ಜೊಕೋವಿಕ್, ಫೆಡರರ್, ನಡಾಲ್, ಟಿಯಾಫೊಗೆ 2020ರ ಎಟಿಪಿ ಪ್ರಶಸ್ತಿ

ಬೆಂಗಳೂರು: ಸ್ಟಾರ್ ಟೆನಿಸ್ ಆಟಗಾರರಾದ ಸರ್ಬಿಯಾದ ನೊವಾಕ್ ಜೊಕೋವಿಕ್, ಸ್ವಿಸ್‌ನ ರೋಜರ್ ಫೆಡರರ್, ಸ್ಪೇನ್‌ನ ರಾಫೆಲ್ ನಡಾಲ್, ಅಮೆರಿಕಾದ ಫ್ರಾನ್ಸಿಸ್ ಟಿಯಾಫೊಗೆ 2020ರ ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್ (ಎಟಿಪಿ) ಪ್ರಶಸ್ತಿ ಲಭಿಸಿದೆ.
ನೊವಾಕ್ ಜೊಕೋವಿಕ್ ಅವರು ವರ್ಷಾಂತ್ಯಕ್ಕೆ ವಿಶ್ವ ನಂ.1 ಸ್ಥಾನಕ್ಕೇರಿದ್ದರು. ಆಸ್ಟ್ರೇಲಿಯಾ ಓಪನ್‌ನಲ್ಲಿ 8ನೇ ಬಾರಿಗೆ ಚಾಂಪಿಯನ್ ಅನ್ನಿಸಿಕೊಳ್ಳುವ ಮೂಲಕ ಜೊಕೋವಿಕ್ ನಂ.1 ಸ್ಥಾನಕ್ಕೇರಿದ್ದರು. ಅಷ್ಟೇ ಅಲ್ಲ ನಂ.1 ಸ್ಥಾನದೊಂದಿಗೆ 6ನೇ ಬಾರಿಗೆ ವರ್ಷ ಮುಗಿಸಿದ ದಾಖಲೆಗೂ ಜೊಕೋವಿಕ್ ಕಾರಣರಾಗಿದ್ದಾರೆ.
ರಷ್ಯಾದ ಆಂಡ್ರೆ ರುಬ್ಲೆವ್ ಅವರು ಈ ವರ್ಷ ನಂ.23ನೇ ಸ್ಥಾನಕ್ಕೆ ಜಿಗಿದ್ದಿದ್ದರು. ಒಟ್ಟು 5 ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ರುಬ್ಲೆವ್ ಈ ಜಿಗಿತ ಕಂಡಿದ್ದರು. ಎಟಿಪಿ ಟೂರ್‌ನಲ್ಲಿ ಭರ್ಜರಿ ಸ್ಥಾನ ಜಿಗಿತ ಕಂಡ ದಾಖಲೆಗೆ ರುಬ್ಲೆವ್ ಕಾರಣರಾಗಿದ್ದಾರೆ.
ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಫ್ರಾನ್ಸಿಸ್ ಟಿಯಾಫೊ ಅವರಿಗೆ ಆ್ಯಷ್ ಹ್ಯೂಮನಿಟೇರಿಯನ್ ಪ್ರಶಸ್ತಿ ನೀಡಲಾಗಿದೆ. 17ರ ಹರೆಯದ ಸ್ಪೇನ್‌ನ ಕಾರ್ಲೋಸ್ ಅಲ್ಕಾರಾಜ್ ಅವರು ಮೂರು ಪಂದ್ಯಗಳಲ್ಲಿ ಸ್ಪರ್ಧಿಸಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications