Swedish Open 2024 Final: ದಿಗ್ಗಜ ರಫೆಲ್ ನಡಾಲ್ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ನುನೊ ಬೋರ್ಗೆಸ್!
ಜುಲೈ 21 ಭಾನುವಾರ, ವಿಶ್ವದ 51ನೇ ಶ್ರೇಯಾಂಕದ ಆಟಗಾರ ನುನೊ ಬೋರ್ಗೆಸ್ ಸ್ವೀಡಿಷ್ ಓಪನ್‌ನಲ್ಲಿ ದಿಗ್ಗಜ ರಾಫೆಲ್ ನಡಾಲ್ ಅವರನ್ನು 6-3, 6-2 ಸೆಟ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ. ಈ ಅದ್ಭುತ ಗೆಲುವು 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ವಿರುದ್ಧ ಬಂದಿದೆ.
ಸ್ವೀಡಿಷ್ ಓಪನ್‌ನ ಫೈನಲ್‌ನಲ್ಲಿ ನುನೊ ಬೋರ್ಗೆಸ್ ವಿರುದ್ಧ ರಾಫೆಲ್ ನಡಾಲ್ 6-3, 6-2 ಸೆಟ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಪೋರ್ಚುಗೀಸ್ ಆಟಗಾರ ಎಟಿಪಿ ಟೂರ್‌ನಲ್ಲಿ ರಾಫೆಲ್ ನಡಾಲ್ ಅವರ ಸರ್ವ್ ಅನ್ನು 5 ಬಾರಿ ಮುರಿಯುವ ಮೂಲಕ ಮೊದಲ ಗೆಲುವು ದಾಖಲಿಸಿದರು.

ಕಳೆದ ಕೆಲವು ವರ್ಷಗಳಿಂದ 38ರ ಹರೆಯದ ನಡಾಲ್ ಗಾಯಗಳಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಅವರ ಶ್ರೇಯಾಂಕವು 261ಕ್ಕೆ ಕುಸಿದಿದೆ. ಒಲಿಂಪಿಕ್ಸ್‌ಗೆ ತನ್ನ ಫಿಟ್‌ನೆಸ್‌ಗೆ ಆದ್ಯತೆ ನೀಡುವ ಉದ್ದೇಶದಿಂದ ನಡಾಲ್ ಈ ವರ್ಷ ವಿಂಬಲ್ಡನ್ ಅನ್ನು ಬಿಟ್ಟುಬಿಡಲು ನಿರ್ಧರಿಸಿದ್ದರು.
ಇದರ ನಡುವೆ ಶ್ರೇಷ್ಠ ವೃತ್ತಿಜೀವನ ಮತ್ತು ಅಪಾರ ಅನುಭವದ ಹೊರತಾಗಿಯೂ ನಡಾಲ್ 27 ವರ್ಷದ ಪೋರ್ಚುಗೀಸ್ ಆಟಗಾರನ ವಿರುದ್ಧ ಗೆಲುವಿನ ಕೇಕೆ ಹಾಕಲು ಸಾಧ್ಯವಾಗಲಿಲ್ಲ.
ಬೋರ್ಹೆಸ್ ಗೆ ಈ ಗೆಲುವು ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಲು ಕಾರಣವಾಗಿದೆ. ತನ್ನ ಮೊದಲ ಎಟಿಪಿ ಫೈನಲ್‌ನಲ್ಲಿ ಆಡುವಾಗ, ಬೋರ್ಗೆಸ್ ಗಮನಾರ್ಹವಾದ ಹಿಡಿತದಿಂದ ನಡಾಲ್ ವಿರುದ್ಧ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾದರು.
ಮೊದಲ ಸೆಟ್ ಅನ್ನು 46 ನಿಮಿಷಗಳಲ್ಲಿ ಬೋರ್ಗೆಸ್ ಗೆದ್ದರು. ಎರಡನೇ ಸೆಟ್‌ನಲ್ಲಿ ಸತತ ಮೂರು ಗೇಮ್‌ಗಳನ್ನು ಗೆದ್ದು ಪ್ರಶಸ್ತಿಯನ್ನು ಬೋರ್ಗೆಸ್ ಖಚಿತಪಡಿಸಿಕೊಂಡರು.
ಪಂದ್ಯದ ನಂತರ ಮಾತನಾಡಿದ ಬೋರ್ಗೆಸ್, ಎಲ್ಲರೂ ರಾಫಾ ಗೆಲ್ಲಬೇಕೆಂದು ಬಯಸಿದ್ದರು ಎಂದು ನನಗೆ ತಿಳಿದಿದೆ. ನನ್ನ ಒಂದು ಭಾಗವು ಅದೇ ಬಯಸಿತ್ತು. ಆದರೆ ನನ್ನೊಳಗೆ ಏನೋ ದೊಡ್ಡದಾಗಿದೆ ನನ್ನನ್ನು ಗೆಲ್ಲುವಂತೆ ಮಾಡಿದೆ.
ಈ ಕ್ಷಣಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಒಟ್ಟಿನಲ್ಲಿ ನನಗೆ ತುಂಬಾ ಖುಷಿಯಾಗಿದೆ. ಏನು ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಗೆಲುವಿನ ಸಂತಸ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications