Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಫೆಲ್ ನಡಾಲ್: ಸೋಲಿನೊಂದಿಗೆ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ರಾಫೆಲ್ ನಡಾಲ್

ಟೆನಿಸ್‌ ಲೋಕದ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ರಾಫೆಲ್‌ ನಡಾಲ್‌ ವಿದಾಯ ಹೇಳಿದ್ದಾರೆ. ಡೇವಿಡ್ ಕಪ್‌ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಸ್ಪೇನ್‌ ಸ್ಟಾರ್ ಆಟಗಾರ ರಫೇಲ್ ಆಟಗಾರ ಆಡಿದರು. ನಡಾಲ್‌ ಅವರು ಇದೇ ಅಕ್ಟೋಬರ್‌ನಲ್ಲಿ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೆ ಇದೇ ವೇಳೆ ಡೇವಿಸ್‌ ಕಪ್‌ನಲ್ಲಿ ತಾವು ತಮ್ಮ ಕೊನೆಯ ಪಂದ್ಯ ಆಡುವುದಾಗಿ ತಿಳಿಸಿದ್ದರು. ಮಂಗಳವಾರ ನಡಾಲ್‌ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡಿ ಜಿಡ್‌ಸ್ಚುಲ್ಪ್ ವಿರುದ್ಧ ಆಡಿದರು.

ಮಂಗಳವಾರ ನಡೆದ ಡೇವಿಸ್‌ ಕಪ್‌ ಟೂರ್ನಿಯಲ್ಲಿ ಸ್ಪೇನ್ 1-2 ರಿಂದ ನೆದರ್ಲೆಂಡ್ಸ್‌ ವಿರುದ್ಧ ಸೋಲು ಕಂಡಿತು. ಈ ಪಂದ್ಯದಲ್ಲಿ ಸಿಂಗಲ್ಸ್‌ನಲ್ಲಿ ನಾಡಲ್ 4-6, 4-6 ರಿಂದ ಬೊಟಿಕ್ ವ್ಯಾನ್ ಡಿ ವಿರುದ್ಧ ಸೋಲು ಕಂಡರು. ಈ ಮೂಲಕ ಇವರು ತಮ್ಮ ಟೆನಿಸ್ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ನಿರಾಸೆ ಹೊಂದಿದರು. ಸ್ಪೇನ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆಘಾತ ಅನುಭವಿಸಿತು. ಈ ಎಂಟರ ಘಟ್ಟದ ಪಂದ್ಯದಲ್ಲಿ ಸ್ಪೇನ್‌ನ ಅಲ್ಕರಾಜ್, ಕಾರ್ಲೋಸ್ 7-6, 6-3 ರಿಂದ ಗ್ರೀಕ್ಸ್ಪೂರ್, ಟ್ಯಾಲನ್ ವಿರುದ್ಧ ಗೆಲುವು ಸಾಧಿಸಿದರು. ಉಳಿದಂತೆ ಡಬಲ್ಸ್‌ನಲ್ಲೂ ನೆದರ್ಲೆಂಡ್ಸ್‌ ಆಟಗಾರರ ಕೈ ಮೇಲಾಯಿತು.

Rafael Nadal Bids Farewell to Tennis After Davis Cup Loss

ನಡಾಲ್ ಭಾವುಕ

ಸ್ಟಾರ್ ಟೆನಿಸ್ ಪ್ಲೇಯರ್ ನಡಾಲ್‌ ಪಂದ್ಯಗಳ ಬಳಿಕ ಮಾತನಾಡಿ, ನಾನು ಇಷ್ಟು ವರ್ಷ ದೇಶಕ್ಕಾಗಿ ಆಡಿರುವ ಖುಷಿ ಇದೆ. ಒಂದು ಪರಂಪರೆಯ ಭಾಗವಾಗಿರುವ ಖುಷಿ ನನ್ನಲಿದೆ ಎಂದು ತಿಳಿಸಿದ್ದಾರೆ. ನಡಾಲ್‌ 22 ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ. ಇಷ್ಟೇ ಅಲ್ಲದೆ ಟೆನಿಸ್ ಲೋಕದಲ್ಲಿ ಹಲವು ಸಾಧನೆಯನ್ನು ಮಾಡಿದ್ದಾರೆ.

ಬಿರುದುಗಳು, ಅಂಕಿಅಂಶಗಳು ನಮ್ಮ ಬದುಕಿನಲ್ಲಿ ಸಾಕಷ್ಟಿವೆ. ಆದರೆ ನಾನು ಕಂಡ ಕನಸನ್ನು ಸಾಕಾರಗೊಳಿಸಿರುವ ಖುಷಿ ನನ್ನಲಿದೆ ಎಂದು ತಿಳಿಸಿದ್ದಾರೆ.

ವಿಶ್ವ ಟೆನಿಸ್‌ ಲೋಕದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಹೊಂದಿರುವ ಕೀರ್ತಿ ಸರ್ಬಿಯಾದ ನೋವಾಕ್‌ ಜೋಕೊವಿಚ್‌ ಅವರಿಗೆ ಸಲ್ಲುತ್ತದೆ. ಇವರು 24 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿ ರಾಫೆಲ್ ನಡಾಲ್ ಕಾಣುತ್ತಾರೆ. ಇವರು 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಇನ್ನು ಸ್ವಿಸ್ ಪ್ಲೇಯರ್ ರೋಜತ್ ಫೆಡರರ್ ತಮ್ಮ ವೃತ್ತಿಜೀವನದಲ್ಲಿ 20 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದಿದ್ದಾರೆ.

Rafael Nadal Bids Farewell to Tennis After Davis Cup Loss

ರಾಫೆಲ್ ನಡಾಲ್ ಅವರು ತಮ್ಮ ಟೆನಿಸ್ ವೃತ್ತಿ ಜೀವನದಲ್ಲಿ ಒಟ್ಟು 36 ಬಾರಿ ಎಟಿಪಿ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆವೆ ಮಣ್ಣಿನ ರಾಜ ಎಂದೇ ಖ್ಯಾತಿ ಪಡೆದಿದ್ದ ನಡಾಲ್‌ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಒಟ್ಟು 14 ಪ್ರಶಸ್ತಿಗಳನ್ನು ಪಡೆದಿದ್ದಾರೆ. 4 ಬಾರಿ ಯುಎಸ್ ಓಪನ್‌ ಮತ್ತು ವಿಂಬಲ್ಡನ್ ಹಾಗೂ ಆಸ್ಟ್ರೇಲಿಯನ್ ಓಪನ್‌ ಟೂರ್ನಿಗಳನ್ನು ತಲಾ ಎರಡು ಬಾರಿ ಗೆದ್ದು ಬೀಗಿದ್ದಾರೆ.

Story first published: Wednesday, November 20, 2024, 10:08 [IST]
Other articles published on Nov 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+