For Quick Alerts
ALLOW NOTIFICATIONS  
For Daily Alerts

ನೊವಾಕ್ ಜೊಕೊವಿಕ್ ಮುಡಿಗೆ 5ನೇ 'ಪ್ಯಾರಿಸ್ ಮಾಸ್ಟರ್ಸ್' ಕಿರೀಟ

Novak Djokovic cruises to fifth Paris Masters title

ಪ್ಯಾರಿಸ್, ನವೆಂಬರ್ 4: ಸರ್ಬಿಯಾ ಬಲಿಷ್ಠ ನೊವಾಕ್ ಜೊಕೊವಿಕ್, 5ನೇ ಬಾರಿಗೆ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ (ನವೆಂಬರ್ 3) ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ಕೆನಡಾದ ಯುವ ಟೆನಿಸ್ ಆಟಗಾರ ಡೆನಿಸ್ ಶಪೋವೊಲೊವ್ ಸೋಲಿಸಿ ಜೊಕೊವಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 32ರ ಹರೆಯದ ಜೊಕೊವಿಕ್, 20ರ ಎದುರಾಳಿ ಶಪೋವೊಲೊವ್ ಅವರನ್ನು 6-3, 6-4ರ ನೇರ ಸೆಟ್‌ನಿಂದ ಹಿಮ್ಮೆಟ್ಟಿಸಿದರು. ಈ ಜಯ ಜೊಕೊವಿಕ್‌ ಅವರ ವರ್ಷಾಂತ್ಯದ ವೇಳೆ ವಿಶ್ವ ನಂ.1 ಸ್ಥಾನದಲ್ಲೇ ಉಳಿಯುವ ಆಸೆಗೆ ಬಲ ತುಂಬಿದೆ.

ಟೂರ್ನಿಯಲ್ಲಿ ಜೊಕೊವಿಕ್‌ಗೆ ಪ್ರಬಲ ಸ್ಪರ್ಧೆಯೊಡ್ಡಲಿದ್ದ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್, ಗಾಯದ ಕಾರಣ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಇಲ್ಲಿ ಚಾಂಪಿಯನ್‌ ಪಟ್ಟ ಗೆದ್ದ ಜೊಕೊವಿಕ್‌ ಸದ್ಯ ವಿಶ್ವ ನಂ.1 ಸ್ಥಾನದಲ್ಲಿದ್ದಾರೆ. ಈಗ ನಂ.2ರಲ್ಲಿರುವ ನಡಾಲ್, ಮುಂದಿನ ವಾರ ನಂ.1 ಸ್ಥಾನಕ್ಕೇರುವ ಸಾಧ್ಯತೆಯೂ ಇದೆ.

Story first published: Monday, November 4, 2019, 0:38 [IST]
Other articles published on Nov 4, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+