಿದ್ದ ಇದೇ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್- ಲಿಪ್ ಸ್ಕಿ ಜೋಡಿ, ಮಾಲ್ಡೋವಾದ ರಡು ಅಲ್ಬರ್ಟ್ ಹಾಗೂ ಕೊರಿಯಾದ ಹೆಯಿನ್ ಚುಂಗ್ ಜೋಡಿ ವಿರುದ್ದ 7-6 (5), 4-6, 6-2 ಸೆಟ್ ಗಳಲ್ಲಿ ಗೆಲುವು ಸಾಧಿಸಿ, ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿತ್ತು.
ಇದೀಗ, ದ್ವಿತೀಯ ಸುತ್ತಿನಲ್ಲಿ ಸೋಲು ಅನುಭವಿಸಿದ ಕಾರಣದಿಂದಾಗಿ, ಲಿಯಾಂಡರ್ ಪೇಸ್ ಜೋಡಿ ಈ ವಿಭಾಗದಿಂದ ಹೊರಬಿದ್ದಿದೆ.
Story first published: Wednesday, January 3, 2018, 10:14 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications