ಪತ್ರಕರ್ತೆಯನ್ನು ಕಿಸ್ ಮಾಡಿದ ಟೆನಿಸ್ ಪಟು ಡಿಸ್ಮಿಸ್
ಪ್ಯಾರೀಸ್, ಮೇ 31: ಪತ್ರಕರ್ತೆಯನ್ನು ಬಲವಂತವಾಗಿ ಕಿಸ್ ಮಾಡಿದ ಟೆನಿಸ್ ಪಟುವನ್ನು ಫ್ರೆಂಚ್ ಓಪನ್ ಟೂರ್ನಮೆಂಟ್ ನಿಂದ ಹೊರ ಹಾಕಲಾಗಿದೆ.
ಪಂದ್ಯದ ಬಳಿಕ ಸಂದರ್ಶಿಸಲು ಬಂದಿದ್ದ ಟಿವಿ ಪತ್ರಕರ್ತೆ ಮಲೈ ಥಾಮಸ್ ಅವರ ಜೊತೆ ಆಟಗಾರ ಮಾಕ್ಸಿಮ್ ಅವರು ಅನುಚಿತ ವರ್ತಿಸಿದ್ದಾರೆ. ಇದಾದ ಬಳಿಕ ಫ್ರಾನ್ಸಿನ ಯುವ ಟೆನಿಸ್ ಆಟಗಾರ ಮಾಕ್ಸಿಮ್ ಹಮೊವ್ ಅವರನ್ನು ಫ್ರಾನ್ಸ್ ಟೆನಿಸ್ ಒಕ್ಕೂಟ(ಎಫ್‌ಎಫ್‌ಟಿ) ಅಮಾನತುಗೊಳಿಸಿದೆ.[ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ]

ಸಂದರ್ಶನದ ವೇಳೆ ಯುರೋ ಸ್ಫೋರ್ಟ್ಸ್ ವರದಿಗಾರ್ತಿ ಥಾಮಸ್ ಅವರು ಆಟಗಾರ ಮಾಕ್ಸಿಮ್ ಅವರ ಬಲ ಬದಿಯಲ್ಲಿ ನಿಂತಿರುತ್ತಾರೆ. ಹತ್ತಿರಕ್ಕೆ ಬಂದು ಪ್ರಶ್ನೆ ಕೇಳುವಂತೆ ಮಾಕ್ಸಿಮ್ ಸೂಚಿಸುತ್ತಾರೆ. ಅದರಂತೆ, ಆಟಗಾರನ ಎಡಭಾಗಕ್ಕೆ ಪತ್ರಕರ್ತೆ ಬರುತ್ತಾರೆ.
ಹತ್ತಿರಕ್ಕೆ ಎಳೆದುಕೊಂಡ ಮಾಕ್ಸಿಮ್ ಅವರು ಥಾಮಸ್ ಗೆ ಮುತ್ತುಕೊಡುತ್ತಾರೆ. ಆಕೆಯ ಪ್ರಶ್ನೆಗೆ ಉತ್ತರಿಸಿ, ಎರಡನೆ ಬಾರಿ ಮುತ್ತುಕೊಡುವಾಗ ಥಾಮಸ್ ತಡೆಯಲು ಯತ್ನಿಸುತ್ತಾರೆ.[ಫ್ರೆಂಚ್ ಓಪನ್ ಹಿನ್ನೋಟ: ಲಿಯಾಂಡರ್, ಭೂಪತಿ ಅತ್ಯುತ್ತಮ ಸಾಧಕರು]
ಮೂರನೇ ಬಾರಿ ಮಾಕ್ಸಿಮ್ ಬರಸೆಳೆದು ಚುಂಬಿಸುವಾಗ ಸಿಟ್ಟಿನಿಂದ ಆಕೆ ಆತನ ಎದೆಗೆ ಗುದುತ್ತಾರೆ. ಇದೆಲ್ಲವೂ ಲೈವ್ ಸುದ್ದಿ ಪ್ರಸಾರದ ವೇಳೆ ನಡೆದ ದೃಶ್ಯಾವಳಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.
21 ವರ್ಷ ವಯಸ್ಸಿನ 287ನೇ ಶ್ರೇಯಾಂಕದ ಆಟಗಾರ ಮಾಕ್ಸಿಮ್ ಅವರು ವೈಲ್ಡ್ ಕಾರ್ಡ್ ಗ್ರಾನ್ ಸ್ಲಾಮ್ ಗೆ ಪ್ರವೇಶ ಪಡೆದಿದ್ದರು. ಫ್ರೆಂಚ್ ಆಟಗಾರ ಮಾಕ್ಸಿಮ್ ಅವರು 3-6, 2-6, 4-6 ಅಂತರದ ನೇರ ಸೆಟ್ ಗಳಿಂದ ನಂ.22 ಆಟಗಾರ ಪಾಬ್ಲೋ ಕ್ಯೂವೆಸ್ ವಿರುದ್ಧ ಸೋಲು ಕಂಡಿದ್ದಾರೆ.
ಇದೆಲ್ಲ ಘಟನೆ ಬಳಿಕ ಬಹಿರಂಗವಾಗಿ ಮಾಕ್ಸಿಮ್ ಅವರು ಕ್ಷಮೆಯಾಚನೆ ಮಾಡಿದ್ದಾರೆ. ಅವಶ್ಯವಿದ್ದರೆ ವರದಿಗಾರ್ತಿ ಥಾಮಸ್ ಅವರಲ್ಲಿ ವೈಯಕ್ತಿಕವಾಗಿ ಕ್ಷಮೆ ಕೋರುತೇನೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications