ವಿಂಬಲ್ಡನ್ ಫೋಟೊ ಗ್ಯಾಲರಿ: ಮರಿಯಾ, ಸೆರೆನಾ ಮುನ್ನಡೆ
ಲಂಡನ್, ಜೂ.27: ಇಂಗ್ಲೆಂಡಿಗೆ ಯಾಕೋ ಟೈಂ ಚೆನ್ನಾಗಿಲ್ಲ. ಇತ್ತೀಚಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರವಾಸಿ ಲಂಕನ್ನರ ವಿರುದ್ಧ ಮಂಡಿಯೂರಿತ್ತು. ಇಂಗ್ಲೆಂಡ್ ಫುಟ್ಬಾಲ್ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಈ ನಡುವೆ ಕ್ರೀಡಾಭಿಮಾನಿಗಳು ನಿಧಾನಗತಿಯಲ್ಲಿ ಟೆನಿಸ್ ಕೋರ್ಟ್ ನತ್ತ ಮುಖ ಮಾಡುತ್ತಿದ್ದಾರೆ. ವಿಂಬಲ್ಡನ್ ಟೂರ್ನಿಯ ಚಿತ್ರಗಳು ನಿಮಗಾಗಿ ಇಲ್ಲಿದೆ.
ಐದು ಬಾರಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಹಾಗೂ ವಿಂಬಲ್ಡನ್ ಫೇವರೀಟ್ ಮರಿಯಾ ಶರಪೋವಾ ಅವರು ಮೂರನೇ ಸುತ್ತಿಗೆ ಸುಲಭವಾಗಿ ಪ್ರವೇಶಿಸಿದ್ದಾರೆ. ವಿಲಿಯನ್ಸ್ ತನ್ನ ಎದುರಾಳಿ ಸ್ಕೀಪರ್ಸ್ ರನ್ನು ಕೇವಲ 49 ನಿಮಿಷದಲ್ಲಿ ಸೋಲಿಸಿದರೆ, ಮರಿಯಾ ತನ್ನ ಪ್ರತಿಸ್ಪರ್ಧಿ ಬಾಕ್ಸಿಂಸ್ಕಿರನ್ನು 1 ಗಂಟೆ ಅವಧಿಯಲ್ಲಿ ಸೋಲಿಸಿದ್ದಾರೆ.
ಮರೆ ಮತ್ತೆ ಪ್ರಶಸ್ತಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಸಹಜವಾಗಿ ಅಭಿಮಾನಿಗಳಲ್ಲಿದೆ. ಆದರೆ, ಸೆರ್ಬಿಯಾದ ನೊವಾಕ್ ಜೊಕೋವಿಕ್ ಕಳೆದ ಬಾರಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಕಾದಿದ್ದಾರೆ. ಇದರ ಜತೆಗೆ ಹುಲ್ಲಿನ ಅಂಕಣದ ರಾಜ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಾಫೆಲ್ ನಡಾಲ್ ಅವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. [ವಿಂಬಲ್ಡನ್ ಟೆನಿಸ್ ಮುನ್ನೋಟ ಇಲ್ಲಿದೆ]

ಸೆರೆನಾ ಮೂರನೇ ಸುತ್ತಿಗೆ ಜಿಗಿತ
ಇತ್ತೀಚೆಗೆ ಲಯ ಕಳೆದುಕೊಂಡರೂ ಯುಎಸ್ ನ ಸೆರೆನಾ ವಿಲಿಯಮ್ಸ್ (ಬಲಗಡೆ) ತನ್ನ ಎದುರಾಳಿ ದಕ್ಷಿಣ ಆಫ್ರಿಕಾದ ಚಾನೆಲ್ ಸ್ಕ್ರೀಪೆರ್ಸ್ ವಿರುದ್ಧ 6-1, 6-1 ನೇರ ಸೆಟ್ ಗಳಲ್ಲಿ 49 ನಿಮಿಷಗಳಲ್ಲಿ ಪಂದ್ಯವನ್ನು ಮುಗಿಸಿದ ಸಂಭ್ರಮದಲ್ಲಿದ್ದಾರೆ.

ಸೆರ್ಬಿಯಾದ ಶೂರ ಜೋಕಾವಿಕ್
ಸೆರ್ಬಿಯಾದ ಶೂರ ನೊವಾಕ್ ಜೋಕಾವಿಕ್ ಅವರು ಕಜಕಿಸ್ತಾನದ ಆಂಡ್ರೆ ಗೊಲುಬೆವ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ರಿಟರ್ನ್ ಶಾಟ್ ನೀಡುತ್ತಿರುವ ಭಂಗಿ

ಭಾರತದ ಸೋಮದೇವ್ ಗೆ ನಿರಾಶೆ
ಸೋಮದೇವ್ ದೇವರ್ ಮನ್ ಅವರು ಪೋಲ್ಯಾಂಡ್ ನ ಯಾನೊವಿಕ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.

ಸಾನಿಯಾ ಮಿರ್ಜಾ ಡಬಲ್ಸ್ ಮೋಡಿ
ಎಡಬದಿಯಲ್ಲಿರುವ ಭಾರತದ ಸಾನಿಯಾ ಮಿರ್ಜಾ ಅವರು ಜಿಂಬಾಬ್ವೆಯ ಕಾರ್ಲಾ ಬ್ಲಾಕ್ ಜತೆ ಸಮಾಲೋಚನೆಯಲ್ಲಿದ್ದಾರೆ. ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್, ರಷ್ಯಾದ ವೇರಾ ಜೊನಾರೆವಾ ವಿರುದ್ಧದ ಪಂದ್ಯದ ಚಿತ್ರ

ಮರಿಯಾ ಶರಪೋವಾ
ವಿಂಬಲ್ಡನ್ ಫೇವರೀಟ್ ಮರಿಯಾ ಶರಪೋವಾ ಅವರು ತನ್ನ ಪ್ರತಿಸ್ಪರ್ಧಿ ಬಾಕ್ಸಿಂಸ್ಕಿರನ್ನು 1 ಗಂಟೆ ಅವಧಿಯಲ್ಲಿ ಸೋಲಿಸಿದ್ದಾರೆ.

ಅನಾ ಇವನೊವಿಕ್ ಗೆ ಗೆಲುವು
ಸೆರ್ಬಿಯಾದ ಅನಾ ಇವನೊವಿಕ್ ಅವರು ಇಟಲಿಯ ಫ್ರಾನ್ಸಿಸ್ಕಾ ಶ್ಕಿಯಾವೊನ್ ಅವರನ್ನು ಸೋಲಿಸಿದ ಕ್ಷಣ

ರಾಫೆಲ್ ನಡಾಲ್ ಗೆ ಭರ್ಜರಿ ಗೆಲುವು
ಜೆಕ್ ರಿಪಬ್ಲಿಕ್ ನ ಲೂಕಸ್ ರಸೂಲ್ ಅವರ ವಿರುದ್ಧ ಸ್ಪೇನಿನ ರಾಫೆಲ್ ನಡಾಲ್ ಅವರು ವಿಜಯೋತ್ಸವ ಆಚರಿಸಿದ್ದು ಹೀಗೆ.

ಸ್ವೀಸ್ ವೀರ ರೋಜರ್ ಫೆಡರರ್
ಸ್ವೀಸ್ ವೀರ ರೋಜರ್ ಫೆಡರರ್ ಅವರು ಲಕ್ಸಂಬರ್ಗ್ ನ ಜಿಲ್ಲ್ಸ್ ಮುಲ್ಲರ್ ವಿರುದ್ಧ ಗೆಲುವು ಸಾಧಿಸಿದ ಕ್ಷಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications