ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್‌ಗೆ ಸೋಲುಣಿಸಿದ ಇವಾನ್ಸ್

ಮಾಂಟೆ ಕಾರ್ಲೋ: ಮಾಂಟೆ ಕಾರ್ಲೋವಿನಲ್ಲಿ ಗುರುವಾರ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೋವಿಕ್ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇಂಗ್ಲೆಂಡ್ ಆಟಗಾರ ಡಾನ್ ಇವಾನ್ಸ್ ಎದುರು ಸೋತಿರುವ ಜೊಕೋವಿಕ್ ಟೂರ್ನಿಯಿಂದ ಹೊರ ಬೀಳಬೇಕಾಗಿ ಬಂದಿದೆ.
ಗುರುವಾರ (ಏಪ್ರಿಲ್ 15) ನಡೆದ ಪುರುಷರ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೋವಿಕ್ ಅವರು ಡಾನ್ ಇವಾನ್ಸ್ ಎದುರು 6-4, 7-5 ಅಂತರದ ನೇರ ಸೆಟ್ ಸೋಲನುಭವಿಸಿದರು. ಪಂದ್ಯದಲ್ಲಿ ಜಕೋವಿಕ್ ಯಾವುದೇ ರಿದಂ ಕಾಣದೆ ಪರದಾಡಿದ್ದು ಕಂಡುಬಂತು.
ಮಾಂಟೆ ಕಾರ್ಲೋ ಟೂರ್ನಿಯಲ್ಲಿ 2013 ಮತ್ತು 2015ರಲ್ಲಿ ಪ್ರಶಸ್ತಿ ಗೆದ್ದಿದ್ದ ಜೊಕೋವಿಕ್, ಈ ಬಾರಿ ವಿಶ್ವ ನಂ.33ನೇ ಶ್ರೇಯಾಂಕಿತ ಇವಾನ್ಸ್ ಎದುರು ತಲೆ ಬಾಗಬೇಕಾಯಿತು. ಕಳೆದ ಫೆಬ್ರವರಿಯಲ್ಲಷ್ಟೇ ಜೊಕೋವಿಕ್ ಆಸ್ಟ್ರೇಲಿಯಾ ಓಪನ್‌ನಲ್ಲಿ 9ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿ ಬಂದಿದ್ದರು. ಆದರೆ ನೊವಾಕ್ ಈ ಸೋಲಿನೊಂದಿಗೆ ಈ ವರ್ಷದ ಮೊದಲ ಸೋಲು ಅನುಭವಿಸಬೇಕಾಗಿ ಬಂದಿದೆ.
ಜೊಕೋವಿಕ್ ಎದುರು ಗೆದ್ದು ಮುನ್ನಡೆದಿರುವ ಇವಾನ್ಸ್ ಸೆಮಿಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕಿತ, ಬೆಲ್ಜಿಯಂನ ಡೇವಿಡ್ ಗೋಫಿನ್ ಸವಾಲು ಸ್ವೀಕರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications