ಇಟಾಲಿಯನ್ ಓಪನ್: ಶಪೋವೊಲೊವ್ ಮಣಿಸಿದ ನಡಾಲ್ ಕ್ವಾ.ಫೈ.ಗೆ ಪ್ರವೇಶ

ರೋಮ್: ಒಂಭತ್ತು ಬಾರಿಯ ಚಾಂಪಿಯನ್, ಸ್ಪೇನ್‌ನ ರಾಫೆಲ್ ನಡಾಲ್ ಗುರುವಾರ (ಮೇ 13) ರೋಮ್‌ನಲ್ಲಿ ನಡೆದ ಇಟಾಲಿಯನ್ ಓಪನ್ ಟೆನಿಸ್ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಸೋಲಿಸಿ 2 ಮ್ಯಾಚ್ ಪಾಯಿಂಟ್ಸ್‌ನೊಂದಿಗೆ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಾಫೆಲ್ ನಡಾಲ್, ಡೆನಿಸ್ ಶಪೋವೊಲೊವ್ ಅವರನ್ನು 3-6, 6-4, 7-6 (7/3)ರ ಅಂತರದಲ್ಲಿ ಸೋಲಿಸಿದರು. ಇಬ್ಬರ ಮಧ್ಯೆ ಭರ್ಜರಿ 3 ಗಂಟೆ 30 ನಿಮಿಷಗಳ ರೋಚಕ ಕದನ ನಡೆಯಿತು.
ದ್ವಿತೀಯ ಸೆಟ್‌ನ ಆರಂಭದಲ್ಲಿ ಅಸಲಿಗೆ ನಡಾಲ್ 0-3 ರ ಹಿನ್ನಡೆಯಲ್ಲಿದ್ದರು. ಆದರೆ ಆಟ ಮುಂದುವರೆದಂತೆ ಮತ್ತೆ ಲಯ ಕಂಡುಕೊಂಡು ಎದುರಾಳಿಯನ್ನು ಹಿಮ್ಮೆಟ್ಟಿಸುತ್ತಾ ಸಾಗಿದರು. ರೋಮ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಒಟ್ಟು 16 ಬಾರಿ ಲಾಸ್ಟ್ 8ಕ್ಕೆ ಪ್ರವೇಶಿಸಿದ ದಾಖಲೆಗೆ ನಡಾಲ್ ಕಾರಣರಾಗಿದ್ದಾರೆ.
ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಶನಲ್ಸ್ ಪಂದ್ಯಗಳಲ್ಲಿ ಇದು 97ನೇ ಬಾರಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ವಿಶೇಷ ಹಿರಿಮೆ ನಡಾಲ್ ಅವರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications