ಫ್ರೆಂಚ್ ಓಪನ್: ಲಿಯಾಂಡರ್, ಬೋಪಣ್ಣಗೆ ಮುನ್ನಡೆ
ಪ್ಯಾರಿಸ್ (ಫ್ರಾನ್ಸ್), ಜೂನ್ 1: ಭಾರತೀಯ ಟೆನಿಸ್ ತಾರೆಯರಾದ ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸ್ ವಿಭಾಗದ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಗೆಲುವು ಪಡೆದು ತಮ್ಮ ಜತೆಗಾರರೊಂದಿಗೆ ದ್ವಿತೀಯ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ.
ಆದರೆ, ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಆ ವಿಭಾಗದಿಂದ ನಿರ್ಗಮಿಸಿದ್ದಾರೆ.[ಫ್ರೆಂಚ್ ಓಪನ್: ಮೊದಲ ಸುತ್ತಿನಲ್ಲಿ ಮುಗ್ಗರಿಸಿದ ಸಾನಿಯಾ ಜೋಡಿ]
ಬುಧವಾರ (ಮೇ 31) ನಡೆದ ಪುರುಷರ ಡಬಲ್ಸ್ ವಿಭಾಗದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಪೇಸ್ ಹಾಗೂ ಬೋಪಣ್ಣ ಜೋಡಿ ಗೆಲುವು ಕಂಡವು.

ಪೇಸ್ ಹಾಗೂ ಅವರ ಅಮೆರಿಕದ ಜತೆಗಾರ ಸ್ಕಾಟ್ ಲಿಪ್ ಸ್ಕಿ, ಮಾಲ್ಡೋವಾದ ರಡು ಅಲ್ಬರ್ಟ್ ಹಾಗೂ ಕೊರಿಯಾದ ಹೆಯಿನ್ ಚುಂಗ್ ಜೋಡಿ ವಿರುದ್ದ 7-6 (5), 4-6, 6-2 ಸೆಟ್ ಗಳಲ್ಲಿ ಗೆಲುವು ಸಾಧಿಸಿತು.
ಬುಧವಾರವೇ ನಡೆದ ಪುರುಷರ ಡಬಲ್ಸ್ ನ ಮತ್ತೊಂದು ಪಂದ್ಯದಲ್ಲಿ ರೋಹನ್ ಬೋಪಣ್ಣ ಅವರು, ಉರುಗ್ವೆಯ ಜತೆಗಾರ ಪಾಬ್ಲೋ ಕ್ಯುವಾಸ್ ಅವರೊಂದಿಗೆ ಕಣಕ್ಕಿಳಿದು, ಫ್ರಾನ್ಸ್ ನ ಜೋಡಿಯಾದ ಮಥಿಯಾಸ್ ಬೋರ್ಗ್ ಹಾಗೂ ಪಾಲ್ ಹೆನ್ರಿ ಮಥಿಯು ಜೋಡಿ ವಿರುದ್ಧ 6-1, 6-1 ನೇರ ಸೆಟ್ ಗಳಿಂದ ಜಯ ಸಾಧಿಸಿ, ದ್ವಿತೀಯ ಸುತ್ತಿಗೆ ಕಾಲಿಟ್ಟರು.[ಪತ್ರಕರ್ತೆಗೆ ಬಲವಂತವಾಗಿ ಕಿಸ್ ಮಾಡಿದ ಟೆನಿಸ್ ಪಟು]
ಇನ್ನು, ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಕಜಕಿಸ್ತಾನದ ಯರೋಸ್ಲಾವಾ ಶ್ವೆಡೋವಾ ಜೋಡಿ, ರಷ್ಯಾದ ಡೇರಿಯಾ ಗಾವ್ರಿಲೋವಾ ಹಾಗೂ ಅನಾಸ್ತೇನಿಯಾ ಪಾವ್ಲಿಚೆಂಕೋವಾ ಜೋಡಿ ವಿರುದ್ಧ 7-6 (5), 1-6, 2-6 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.[ಕುಂಬ್ಳೆ-ಕೊಹ್ಲಿ ಕಲಹ ನಿನ್ನೆ ಮೊನ್ನೆಯದ್ದಲ್ಲ, ತುಂಬಾ ಹಳೆ ಕಿರಿಕ್!]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications