ಕ್ಲೈವ್ ಕೋರ್ಟ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ ರಾಫೆಲ್ ನಡಾಲ್ ಟೆನಿಸ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ನಡಾಲ್ ತಮ್ಮ ವೃತ್ತಿ ಜೀವನದಲ್ಲಿ ಈ ವರೆಗೆ ಒಟ್ಟು 22 ಗ್ರ್ಯಾಂಡ್ ಸ್ಲ್ಯಾಮ್ ಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ. ಈ ಮೂಲಕ ಅತಿ ಹೆಚ್ಚು ಪುರುಷರ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಟೆನಿಸ್ ಅಂಕಣದಲ್ಲಿ ರಾಫೆಲ್ ನಡಾಲ್ ಅವರ ಪಯಣ ಅದ್ಭುತ.
ಸ್ಪೇನ್‌ನ ಗೂಳಿ ಎಂದೇ ಖ್ಯಾತಿ ಪಡೆದಿರುವ ನಡಾಲ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ಇವರು ಗೆದ್ದ 22 ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ, ಫ್ರೆಂಚ್ ಓಪನ್‌ನ 14 ಟ್ರೋಫಿಗಳು ಸೇರಿವೆ. ಆ ಬಳಿಕ ಇವರು ನಾಲ್ಕು ಬಾರಿ ಯುಎಸ್ ಓಪನ್ ಕಿರಿಟ್ ತೊಟ್ಟಿದ್ದಾರೆ. ಇನ್ನು 2008ರಲ್ಲಿ ಬೀಜಿಂಗ್ ಹಾಗೂ 2016ರ ರಿಯೊ ಡಿ ಜನೈರೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡಲಾ ಬಂಗಾರದ ಸಾಧನೆ ಮಾಡಿರುವ ಆಟಗಾರ. ಮೈದಾನದಲ್ಲಿ ಸೊಗಸಾಗಿ ಆಡಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಫೆಲ್ ನಡಾಲ್, ವೈಯಕ್ತಿಕ ಜೀವನವೂ ಕುತೂಹಲದಿಂದ ಕೂಡಿದೆ.

15 ವರ್ಷದಿಂದ ಡೇಟಿಂಗ್
ರಾಫೆಲ್ ನಡಾಲ್ 15 ವರ್ಷಗಳ ಡೇಟಿಂಗ್ ನಂತರ ವಿವಾಹವಾಗಿದ್ದಾರೆ. ರಾಫೆಲ್ ನಡಾಲ್ 22 ಅಕ್ಟೋಬರ್ 2019 ರಂದು ತನ್ನ ಗೆಳತಿ ಮಾರಿಯಾ ಫ್ರಾನ್ಸಿಸ್ಕಾ ಪೆರೆಲ್ಲೊ ಅವರೊಂದಗೆ ಸಪ್ತ ಪದಿ ತುಳಿದರು. ಇವರು ತಮ್ಮ ಬಹುಕಾಲದ ಗೆಳತಿಗೆ ರೋಮ್‌ನಲ್ಲಿ ಮದುವೆಯ ಪ್ರಸ್ತಾಪ ಮಂಡಿಸಿದರು. ಬಳಿಕ ಸ್ಪೇನ್‌ನ ಅತ್ಯಂತ ದುಬಾರಿ ರೆಸಾರ್ಟ್ 'ಲಾ ಫೋರ್ಟಲೆಜಾ'ದಲ್ಲಿ ವಿವಾಹವಾದರು.
ಸಿಸ್ಕಾ ಪೆರೆಲ್ಲೊ ಅವರನ್ನು ನಡಾಲ್ ವರಿಸಿದ್ದು ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಅಂದಹಾಗೆ ಸಿಸ್ಕಾ ಪೆರೆಲ್ಲೊ ರಫೆಲ್ ಸಹೋದರಿಯ ಸ್ನೇಹಿತೆ. ಇವರನ್ನು ನಡಾಲ್ 2003ರಲ್ಲಿ ಮೊದಲ ಬಾರಿಗೆ ಭೇಟಿ ಆದರು. ಇದಾದ ಬಳಿಕ ಇಬ್ಬರು ಸ್ನೇಹಿತರಾದರು. ಅಲ್ಲಿಂದ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ರಾಫೆಲ್ ಟೀನ್ ಏಜ್‌ನಲ್ಲೇ ಡೇಟಿಂಗ್ ಆರಂಭಿಸಿದರು. ಸಿಸ್ಕಾ ಪೆರೆಲ್ಲೊ ಅವರೊಂದಿಗೆ 2003ರಿಂದ ಡೇಟಿಂಗ್ ಮಾಡುತ್ತಿದ್ದ ರಾಫೆಲ್, 15 ವರ್ಷದ ಬಳಿಕ ವಿವಾಹವಾದರು.

ಸಿಸ್ಕಾ ಪೆರೆಲ್ಲೊ ವಿಮಾ ಪಾಲಿಸಿ ಕೆಲಸಗಾರ್ತಿ ಅಲ್ಲದೆ ವ್ಯಾಪಾರ ಪದವೀಧರೆ. ಸದ್ಯ ಇವರು ನಡಾಲ್ ಫೌಂಡೇಶನ್‌ನ ಪ್ರಾಜೆಕ್ಟ್ ಮ್ಯಾನೇಜರ್ ಕೂಡ ಆಗಿದ್ದಾರೆ. ವೈಭವ ಪೂರಿತ ಮದುವೆಯನ್ನು ಮಾಡಿಕೊಂಡ ರಾಫೆಲ್ ನಡಾಲ್, ಕೇವಲ ಒಂದೇ ದಿನ ಹನಿಮೂನಗೆ ಹೋಗಿದ್ದರು. ಇದಕ್ಕೆ ಕಾರಣ ಟೆನಿಸ್ ಮೇಲಿನ ಅವರ ಪ್ರೀತಿ. ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಇವರು ಭಾಗವಹಿಸಬೇಕಿತ್ತು, ಹೀಗಾಗಿ ಶಾರ್ಟ್ ಹನಿಮೂನ್ ಪ್ಲ್ಯಾನ್ ಮಾಡಿದ್ದರು.

ನಡಾಲ್ ಪತ್ನಿ ಹೆಚ್ಚಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೆ ನಡಾಲ್ ಅವರ ಪಂದ್ಯಗಳ ಸ್ಥಳಕ್ಕೂ ಭೇಟಿ ನೀಡುವುದಿಲ್ಲ. ನಡಾಲ್ ಅವರ ಆಟದ ಮೇಲೆ ಚಿತ್ತ ಹರಿಸಲು ಅವರಿಗೆ ಸಮಯ ಬೇಕಾಗುತ್ತದೆ ಎಂದು ಸಿಸ್ಕಾ ಪೆರೆಲ್ಲೊ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.