ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ

ಆವೆ ಮಣ್ಣಿನ ಅಂಗಳದಲ್ಲಿ ಟೆನಿಸ್ ಲೋಕದ ದಿಗ್ಗಜರ ಆಗಮನವಾಗಿದ್ದು, ಮೇ 22 ರಿಂದ ಜೂನ್ 11ರ ತನಕ ನಡೆಯುವ ಫ್ರೆಂಚ್ ಓಪನ್ ಬಿರುಸಿನ ಕಾಳಗವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ

By Mahesh

ಪ್ಯಾರೀಸ್, ಮೇ 23: ಆವೆ ಮಣ್ಣಿನ ಅಂಗಳದಲ್ಲಿ ಟೆನಿಸ್ ಲೋಕದ ದಿಗ್ಗಜರ ಆಗಮನವಾಗಿದ್ದು, ಮೇ 22 ರಿಂದ ಜೂನ್ 11ರ ತನಕ ನಡೆಯುವ ಫ್ರೆಂಚ್ ಓಪನ್ ಬಿರುಸಿನ ಕಾಳಗವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಟೆನಿಸ್ ಪ್ರೇಮಿಗಳಿಗಾಗಿ ಫ್ರೆಂಚ್ ಓಪನ್ ಟೂರ್ನಮೆಂಟ್ ಗಾಗಿ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.

10ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆಲ್ಲುವ ಕನಸು ಹೊತ್ತಿರುವ ಸ್ಪೇನಿನ ರಾಫೆಲ್ ನಡಾಲ್ ಅವರು ಈ ಬಾರಿಯ ಫೇವರಿಟ್ ಎನಿಸಿಕೊಂಡಿದ್ದಾರೆ. 2014ರಲ್ಲಿ ಕಪ್ ಎತ್ತಿದ್ದ ಸ್ಪೇನಿನ ದಿಗ್ಗಜ ನಡಾಲ್ ಈ ಬಾರಿ ನಾಲ್ಕನೇ ಸೀಡೆಡ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ವಿಶ್ವದ ನಂ.2 ಆಟಗಾರ ನೊವಾಕ್ ಜೋಕೋವಿಕ್ ಅವರು ಫ್ರೆಂಚ್ ಓಪನ್ ಹಾಲಿ ಚಾಂಪಿಯನ್ ಆಗಿದ್ದು, ನಡಾಲ್ ಗೆ ಭಾರಿ ಪೈಪೋಟಿ ನೀಡುವ ನಿರೀಕ್ಷೆಯಿದೆ.

A complete guide to French Open 2017 (May 22 to June 11)


ಸ್ಟಾರ್ ಗಳಿಲ್ಲ: ಮಹಿಳೆಯ ಟೆನಿಸ್ ಸ್ಟಾರ್ ಸೆರೆನಾ ವಿಲಿಯನ್ಸ್ ಅವರು ಗರ್ಭಿಣಿಯಾಗಿರುವ ಕಾರಣ ಈ ಬಾರಿ ಟೂರ್ನಮೆಂಟ್ ನಲ್ಲಿ ಆಡುತ್ತಿಲ್ಲ. ಟೆನಿಸ್ ತಾರೆ ರೋಜರ್ ಫೆಡರರ್ ಅವರು ಕೂಡಾ ಟೂರ್ನಮೆಂಟ್ ಆರಂಭಕ್ಕೆ ಮುನ್ನವೆ ಹಿಂದೆ ಸರಿದಿದ್ದಾರೆ.

* ಇದು 55ನೇ ಫ್ರೆಂಚ್ ಓಪನ್ ಟೂರ್ನಮೆಂಟ್ ಆಗಿದೆ.
* ರಾಫೆಲ್ ನಡಾಲ್ ಅತಿ ಹೆಚ್ಚು ಬಾರಿ ಪುರುಷರ ಸಿಂಗಲ್ಸ್ ಪ್ರಶಸ್ತಿ(9) ಗೆದ್ದಿದ್ದರೆ, ಕ್ರಿಸ್ ಎವರ್ಟ್ ಅವರು ಅತಿ ಹೆಚ್ಚು ಬಾರಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ (7) ಗೆದ್ದುಕೊಂಡಿದ್ದಾರೆ.

* 2017ರ ಟೂರ್ನಮೆಂಟ್ ಅವಧಿ : ಮೇ 22 ರಿಂದ ಜೂನ್ 11. ಮೇ 28ರಿಂದ ಅಧಿಕೃತ ಆರಂಭ. ಮೇ 26ರಂದು ಆಟಗಾರರ ಸೀಡ್ ಘೋಷಣೆ.
* ಕ್ರೀಡಾಂಗಣ: ಸ್ಟೇಡ್ ರೋಲ್ಯಾಂಡ್ ಗರಾಸ್, ಪ್ಯಾರೀಸ್
* ಭಾರತದಲ್ಲಿ ನಿಯೋ ಸ್ಫೋರ್ಟ್ಸ್ ನಲ್ಲಿ ನೇರ ಪ್ರಸಾರ.


ಆಟಗಾರರ ಸಂಖ್ಯೆಗಳು
* ಪುರುಷ ಸಿಂಗಲ್ಸ್ : 128
* ಮಹಿಳಾ ಸಿಂಗಲ್ಸ್ : 128
* ಪುರುಷರ ಡಬಲ್ಸ್ : 64

* ಮಹಿಳಾ ಡಬಲ್ಸ್ : 64
* ಮಿಶ್ರ ಡಬಲ್ಸ್ : 32

A complete guide to French Open 2017 (May 22 to June 11)

* ಪುರುಷರ ಸಿಂಗಲ್ಸ್ ಹಾಲಿ ಚಾಂಪಿಯನ್ : ನೋವಾಕ್ ಜೋಕೋವಿಕ್
* ಮಹಿಳೆಯರ ಸಿಂಗಲ್ಸ್ ಹಾಲಿ ಚಾಂಪಿಯನ್ : ಗರ್ಬಿನಾ ಮುಗುರಜಾ
* ಮಹಿಳೆಯರ ಡಬಲ್ಸ್ : ಕರೋಲಿನಾ ಗಾರ್ಸಿಯಾ/ ಕ್ರಿಸ್ಟಿನಾ ಮ್ಲಾಡೆನೊವಿಕ್
* ಮಿಶ್ರ ಡಬಲ್ಸ್ : ಮಾರ್ಟಿನಾ ಹಿಂಗೀಸ್/ ಲಿಯಾಂಡರ್ ಪೇಯಸ್


ಪುರುಷರ ಸಿಂಗಲ್ಸ್ ಬಹುಮಾನ ಮೊತ್ತ: €2,100,000

ಮಹಿಳೆಯರ ಸಿಂಗಲ್ಸ್ ಬಹುಮಾನ ಮೊತ್ತ : €2,100,000
ಪುರುಷರ ಡಬಲ್ಸ್ : €660,000
ಮಹಿಳೆಯರ ಡಬಲ್ಸ್: 660,000
ಮಿಶ್ರ ಡಬಲ್ಸ್ : €140,000
(1 ಯುರೋ = 72.80 ರುಪಾಯಿ)


ಅಧಿಕೃತ ವೆಬ್ ಸೈಟ್ : www.rolandgarros.com
ಅಧಿಕೃತ ಟ್ವಿಟ್ಟರ್ : Roland-Garros @rolandgarros

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X