ಸಹಸ್ರ ಗೆಲುವಿನ ಸರದಾರ ಎನಿಸಿದ ರಫೆಲ್ ನಡಾಲ್: 4ನೇ ಆಟಗಾರನಾಗಿ ಎಲೈಟ್ ಲಿಸ್ಟ್‌ಗೆ ಸೇರ್ಪಡೆ

ಟೆನ್ನಿಸ್‌ನ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಮತ್ತೊಂದು ವಿಶೇಷ ಮೈಲಿಗಲ್ಲನ್ನು ದಾಟಿದ್ದಾರೆ. ರೋಲೆಕ್ಸ್ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಫಿಲಿಸಿಯಾನೋ ಲೂಪೇಸ್ ಅವರನ್ನು 4-6, 7-6(5), 6-4 ಅಂತರದಿಂದ ಸೋಲಿಸುವ ಮೂಲಕ ಟೆನ್ನಿಸ್‌ನಲ್ಲ ಸಾವಿರ ಗೆಲುವನ್ನು ಕಂಡ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಮಾಡಿದ ವಿಶ್ವದ ಕೇವಲ ನಾಲ್ಕನೇ ಟೆನ್ನಿಸ್ ಆಟಗಾರ ಎಂಬ ಖ್ಯಾತಿಗೆ ಭಾಜನರಾಗುವ ಮೂಲಕ ಈ ಎಲೈಟ್ ಪಟ್ಟಿಗೆ ಸೇರಿಕೊಂಡಿದ್ದಾರೆ.
ಓಪನ್ ಟೆನ್ನಿಸ್ ಯುಗದಲ್ಲಿ ಸಾವಿರ ಗೆಲುವಿನ ಸಾಧನೆಯನ್ನು ಈವರೆಗೆ ಕೇವಲ ಮೂವರು ಮಾತ್ರವೇ ಮಾಡಿದ್ದರು. ಅಮೆರಿಕಾದ ಟೆನ್ನಿಸ್ ದಿಗ್ಗಜ ಜಿಮ್ಮಿ ಕಾನ್ನರ್ಸ್(1274 ಗೆಲುವು), ಟೆನ್ನಿಸ್ ಲೋಕದ ಶ್ರೇಷ್ಠ ಆಟಗಾರ ರೋಜರ್ ಫೆಡರರ್(1242 ಗೆಲುವು) ಹಾಗೂ ಇನ್ನೋರ್ವ ಅಮೆರಿಕಾದ ಟೆನ್ನಿಸಿಗ ಇವಾನ್ ಲೆಂಡ್ಲ್ (1068) ಗೆಲುವು ಸಾಧಿಸಿದ ಆಟಗಾರರಾಗಿದ್ದಾರೆ. ಈ ಆಟಗಾರರ ಸಾಲಿಗೆ ರಾಫೆಲ್ ನಡಾಲ್ ಕೂಡ ಸೇರಿಕೊಂಡಿದ್ದಾರೆ.
ಈ ಗೆಲುವಿನ ಬಳಿಕ ರಾಫೆಲ್ ನಡಾಲ್ ಪ್ರತಿಕ್ರಿಯೆ ನೀಡಿದ್ದಾರೆ. ನಡಾಲ್ "ನಕಾರಾತ್ಮಕ ದೃಷ್ಟಿಯಿಂದ ನೋಡುವುದಾದರೆ 1000 ಗೆಲುವುಗಳನ್ನು ಕಾಣಬೇಕಾದರೆ ನೀವು ಸಾಕಷ್ಟು ವಯಸ್ಸಾಗಿರಬೇಕಾಗುತ್ತದೆ. 1000 ಗೆಲುವುಗಳನ್ನು ಕಾಣಲು ನೀವು ಸುದೀರ್ಘ ವೃತ್ತಿ ಜೀವನವನ್ನು ಹೊಂದಿರಬೇಕಾಗುತ್ತದೆ" ಎಂದು ಹೇಳಿದ್ದಾರೆ.
ನಾನು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಹೇಳಲು ಮಾತ್ರ ಸಾಧ್ಯವಿದೆ. ನನಗೆ ಸಹಾಯಮಾಡಿದ ಪ್ರತಿಯೊಬ್ಬರಿಗೂ ಹಾಗೂ ನಾನು ಈ ಸ್ಥಾನದಲ್ಲಿ ಇರಲು ಯಾರೆಲ್ಲಾ ನನಗೆ ಸಹಕಾರವನ್ನು ನೀಡಿದ್ದಾರೋ ಅವರಿಗೆ ನನ್ನ ಧನ್ಯವಾದಗಳು ಎಂದು ರಫೆಲ್ ನಡಾಲ್ ಪ್ರತಿಕ್ರಿಯೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications