Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾಲ್ಕನೇ ಬಾರಿ ವಿಶ್ವದ ನಂ.1 ಸ್ಥಾನಕ್ಕೇರಿದ ಟೆನಿಸಿಗ ನಡಾಲ್

ನವದೆಹಲಿ, ಆಗಸ್ಟ್ 21: ಸ್ಪೇನ್ ನ ಹಿರಿಯ ಟೆನಿಸಿಗ ರಾಫೆಲ್ ನಡಾಲ್ ಅವರು, ಸೋಮವಾರ ಬಿಡುಗಡೆಯಾದ ಎಟಿಪಿ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ಇತ್ತೀಚೆಗೆ ನಡೆದ ಸಿನ್ಸಿನಾಟಿ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರಿಂದ ನಡಾಲ್ ಅವರಿಗೆ ಈ ಸ್ಥಾನ ಲಭಿಸಿದೆ. ಭಾನುವಾರ (ಆಗಸ್ಟ್ 20) ನಡೆದಿದ್ದ ಸಿನ್ಸಿನಾಟಿ ಟೆನಿಸ್ ಚಾಂಪಿಯನ್ ಶಿಪ್ ನ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಅವರು, ಫ್ರಾನ್ಸ್ ನ ರಿಚರ್ಡ್ ಗ್ಯಾಸ್ಕೆಟ್ ಅವರನ್ನು 6-3, 6-4 ಸೆಟ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ಗೆ ಕಾಲಿಟ್ಟಿದ್ದರು.

Rafael Nadal begins fourth stint as World No. 1 in ATP Rankings

ಒಂಭತ್ತು ವರ್ಷಗಳ ಹಿಂದೆ (2008) ನಡಾಲ್ ಅವರು ನಂಬರ್ ಒನ್ ಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ ಸ್ಪೇನ್ ನ ಮೊದಲನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆನಂತರ 2010ರಲ್ಲಿ ನಡಾಲ್ ಅವರು ಪುನಃ ನಂಬರ್ ಒನ್ ಸ್ಥಾನಕ್ಕೇರಿದ್ದರು. ಆನಂತರ, ಕೆಲ ದಿನಗಳ ನಂತರ, ಮತ್ತೆ ಆ ಸ್ಥಾನದಿಂದ ಕೆಳಗಿಳಿದ ಅವರು, ಮತ್ತೆ ಆ ಜಾಗಕ್ಕೆ ಬಂದಿದ್ದು 2013ರಲ್ಲಿ.

ಇದೀಗ, ಪುನಃ ನಂಬರ್ ಒನ್ ಪಟ್ಟಕ್ಕೇರಿರುವ ಅವರು, ನಾಲ್ಕನೇ ಬಾರಿಗೆ ಆ ಸಾಧನೆ ಮಾಡಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+